ಅ.3ರಿಂದ ನವರಾತ್ರಿ ಉತ್ಸವ: ಅ.5ರಂದು ಕೊಪ್ಪಳದ ಗವಿ ಸಿದ್ಧೇಶ್ವರ ಶ್ರೀಗಳು ಮಹಾಲಿಂಗಪುರಕ್ಕೆ
ಮಹಾಲಿಂಗಪುರ 30: ಕೊಪ್ಪಳದ ಗವಿ ಸಿದ್ದೇಶ್ವರ ಸ್ವಾಮಿಗಳು ್ರ್ರಥಮ ಬಾರಿಗೆ ಮಹಾಲಿಂಗಪುರಕ್ಕೆ ಆಗಮಿಸುತ್ತಿದ್ದು ಅ.5 ರ ಶನಿವಾರ ಸಂಜೆ 5 ಗಂಟೆಗೆ ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಜರುಗುವ ನವರಾತ್ರಿ ಪ್ರಯುಕ್ತ ಜರುಗುವ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಅಂದು ಶ್ರೀಗಳು ಸಮಯಕ್ಕೆ ಸರಿಯಾಗಿ ಬಂದು ಆಶೀರ್ವಚನ ನೀಡಿ ಮತ್ತೆ 6 ಗಂಟೆಗೆ ನಿರ್ಗಮಿಸುತ್ತಿರುವ ಕಾರಣ ಭಕ್ತಾಧಿಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು ಶ್ರೀಗಳ ಆಶೀರ್ವಚನ ಆಲಿಸಬೇಕೆಂದು ತಿಳಿಸಿದರು.
ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನವರಾತ್ರಿ ಪ್ರಯುಕ್ತ ನಿರಂತರ 9 ದಿನಗಳವರೆಗೆ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿತ್ಯ ಸಂಜೆ ಸೊಲ್ಲಾಪುರದ ಮೈಂದರಗಿ ಗುರು ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು ಮತ್ತು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳಿಂದ ದೇವಿ ಪುರಾಣ ಪ್ರವಚನ ಜರುಗಲಿದ್ದು. ಅ.3ರ ಬೆಳಿಗ್ಗೆ 8 ಗಂಟೆಗೆ ಸಿದ್ಧಾರೂಢ ಆಶ್ರಮದಿಂದ ಬನಶಂಕರಿ ದೇವಸ್ಥಾನದವರೆಗೆ ಕುಂಭಮೇಳ ಮತ್ತ ಸಕಲ ವಾದ್ಯ ಮೇಳದೊಂದಿಗೆ ದೇವಿ ಮೂರ್ತಿ ಮತ್ತು ದೇವರ ದಾಸಿಮಯ್ಯ ಮೂರ್ತಿ ಮೆರವಣಿಗೆ, 12 ಗಂಟೆಗೆ ನಿರೂಪಾಧೀಶ್ವರ ಶ್ರೀಗಳಿಂದ ದೇವರ ದಾಸಿಮಯ್ಯ ಚರಿತಾಮೃತ ಮತ್ತು ಮೂರ್ತಿ ಪ್ರತಿಷ್ಠಾಪನೆ, ಮಹಾಪ್ರಸಾದ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 4ರಂದು ಸರಿಗಮಪ ಖ್ಯಾತಿಯ ವಿಜಯಪುರದ ಸಾಕ್ಷಿ ಹಿರೇಮಠ ಗಾಯನ ಮತ್ತು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ ಅವರಿಂದ ಧರ್ಮ ಸಂಸ್ಕೃತಿ ದಿಕ್ಸೂಚಿ ಭಾಷಣ, 5ರಂದು ಸಂಜೆ 5ಕ್ಕೆ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀಗಳ ಪ್ರವಚನ,ಮಹನ್ಯಾ ಪಾಟೀಲರ ಗಾಯನ, 6ರಂದು ವಿಕೆ ಡ್ಯಾನ್ಸ್ ಅಕಾಡೆಮಿಯ ಮಕ್ಕಳ ನೃತ್ಯ, 7ರಂದು ಬೀದರಿನ ನವಲಿಂಗ ಪಾಟೀಲರ ಹಾಸ್ಯ, 8ರಂದು ಹೊಸಪೇಟೆಯ ನಾಟ್ಯ ನಾದ ಕಲಾ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, 9ರಂದು ಖ್ಯಾತ ಗಾಯಕ ರವೀಂದ್ರ ಸೋರಗಾವಿ ಮತ್ತು ಸುಷ್ಮಾ ನಂದಗಾಂವರಿಂದ ಸಂಗೀತ, 10ರಂದು ಸರಿಗಮಪ ಖ್ಯಾತಿಯ ದಿಯಾ ಹೆಗಡೆಯವರ ಸಂಗೀತ, 11ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದೆಂದು ಬುಧವಾರ ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಿರಿಯರಾದ ಮಲ್ಲಪ್ಪ ಭಾವಿಕಟ್ಟಿ, ಡಾ.ಬಿ.ಡಿ.ಸೋರಗಾಂವಿ, ಲಕ್ಕಪ್ಪ ಚಮಕೇರಿ,ನಾರಾಯಣ ಕಿರಗಿ, ಜಿ.ಎಸ್.ಗೊಂಬಿ, ಸಿದ್ಧಗಿರೆಪ್ಪ ಕಾಗಿ, ಶ್ರೀಶೈಲ ಬಾಡನವರ, ಗಂಗಪ್ಪ ಕರಡಿ, ಪ್ರಭು ಬೆಳಗಲಿ, ಶಂಕರ ಅಂಬಿ,ಈಶ್ವರ ಚಮಕೇರಿ, ಗುರುಪಾದ ಅಂಬಿ, ಈಶ್ವರ ಮುರಗೋಡ, ಸಿದ್ದಪ್ಪ ನಿಂಬರಗಿ, ಮಹಾದೇವ ಹುಣಶ್ಯಾಳ, ರಾಜು ಭಾವಿಕಟ್ಟಿ, ಚಂದ್ರು ಕಾಗಿ, ರಾಜು ಚಮಕೇರಿ, ಶಿವಾನಂದ ಕಿತ್ತೂರ, ಮಹಾಲಿಂಗ ಹಾವನಹಳ್ಳಿ, ಶಂಕರ ಹಿಕಡಿ, ಮಹಾಲಿಂಗ ಹಿಕಡಿ,ರಮೇಶ ಬಾವಿಕಟ್ಟಿ, ಸುದರ್ಶನ ಹಿಕಡಿ, ಮಂಜು ಬಾವಿಕಟ್ಟಿ ಇತರರಿದ್ದರು.
ಬಿ.ಸಿ.ಪೂಜಾರಿ ನಿರೂಪಿದರು.