ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ :ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು
ಬಳ್ಳಾರಿ 19: ದಾವಣಗೆರೆಯಲ್ಲಿ ಕರ್ನಾಟಕ ಸ್ಫೋಟ್ಸ್ ಅಸೋಷಿಯನ್ಸ್ ಮತ್ತು ಗೋಜಿರಿಯೋ ಕರಾಟೆ ಕೆನ್ರುಕಾನ್ ಇಂಡಿಯಾ, ಇವರು 1ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ದಾವಣಗೆರೆ ನಗರದ ಎ.ಕೆ.ಎಸ್. ಕನ್‌ವೇಕ್ಷನ್ ಹಾಲ್‌ನಲ್ಲಿ ನಡೆಸಿದರು.
ಈ ಸ್ಪರ್ಧೆಯ ಮುಖ್ಯಸ್ಥರಾಗಿ ಹಾನ್ಸಿ ಅನ್ನಪ್ಪ ಮಾರ್ಕಲ್, ಹಾನ್ಸಿ ರಾಜೇಶ್ ಹಗರವಾಲ್ ಇವರು ವಹಿಸಿದ್ದರು, ಈ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಸುಮಾರು 1500 ಕರಾಟೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ನಮ್ಮ ಟ್ರಸ್ಟಿನ 15 ವರ್ಷದ ಒಳಗಿನ ವಿಭಾಗದಲ್ಲಿ ನಂದೀಶ್ ಪಿ.ಎಸ್. ಕಠಾದಲ್ಲಿ ತೃತಿಯ, ತೇಜಸ್ ಪಿ.ಎಸ್. ಕಠಾದಲ್ಲಿ ತೃತಿಯ, ಶಿವಲಿಂಗೇಶ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಪಾಟೀಲ್ ವಿಹಾನ್ ರೆಡ್ಡಿ ಕಠಾದಲ್ಲಿ ತೃತಿಯ, ಪಿಯಾನ್ಸ್ ಜೈನ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ, ಸುಜೇಯ್ ವಿಠಲ್ ಕೆ.ಆರ್. ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ತೃತಿಯ, ಕುಽಽ ಪ್ರಜ್ಞೆ ಎಂ. ಕಠಾದಲ್ಲಿ ತೃತಿಯ, ರೀತೀಶ್ ಬಿ. ಕಠಾದಲ್ಲಿ ತೃತಿಯ, ಶ್ರೇಯಸ್ ಬಿ.ಎಸ್. ಕುಮಟಿಯಲ್ಲಿ ತೃತಿಯ, ವಿಶ್ವಾಸ ಕೆ. ಕಠಾದಲ್ಲಿ ದ್ವಿತಿಯ, ಮಂಜುನಾಥ ಇ. ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ.
15 ವರ್ಷ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಕುಮ್ಮರಿ ಗೌರಿ ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ದ್ವಿತಿಯ, ಹೆಚ್. ಸ್ನೇಹ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತಿಯ.
ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಟ್ರಸ್ಟಿನ ಗೌರವಾಧ್ಯಕ್ಷರಾದ ವಿಕ್ರಮ್ ಮಹಿಪಾಲ್, ಸಂಚಾಲಕರಾದ ಶಬರಿ ರವಿಚಂದ್ರ ಮತ್ತು ತರಬೇತಿದಾರರಾದ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.