ಡೆಂಗ್ಯೂ ಜ್ವರ ನಿರ್ಲಕ್ಷಸಿದರೆ ಅಪಾಯ ಕಟ್ಟಿಟ್ಟ ಬುತ್ತಿ : ಲೋಕುರೆ
ಮಹಾಲಿಂಗಪುರ13 : ಇತೀಚಿಗೆ ರಾಜ್ಯವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಮಾರಕ ರೋಗ ಡೆಂಗ್ಯೂ ಮಕ್ಕಳು ಹಿರಿಯರು ಎನ್ನದೆ ಬಿಟ್ಟು ಬಿಡದೆ ಕಾಡುತ್ತಿದೆ. ಇದು ಸೊಳ್ಳೆಯಿಂದ ಹರಡುವ ರೋಗ ಸೊಳ್ಳೆ ಕಡಿದ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ತನ್ನ ಲಕ್ಷಣಗಳನ್ನು ತೋರುತ್ತದೆ. ಇದು ತುಂಬಾ ಅಪಾಯಕಾರಿಯಾಗಿದ್ದು ನಿರ್ಲಕ್ಷಿಸಬೇಡಿ ಎಂದು ಮಳಲಿಯ ಪ್ರಾಥಮಿಕ್ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಕ್ರಾಂತಿ ಲೋಕುರೆ ಹೇಳಿದರು.
ಅವರು ಮುಗಳಖೋಡ ಗ್ರಾಮದ ಪರಮಾನಂದ ದೇವಸ್ಥಾನದ ಸಮೂದಾಯ ಭವನದಲ್ಲಿ ಜಿಲ್ಲಾ ಪಂಚಾಯಿತಿ ಬಾಗಲಕೋಟೆ.ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುಧೋಳ. ಪ್ರಾಥಮಿಕ ಆರೋಗ್ಯ ಕೇಂದ್ರ ಮಳಲಿ ಇವರ ಆಶ್ರಯದಲ್ಲಿ ಆಯೋಜಿಸಿದ ಡೆಂಗ್ಯೂ ಜ್ವರ ವಿರೋಧಿ ಮಾಷಾಚರಣೆ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸೊಳ್ಳೆಗಳು ಬೆಳೆಯದಂತೆ ನೋಡಿಕೊಳ್ಳಿ. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ. ಈಗ ಡೆಂಗ್ಯೂ ಜ್ವರ ಬಂದಾಯಿತು .ಈ ಡೆಂಗ್ಯು ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತೆ .ಡೆಂಗ್ಯೂ ಜ್ವರ ತುಂಬಾ ಅಪಾಯಕಾರಿ .ಇದರ ಸಾಮಾನ್ಯ ಲಕ್ಷಣಗಳಾದ ಮೈ ಕೈ.ನೋವು ಸುಸ್ತಾಗುವದು ಕಂಡು ಬಂದಾಗ ನಿರ್ಲಕ್ಷಿಸಬೇಡಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನೀರೀಕ್ಷೆನಾಧಿಕಾರಿ ಆಯ್. ಎಸ್. ಕೋರಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಸುಗಮಕಾರರಾದ ರುಕ್ಷಾನ ನಾಗಠಾಣ್ ಆರೋಗ್ಯದ ಕುರಿತು ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ವಲಯ ಮೇಲ್ವಿಚಾರಕರಾದ ಮಂಜುನಾಥ . ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುವರ್ಣ ನಂದಿಕೋಲ್ ಮಠ. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ ಅವರು ಉಪಸ್ಥಿತರಿದ್ದರು. ಮಳಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ಸಾರ್ವಜನಿಕರಿಗೆ ಮಾಹಿತಿ ಒದಗಿಸಿದರು.