ರಾಯಬಾಗ

ನಸಲಾಪುರದ ಏಳಾಚಾರ್ಯ ವಿದ್ಯಾನಂದ ಶಿಕ್ಷಣ ಸಂಸ್ಥೆಗೆ ನೂತನ ಆಡಳಿತ ಮಂಡಳಿ ಆಯ್ಕೆ

ನಸಲಾಪುರದ ಏಳಾಚಾರ್ಯ ವಿದ್ಯಾನಂದ ಶಿಕ್ಷಣ ಸಂಸ್ಥೆಗೆ ನೂತನ ಆಡಳಿತ ಮಂಡಳಿ ಆಯ್ಕೆ

ರಾಯಬಾಗ 04 : ತಾಲೂಕಿನ ನಸಲಾಪುರ ಗ್ರಾಮದ ಏಳಾಚಾರ್ಯ ವಿದ್ಯಾನಂದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ಇಂದು ನಡೆಯಿತು. ಸಭೆಯಲ್ಲಿ ಸಂಸ್ಥೆಯ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.  

ಅಧ್ಯಕ್ಷರಾಗಿ ಶಾಂತಿನಾಥ ಗುಂಡಪ್ಪ ಕಾಂತೆ, ಉಪಾಧ್ಯಕ್ಷರಾಗಿ ಬಹುಬಲಿ ಭೂಪಾಲ ಹೊಸೂರೆ ಹಾಗೂ ಕಾರ್ಯದರ್ಶಿಯಾಗಿ ರಮೇಶ್ ಅಡಪ್ಪ ಕಾಗವಾಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ನೂತನ ಪದಾಧಿಕಾರಿಗಳನ್ನು ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಅಭಿನಂದಿಸಿ ಶುಭ ಹಾರೈಸಿದರು.  ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ