ಜೆಡಿಎಸ್‌ನಿಂದ ಯಾವೊಬ್ಬ ಶಾಸಕ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ : ಸರಕಾರದ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ಕಿಡಿ

ಜೆಡಿಎಸ್‌ನಿಂದ ಯಾವೊಬ್ಬ ಶಾಸಕ ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ : ಸರಕಾರದ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ಕಿಡಿ

ಬೆಳಗಾವಿ : ಜೆಡಿಎಸ ಪಕ್ಷದಿಂದ ಯಾವೊಬ್ಬ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್‌ನವರು ಆರು ತಿಂಗಳಿಂದ ಆಪರೇಶನ್ ಹಸ್ತ ಅಂತಾ ಪದೇ ಪದೇ ಹೇಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರು ಬಂದೇ ಬಿಟ್ಟರೂ, ಬರ್ತಾರೆ ಎಂದು ಹೇಳತಾ ಇದ್ದಾರೆ ಆದರೆ ಅದು ನಿಜ ಅಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್‌ವರಿಗೆ ತಿರುಗೇಟು ನೀಡಿದರು. 

    ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬರಲು ೪೦ ಶಾಸರು, ಮುಖಂಡರು ಸಿದ್ದರಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಕಾಂಗ್ರೆಸ್ ಪಕ್ಷದ ಸರ್ಕಾರ ಎಷ್ಟು ದಿನ ಇರೋ ಅಪನಂಬಿಕೆ ಅವರಿಗೆ ಬಂದಿದೆ. ನೀವೆ ನೋಡ್ತಿದ್ದೀರಿ ಕೈ ಶಾಸಕರೇ ತಮ್ಮದೆ ಸರಕಾರದ ವಿರುದ್ದ ಅಸಮಾಧಾನ ಹೊರ ಹಾಕ್ತಿದ್ದಾರೆ ಎಂದು ನುಡಿದರು. 

    ಕಾಂಗ್ರೆಸ್‌ನ ಶಾಸಕರಾದ ಬಿ.ಆರ್.ಪಾಟೀಲ್ ಹೇಳ್ತಿದ್ದಾರೆ ನಾವೇನು ಐದು ಗ್ಯಾರಂಟಿ ಕೇಳಿದ್ವಾ ಅಂತಾ. ಯಾಕೇ ಈ ಪಾಪದ ಹಣದಲ್ಲಿ ಸರ್ಕಾರ ನಡೆಸುತ್ತಿರೀ ಅಂತಾ. ರಾಜು ಕಾಗೆ ಹೇಳ್ತಿದ್ದಾರೆ ಕರೆಂಟ್ ಹಾಕಿಸಿಕೊಳ್ಳು ಆಗ್ತಿಲ್ಲ ಅಂತಾ. ಕಂಪ್ಲೀ ಶಾಸಕ ಗಣೇಶ ಹೇಳ್ತಿದ್ದಾರೆ ಒಂದು ಕಂಬ ಹಾಕಿಸಲು ಆಗ್ತಿಲ್ಲ. ಬಸವರಾಜ್ ರಾಯರೆಡ್ಡಿ ಹೇಳ್ತಿದ್ದಾರೆ ಒಂದು ಕೆಲಸ ಆಗ್ತಿಲ್ಲ ಅಂತಾ. ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ ಎಂದು ನುಡಿದರು. 

    ಇಂತಹ ಬರಗಾಲ ಬಂದಿದೆ. 40 ಲಕ್ಷ ಹೆಕ್ಟೇರ್ 4800 ಕೋಟಿ ನಷ್ಟ ಆಗಿದೆ ಅಂತಾ ಸರ್ಕಾರವೇ ಹೇಳ್ತಿದೆ. ರಾಜ್ಯ ಸರ್ಕಾರದಿಂದ ಒಂದು ರುಪಾಯಿ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಹಣಕೊಟ್ಟು ಕರೆಂಟ್ ಖರೀದಿ ಮಾಡಬೇಕು. ಕಷ್ಟಾ ಬಂದಾಗ ಹಣ ಕೊಟ್ಟು ಕರೆಂಟ್ ಖರೀದಿ ಮಾಡಬೇಕು. ರಾಜ್ಯ ಸರಕಾರಕ್ಕೆ ಒಂದು ರೂಪಾಯಿ ಹಣ ಕ್ರೂಢಿಕರಿಸಲು ಆಗಿಲ್ಲ. ಒಂದ ಕಡೆ ಕರೆಂಟ್ ಇಲ್ಲ, ಅಭಿವೃದ್ಧಿ ಇಲ್ಲ, ಭೀಕರವಾದ ಬರಗಾಲ. ರೈತರು, ಜನರು ಸಾಯಿತಕ್ಕಂತ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಜಿ.ಟಿ.ದೇವೇಗೌಡ ರಾಜ್ಯ ಸರಕಾರದ ವಿರುದ್ದ ಕಿಡಿ ಕಾರಿದರು.  

    ಅದರಂತೆ ಬೆಂಗಳೂರಿನಲ್ಲಿ ಗುತ್ತಿಗೆದಾರನ ಮನೆಯಲ್ಲಿ 40 ಕೋಟಿ ಹಣ ಪತ್ತೆ ಪ್ರಕರಣ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಶಾಸಕ ಜಿ.ಟಿ.ದೇವೇಗೌಡ ಹಿಂದೇಟು ಹಾಕಿದರು. ಹಣ ಸಿಕ್ಕಿರುವುದನ್ನ ನಾನು ನೋಡಿಲ್ಲ. ಅದನ್ನ ನೋಡದೆ ಮಾತನಾಡುವದು ಆಗಲ್ಲ. ಗುತ್ತಿಗೆದಾರರು ಇರಲಿ, ಯಾರೇ ಇರಲಿ. ಅಕ್ರಮವಾಗಿ ಹಣ ಸಂಪಾದಿಸುವವರನ್ನ ಹಿಡಿದು ಹಾಕುತ್ತಿದ್ದಾರೆ. ಅದನ್ನ ಐಟಿಯವರು ತುಂಬಾ ಜೋರಾಗಿ ಮಾಡುತ್ತಿದ್ದಾರೆ ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

    ಈ ದೇಶದಲ್ಲಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆಗಿ ಮುಂದೊರೆಯಬೇಕು. ರಾಜ್ಯದಲ್ಲಿ ಮತ್ತೆ ಜೆಡಿಎಸ್ ಗಟ್ಟಿಯಾಗಿ ಕಟ್ಟಬೇಕು, ಅಧಿಕಾರಕ್ಕೆ ಬರಬೇಕು. ಹೀಗಾಗಿ ಬಿಜೆಪಿ ಜೊತೆಗೆ ಹೊಂದಾಣಕೆ ಮಾಡಿಕೊಂಡಿದ್ದೇವೆ. ನಾವು ಇಲ್ಲಿ ಬಂದಾಗ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಜೆಡಿಎಸ್ ಗಟ್ಟಿಯಾಗಿದೆ. ಪಕ್ಷದ ಜೊತೆಗೆ ಕಾರ್ಯಕರ್ತರು ಇದ್ದಾರೆ ಎಂದು ಶಾಸಕ ಜಿಟಿ ದೇವೇಗೌಡಾ ವಿವರಿಸಿದರು. 



    


ಸುದ್ದಿ ಓದಿ