ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿ ನೇಕಾರ ಮುಖಂಡ ಆಯ್ಕೆ
ಮಹಾಲಿಂಗಪುರ15 : ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರನ್ನಾಗಿ ಈ ಭಾಗದ ನೇಕಾರ ಮುಖಂಡ ಮಲ್ಲಪ್ಪ ಭಾವಿಕಟ್ಟಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಕಾಶಿನಾಥ್ ಹುಡೇದ್ ತಿಳಿಸಿದ್ದಾರೆ.
ಇವರು ಸುಮಾರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿ ಪಾಲ್ಗೊಂಡು, ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಹೋರಾಡಿದವರಲ್ಲಿ ಇವರೂ ಒಬ್ಬರಾಗಿದ್ದಾರೆ. ಸರಳ, ಸಜ್ಜನ ನೇಕಾರ ಕುಟುಂಬದಲ್ಲಿ ಹುಟ್ಟಿ ಜಾತಿ, ಭೇದ, ಪಕ್ಷಪಾತ ಮರೆತು ನೇಕಾರ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದುಕೊರತೆಯನ್ನರಿತು ಹೋರಾಟ ಮಾಡಿದವರಾಗಿದ್ದನ್ನು ಗಮನಿಸಿ ಪಕ್ಷದ ಜಿಲ್ಲಾ ವರಿಷ್ಠರು ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಮಲ್ಲಪ್ಪ ಭಾವಿಕಟ್ಟಿ ಅವರು ಮಾತನಾಡಿ ಪಕ್ಷಕ್ಕೆ ನಾನು ಮಾಡಿದ ಅಳಿಲು ಸೇವೆಯನ್ನು ಗುರುತಿಸಿ ಮಾಜಿ ಸಚಿವ ಉಮಾಶ್ರೀ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಜಿ ನಂಜಯ್ಯನಮಠ ಹಾಗೂ ತೆರೆಮರೆಯಲ್ಲಿ ನನಗೆ ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ಇನ್ನಿತರೆ ಹಿರಿಯ-ಕಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಧನ್ಯವಾದಗಳು ಎಂದರು.