ಮುದ್ದೆಬಿಹಾಲ್

ಮತಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಜೆಡಿಎಸ್ ಗೆಲುವು ಖಚಿತ: ಮಾಡಗಿ

ಮತಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಜೆಡಿಎಸ್ ಗೆಲುವು ಖಚಿತ: ಮಾಡಗಿ

ಮುದ್ದೇಬಿಹಾಳ :ಈ ಬಾರಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಜೆಡಿಎಸ್ ಗೆಲುವು ಖಚಿತವಾಗಿದೆ ರಾಜ್ಯದಲ್ಲಿ ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿಯವರ ನೇತೃತ್ವದ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು. 

ಪಟ್ಟಣದ ಹುಡ್ಕೋದಲ್ಲಿ ಜೆಡಿಎಸ್ ಜನಸಂಪರ್ಕ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮತಕ್ಷೇತ್ರದಲ್ಲಿ ಜನತದಾಳವನ್ನು ಕಟ್ಟಿ ಬೆಳೆಸಿದ್ದಲ್ಲದೇ ಶಾಶ್ವತ ನೆಲೆ ಕಾಯ್ದುಕೊಳ್ಳುವಂತೆ ಮಾಡಿದ್ದು ಮಾಜಿ ಸಚಿವರಾದ ದಿ.ಜೆ.ಎಸ್‌.ದೇಶಮುಖ ಹಾಗೂ ದಿ.ವಿಮಲಾಬಾಯಿ ದೇಶಮುಖ ಅವರ ಮನೆತನದಿಂದ ಸಧ್ಯ ಯಾರೇ ಸ್ಪರ್ಧಿಸಿದರೂ ಅದಕ್ಕೆ ನಮ್ಮ ಸಹಮತವಿದ್ದು ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದರು ಜಿಲ್ಲೆಯಲ್ಲಿ ಮುದ್ದೇಬಿಹಾಳ ಗಂಡು ಮೆಟ್ಟಿನ ನಾಡು ಆಗಿದೆ.ದೇಶಮುಖರು ತಾಳಿಕೋಟಿ ಭಾಗಕ್ಕೆ ಬರಗಾಲದ ಸಮಯದಲ್ಲಿ ಮಾಳನೂರು ಕೆರೆಯಿಂದ ನೀರು ತಂದಿದ್ದಾರೆ.ಅಲ್ಲದೇ ತಾಳಿಕೋಟಿ,ಮುದ್ದೇಬಿಹಾಳ ತಾಲೂಕಿಗೆ ಎರಡು ಡಿಪೋ ಮಂಜೂರಿ ಮಾಡಿದವರು ದಿ.ವಿಮಲಾಬಾಯಿ ದೇಶಮುಖ ಅವರು ಎಂದು ಹೇಳಿದರು. 

ಪಕ್ಷಕ್ಕೆ ಬರುವವರಿಗೆ ನಾವು ಸದಾ ಸ್ವಾಗತಿಸುತ್ತೇವೆ.ಮುಖಂಡರಾದ ಶಾಂತಗೌಡ ಪಾಟೀಲ್ ನಡಹಳ್ಳಿ,ಸಿ.ಬಿ.ಅಸ್ಕಿ ಇನ್ನಿತರರು ಯಾರೇ ಇದ್ದರು ಪಕ್ಷಕ್ಕೆ ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ.ಮುಂಬರುವ ಚುನಾವಣೆಯಲ್ಲಿ ಮಂಗಳಾದೇವಿ ಬಿರಾದಾರ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠರ ಮುಂದೆ ಹೇಳಿಕೊಂಡಿದ್ದಾರೆ.ಅದರಂತೆ ಪ್ರಜ್ಞಾವಂತರಾದ ಡಾ.ಸಿ.ಎಸ್‌.ಸೋಲಾಪೂರ ಅವರನ್ನು ಪಕ್ಷದ ಸಂಘಟನೆಗೆ ನೇಮಿಸಲಾಗಿದೆ.ಬರಲಿರುವ ದಿನಗಳಲ್ಲಿ ಅವರಿಗೆ ಪಕ್ಷದ ಮುಖಂಡರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ವಿಶ್ವಾಸ ನಾವು ಹೊಂದಿದ್ದೇವೆ ಎಂದು ಹೇಳಿದರು. 

ಜೆಡಿಎಸ್ ಉಸ್ತುವಾರಿ ಡಾ.ಸಿ.ಎಸ್‌.ಸೋಲಾಪೂರ ಮಾತನಾಡಿ, ಜೆಡಿಎಸ್ ಪಕ್ಷ ಜನಸಾಮಾನ್ಯರ,ಬಡವರ,ರೈತರ ಪಕ್ಷವಾಗಿದೆ.ಬಿಜೆಪಿ,ಕಾಂಗ್ರೆಸ್ ಪಕ್ಷಗಳಿಂದ ಜನರು ಭ್ರಮನಿರಸನಗೊಂಡಿದ್ದು ಮುಂಬರುವ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.ಅಲ್ಲದೇ ಪಕ್ಷದ ವರಿಷ್ಠರು ನನಗೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ ದೇಶಮುಖ,ಮುಖಂಡರಾದ ಸುಭಾಷ ನಾಯಕ,ಬಿ.ಎಸ್‌.ಇಸಾಂಪೂರ,ಶಿವರಾಜ ಗುಂಡಕನಾಳ,ಅರವಿಂದ ಕಾಶಿನಕುಂಟಿ.ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ್,ಮಹೆಬೂಬ ಹಡಲಗೇರಿ,ಮಾಬುಬಿ ಬಾಗವಾನ,ಪ್ರಶಾಂತ ಕಾಳೆ,ಮುತ್ತು ಮಾದಿನಾಳ,ಜಲಾಲ ಮುದ್ನಾಳ,ಶಾರದಾ ಕಾಳಣ್ಣವರ ಮೊದಲಾದವರು ಇದ್ದರು.ಇದೇ ವೇಳೆ ಕಛೇರಿಯಲ್ಲಿ ನಾಡದೇವಿ ಹಾಗೂ ಜನತಾಪಕ್ಷ ಸ್ಥಾಪನೆ ಮಾಡಿದ ಜಯಪ್ರಕಾಶ ನಾರಾಯಣ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.ಅಲ್ಲದೇ ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು. 

*ಹಲವು ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತರಾಗಿ ಪಕ್ಷ ನಿಷ್ಟರಾಗಿ ಪಕ್ಷದ ಏಳಿಗೆಗೆ ಹಾಗೂ ಶಕ್ತಿ ಬಲವರ್ಧನೆಗಾಗಿ ಸಾಕಷ್ಠು ಶ್ರಮಿಸಿದ್ದೇನೆ ಆದರೇ ತಾಲೂಕಿನ ಜೆಡಿಎಸ್ ಅಧ್ಯಕ್ಷರಾಗಲಿ ಅಥವಾ ಇತರೇ ಪದಾಧಿಕಾರಿಗಳಾಗಲಿ ಹಾಗೆ ಚುನಾವಣೆ ಆಕಾಂಕ್ಷಿಯಾಗಿ ಮುದ್ದೇಬಿಹಾಳ ಮತಕ್ಷೇತ್ರದ ಉಸ್ತುವಾರಿ ವಹಿಸಿಕೊಂಡ  ಡಾ.ಸಿ.ಎಸ್‌.ಸೋಲಾಪೂರ ಅವರು ಸಧ್ಯ ಜೆಡಿಎಸ್ ನ ಯಾವ ಕಾರ್ಯಕ್ರಮಗಳಿಗೇ ನನ್ನನ್ನು ಸೇರಿದಂತೆ ಕೆಲವು ಮೂಲ ಕಾರ್ಯಕರ್ತರನ್ನು ಆಹ್ವಾನಿಸದೇ ಕಡೆಗಣಿಸುತ್ತಿದ್ದಾರೆ. 

-ಈರಣ್ಣ ತಾರನಾಳ ಜೆಡಿಎಸ್ ಮುಖಂಡ 


ಸುದ್ದಿ ಓದಿ