ಬಳ್ಳಾರಿ

ಮಕ್ಕಳ ಬಗ್ಗೆ ಅಪಾರ ಒಲವಿದ್ದರು ನೆಹರು: ರಪೀಸಾಭ್

ಮಕ್ಕಳ ಬಗ್ಗೆ ಅಪಾರ ಒಲವಿದ್ದರು ನೆಹರು: ರಪೀಸಾಭ್

ಕುಕನೂರ 14: ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ಜವಾಹರಲಾಲ್ ನೆಹರು ರವರ ಜನ್ಮದಿನವನ್ನ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಯುವ ಮುಖಂಡ ರಪೀಸಾಭ್ ಕಲ್ಲಬಂಡಿ ಹೇಳಿದರು.

ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪುಸ್ತಕ ಪೆನ್ ವಿತರಣೆ ಮಾಡಿ ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಜವಾಬ್ದಾರಿ ಪಾಲಕರ ಮೇಲಿದೆ, ಪಾಲಕರು ಉತ್ತಮರಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಕ ಶ್ರೀಶೈಲ್ ಅರಕಲ್ ಮಕ್ಕಳ ದಿನಾಚರಣೆಯ ವೈಭವ ಮತ್ತು ಪ್ರದರ್ಶನದ ನಡುವೆ ನೆಹರೂ ರವರ ಸಂದೇಶವನ್ನ ನಾವು ಮರೆಯಬಾರದು, ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು, ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ ನಾವು ಮಾಡಿದ್ದನ್ನು ಕಲಿಯುತ್ತಾರೆ, ಉತ್ತಮವಾದವುಗಳನ್ನು ಕಲಿಸೋಣ ಉತ್ತಮರನ್ನಾಗಿ ಬೆಳೆಸೋಣ ಎಂದರು.

ನಂತರ ಮಾತನಾಡಿದ ಪೂಜ್ಯ ಡಾ ಮಹಾದೇವ ದೇವರು ಮಕ್ಕಳು ದೇವರಿದ್ದಂತೆ, ಮಕ್ಕಳ ಶಿಕ್ಷಣಕ್ಕೆ ಉಳ್ಳವರು ಸಹಾಯ ಸಹಕಾರ ನೀಡಬೇಕು ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ, ಈ ಕರೋನ ಸಮಯದಲ್ಲಿ ಮನೆಯಲ್ಲಿಯೆ ಉತ್ತಮ ಶಿಕ್ಷಣ ನೀಡಬೇಕು ಎಂದರು. 

ಈ ಸಂದರ್ಭದಲ್ಲಿ ಪಪಂ ಸದಸ್ಯ ಬಸವರಾಜ ಅಡವಿ 100 ಮಕ್ಕಳಿಗೆ ಪುಸ್ತಕ ಪೆನ್ ನೀಡಿದರು.

ಸಂಗಮೇಶ ಕಲ್ಮಠ, ರಪೀಸಾಭ್ ಬಳಗೇರಿ, ಗೋವಿಂದ ಭಜಂತ್ರಿ, ಕಾಶಿಂಸಾಭ್  ಸಂಗಟಿ, ನಾಗರಾಜ ಚರಂತಿಮಠ, ಬಸವರಾಜ ಶೇಡದ, ಈರಪ್ಪ ಕೂಡ್ಲೂರು, ನೀಲಕಂಠಯ್ಯ ಕಾಶಿಮಠ, ಶಿವು ಗಣಚಾರಿ, ಶಿವಪುತ್ರಪ್ಪ ಕತ್ತಿ ಮತ್ತು ಇತರರು ಇದ್ದರು.

ಸುದ್ದಿ ಓದಿ