ಬಳ್ಳಾರಿ

ಅಕ್ಟೋಬರ್ 9ರಿಂದ ಹೊಸಪೇಟೆ ಮಾರ್ಗವಾಗಿ ನೂತನ ರೈಲು ಸಂಚಾರ

ಅಕ್ಟೋಬರ್ 9ರಿಂದ ಹೊಸಪೇಟೆ ಮಾರ್ಗವಾಗಿ ನೂತನ ರೈಲು ಸಂಚಾರ

ಅಕ್ಟೋಬರ್ 07: 9 ರಿಂದ ಹೊಸಪೇಟೆ ಮಾರ್ಗವಾಗಿ ಸಿಕಂದರಾಬಾದ್‌-ವಾಸ್ಕೋ-ಡ-ಗಾಮಾ (ಗೋವಾ)ನಡುವೆ ನೂತನ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸಲಿದ್ದು, ಪ್ರತಿ ಬುಧವಾದ ಮತ್ತು ಶುಕ್ರವಾರ. ಗಾಡಿ ಸಂಖ್ಯೆ : 17039, ಸಿಕಂದರಾಬಾದ್ ನಿಲ್ದಾಣದಿಂದ ಬೆಳಿಗ್ಗೆ 10.00 ಗಂಟೆಗೆ ನಿರ್ಗಮಿಸಿ ಕಾಚಿಗೂಡ, ಜೆಡ್ಚರ‌್ಲ, ಗದ್ವಾಲ್, ಕರ್ನೂಲ್ ಸಿಟಿ, ಧೋನ್, ಗುಂತಕಲ್, ಬಳ್ಳಾರಿ ಮಾರ್ಗವಾಗಿ ಹೊಸಪೇಟೆಗೆ ರಾತ್ರಿ 7.50ಕ್ಕೆ ಆಗಮಿಸುವುದು. ನಂತರ ಕೊಪ್ಪಳ, ಗದಗ, ಹುಬ್ಬಳ್ಳಿಯನ್ನು ರಾತ್ರಿ 10.50ಕ್ಕೆ ತಲುಪಿ ಧಾರವಾಡ, ಲೋಂಡಾ, ಮಡ್‌ಗಾವ್ ಮಾರ್ಗವಾಗಿ ವಾಸ್ಕೋ-ಡ-ಗಾಮಾವನ್ನು ಮರುದಿನ ಮುಂಜಾನೆ 5.45ಕ್ಕೆ ತಲುಪುವುದು.  

ಅದೇ ರೀತಿ ವಾಸ್ಕೋ-ಡ-ಗಾಮಾ ಗಾಡಿ ಸಂಖ್ಯೆ : 17040ದಿಂದ ಪ್ರತಿ ಗುರುವಾರ ಮತ್ತು ಶನಿವಾರದಂದು ಬೆಳಿಗ್ಗೆ 9.00 ಗಂಟೆಗೆ ನಿರ್ಗಮಿಸಿ ಅದೇ ಮಾರ್ಗವಾಗಿ ಹೊಸಪೇಟೆಗೆ ಸಂಜೆ 5.00 ಗಂಟೆಗೆ ಆಗಮಿಸುವುದು, ನಂತರ ಬಳ್ಳಾರಿ, ಗುಂತಕಲ್ ಮಾರ್ಗವಾಗಿ ಮರುದಿನ ಮುಂಜಾನೆ 6.20ಕ್ಕೆ ಸಿಕಂದರಾಬಾದ್ ನಿಲ್ದಾಣವನ್ನು ತಲುಪುವುದು ಎಂದು ದಕ್ಷಿಣ ಮಧ್ಯ ರೈಲ್ವೇಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈವರೆಗೂ ಸಿಕಂರಾಬಾದ್ ಮತ್ತು ಗೋವಾ ನಡುವೆ ನೇರ ಹಾಗೂ ಪ್ರತ್ಯೇಕ ಪ್ರಯಾಣಿಕರ ರೈಲಿನ ವ್ಯವಸ್ಥೆ ಇರಲಿಲ್ಲ.

ಈ ನಗರಗಳು ನಡುವೆ ಸಂಚರಿಸುವ ಪ್ರಯಾಣಿಕರು ಗುಂತಕಲ್ ನಿಲ್ದಾಣದಲ್ಲಿ ರೈಲು ಬದಲಿಸಬೇಕಿತ್ತು, ಈಗ ನೇರ ಸಂಪರ್ಕ ಕಲ್ಪಿಸಿರುವುದರಿಂದ ತೆಲಂಗಾಣ, ಆಂದ್ರ ಪ್ರದೇಶ, ಕರ್ನಾಟಕ, ಹಾಗೂ ಗೋವಾ ರಾಜ್ಯಗಳ ಐತಿಹಾಸಿಕ ನಗರಗಳ ನಡುವೆ ಸಂಪರ್ಕ ಕಲ್ಪಿಸಿರುವುದರಿಂದ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳು ವೃದ್ದಿಯಾಗುತ್ತವೆ. ಜೊತೆಗೆ ಪ್ರಯಾಣಿಕರ ಸಂಚಾರ ಅವಧಿ ಕಡಿಮೆಯಾಗುತ್ತದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ವೈ.ಯಮುನೇಶ್ ಹಾಗೂ ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ. 


ಸುದ್ದಿ ಓದಿ