ನ.21 ರಿಂದ “ಮಾದರಿ ನೆರೆಹೊರೆ, ಮಾದರಿ ನೆರೆಹೊರೆಯವರ ಹಕ್ಕುಗಳರಾಷ್ಟ್ರೀಯ ಮಟ್ಟದ ಅಭಿಯಾನ

ನ.21 ರಿಂದ “ಮಾದರಿ ನೆರೆಹೊರೆ, ಮಾದರಿ ನೆರೆಹೊರೆಯವರ ಹಕ್ಕುಗಳರಾಷ್ಟ್ರೀಯ ಮಟ್ಟದ ಅಭಿಯಾನ

                 ಬೆಂಗಳೂರು 20 :ಮನುಷ್ಯನು ಒಬ್ಬ ಸಾಮೂಹಿಕ ಜೀವಿಯಾಗಿದ್ದಾನೆ. ಮನುಷ್ಯನನ್ನು ಇತರೆ ಜೀವಿಗಳಿಗಿಂತ ಭಿನ್ನವಾಗಿಸಿರುವುದು ಅವನಲ್ಲಿ ಇರುವ ಈ ಸಾಮಾಜಿಕ ಪ್ರಜ್ಞೆಯಾಗಿದೆ. ತನ್ನ ಜೊತೆಗಿರುವ ಜನರೊಂದಿಗೆ, ಪರಿಸರದೊಂದಿಗೆ, ಇತರೆ ಸಹ ಜೀವಿಗಳೊಂದಿಗೆ ಅವನಿಗೆ ಹಲವಾರು ಹೊಣೆಗಾರಿಕೆಗಳಿವೆ. ಒಟ್ಟಿನಲ್ಲಿ ಎಲ್ಲಾ ಮಾನವರ ಬದುಕಿನ ಅಡಿಪಾಯ ‘ಸಂಬಂಧ. ಸಂಬಂಧಗಳಲ್ಲಿ ಅತ್ಯಂತ ಮಹತ್ವದ ಸಂಬಂಧ ನೆರೆಹೊರೆಯವರ ಸಂಬಂಧವಾಗಿದೆ. ಇದೊಂದು ಅಪೂರ್ವ ಮತ್ತು ಪ್ರಬಲವಾದ ಸಂಬಂಧವಾಗಿದೆ.  ಮಾನವನು ಒಂಟಿಮನೆಯಲ್ಲಿ ಇರುವುದರ ಬದಲುಮಾನವರು ನೆಲೆಸಿರುವಗ್ರಾಮ ಅಥವಾಪಟ್ಟಣಗಳಲ್ಲಿ ನೆಲೆಸುವುದನ್ನು ಇಷ್ಟಪಡುತ್ತಾನೆ. ನೆರೆಕರೆಯವರ ಕುಟುಂಬ ಬೇರೆಯಾಗಿರಬಹುದು, ಅವರ ಭಾಷೆ, ಕುಲ, ಗೋತ್ರ ಮತ್ತುಧರ್ಮಎಲ್ಲವೂ ಪರಸ್ಪರ ಭಿನ್ನವಾಗಿರಬಹುದು; ಆದಾಗಿಯೂ ಕೇವಲ ನೆರೆಕರೆಯ ಸಂಬಂಧವೆನ್ನುವುದು ಬಹಳನಿಕಟಸಂಬಂಧವಾಗಿಬಿಡುತ್ತದೆ. ಈಸಂಬಂಧದಲ್ಲಿ ಬಹಳಅನ್ಯೋನ್ಯತೆ ಮತ್ತು ಪರಸ್ಪರ ವಿಶ್ವಾಸ ಕಂಡುಬರುತ್ತದೆ. ನೆರೆಹೊರೆಯ ಸಂಬಂಧ ಆರೋಗ್ಯಕರವಾಗಿದ್ದರೆ, ಆ ಸಮಾಜವು ಆರೋಗ್ಯಕರವಾಗಿರುವುದು. ನೆರೆ ಹೊರೆಯವರು ಪ್ರೀತಿ-ವಿಶ್ವಾಸ, ಸಹಕಾರ, ಸೌಹಾರ್ಧ ಮನೋಭಾವದಿಂದ ವರ್ತಿಸಿದರೆ ಸಮಾಜದಲ್ಲಿ ಸೌಹಾರ್ದ, ಸಹಕಾರಗಳು ನೆಲೆಗೊಳ್ಳುತ್ತವೆ. ನೆರೆಹೊರೆಯವರೊಂದಿಗೆ ಕೋಪ ದ್ವೇಷದಿಂದ ಇರುವುದೆಂದರೆಆ ಸಮಾಜದಲ್ಲಿ ಎಂದೂ ಶಾಂತಿ, ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೂ ಸಾಧ್ಯವಿಲ್ಲ.   

                      ಇತ್ತೀಚಿನ ದಿನಗಳಲ್ಲಿ ದೊಡ್ಡನಗರಗಳಲ್ಲಿ ಖಾಸಗೀತನಕ್ಕೆ ಸಿಕ್ಕಿರುವ ಅತಿಯಾದ ಮಹತ್ವದ ಕಾರಣದಿಂದಾಗಿ ನೆರೆಹೊರೆಯವರು ಮತ್ತು ಅವರ ಹಕ್ಕುಗಳ ಬಗ್ಗೆ ತೀವ್ರ ನಿರ್ಲಕ್ಷವನ್ನು ತೋರಲಾಗುತ್ತಿದೆ. ಇದರಿಂದ ಈವಿಷಯದಲ್ಲಿ ಜನರ ಮಧ್ಯೆ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವಿದೆ.. ಈ ಸಂಬಂಧ ಭಲಿಷ್ಠವಾಗಬೇಕಾದರೆ ನಮ್ಮ ಮಧ್ಯೆ ಇರುವ ಅಡ್ಡ ಗೋಡೆಗಳನ್ನು ಒಡೆದರೆ ಮಾತ್ರ ಸಾಧ್ಯವಾಗುತ್ತದೆ. ಆದರೆ ಇಂದು ಈ ಮಾನವೀಯ ಸಂಬಂಧಗಳು ನಿಧಾನವಾಗಿ ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಮನುಷ್ಯ ತಾನು, ತನ್ನದು ಎಂಬ ಸಂಕುಚಿತ ಭಾವ ಬೆಳಸಿಕೊಂಡು, ತನ್ನಲ್ಲೇ ಕೇಂದ್ರೀಕೃತನಾಗುತ್ತಿದ್ದಾನೆ.  

                    ಇಸ್ಲಾಮಿನಲ್ಲಿ ನೆರೆಹೊರೆಯವರ ಹಕ್ಕುಗಳಿಗೆ ಬಹಳ ಪ್ರಾಧಾನ್ಯತೆ ಇದೆ .ಪವಿತ್ರ ಕುರ್ ಆನಿನಲ್ಲಿ ಸ್ಪಷ್ಟವಾಗಿ ಹೀಗೆಆದೇಶಿಸಲಾಗಿದೆ. ಆಪ್ತರಾದ ನೆರೆಹೊರೆ ಯವರೊಂದಿಗೂ ಅಪರಿಚಿತ ನೆರೆಹೊರೆಯವ ರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ.( ಅನ್ನಿಸಾ:36) ಪ್ರವಾದಿ ವಚನಗಳಲ್ಲಿ ನೆರೆಹೊರೆಯವರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವುದು ವಿಶ್ವಾಸದ ಕಡ್ಡಾಯ ಭಾಗವಾಗಿದೆ ಎನ್ನಲಾಗಿದೆ . ಖಂಡಿತವಾಗಿಯೂ ಅವನುಸತ್ಯ ವಿಶ್ವಾಸಿಯಲ್ಲ ಎಂದು ಪ್ರವಾದಿ(ಸ)ಮರು ಹೇಳಿದರು. ಆಗ ಯಾರು ಪ್ರವಾದಿವರ್ಯರೇ ?ಎಂದು ಪ್ರಶ್ನಿಸಲಾಯಿತು. ಯಾರ ಕಾರಣದಿಂದಾಗಿ ನೆರೆಹೊರೆಯ ವ್ಯಕ್ತಿಯು ಸುರಕ್ಷಿತನಲ್ಲವೋ ಅಂತಹ ವ್ಯಕ್ತಿಸತ್ಯ ವಿಶ್ವಾಸಿಯಲ್ಲ .ಎಂದು ಅವರು ಉತ್ತರಿಸಿದರು.( ಬುಖಾರಿ)  

                     ಸಮಾಜದ ಮುಂದೆ ನೆರೆಹೊರೆಯವರ ಹಕ್ಕುಗಳ ಅತ್ಯುತ್ತಮ ಮಾದರಿಯನ್ನು ಪ್ರಸ್ತುತ ಪಡಿಸುವುದು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು, ನೆರೆ ಹೊರೆಯವರ ಮಧ್ಯೆ ಇರುವ ಅಂತರವನ್ನು ನೀಗಿಸಿ ಅವರ ಮಧ್ಯೆ ಸೌಹಾರ್ದ ಸಂಬಂಧ ಬೆಳೆಯುವಂತೆ ಮಾಡುವುದು ಹಾಗೂ ದಾರಿಹೋಕರು, ಸಹೋದ್ಯೋಗಿಗಳು, ಪ್ರಯಾಣಿಕರು, ರಸ್ತೆ ಯನಿಯಮಗಳು, ವಾಹನ ಸಂಚಾರದ ನಿಯಮಗಳ ಬಗ್ಗೆ ಕಾಳಜಿ ಉಳ್ಳವರಾಗಿ ಮಾಡುವುದು ಮುಂತಾದ ಮಹೋನ್ನತ ಉದ್ದೇಶಗಳನ್ನು ಮುಂದಿಟ್ಟು ಜಮಾಅತೆ ಇಸ್ಲಾಮೀ ಹಿಂದ್ “ಮಾದರಿ ನೆರೆಹೊರೆ, ಮಾದರಿ ಸಮಾಜ” ಎಂಬ ಶೀರ್ಷಿಕೆ ಅಡಿಯಲ್ಲಿ ನೆರೆಹೊರೆಯವರ ಹಕ್ಕುಗಳರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಈ ತಿಂಗಳು ನವೆಂಬರ್ 21, 2025ರಿಂದ 30ರವರೆಗೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾಸಭೆಗಳು, ಕರ ಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿಯುವಕರ ರ್ಯಾಲಿ ಮುಂತಾದ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಮಾಧ್ಯಮ ಮಿತ್ರರೊಂದಿಗೆ ಕಳಕಳಿಯಿಂದ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. 


ಸುದ್ದಿ ಓದಿ