ರಾಷ್ಟ್ರೀಯ ಸೇವಾ ಯೋಜನಾ ದಿನ
ಮಹಾಲಿಂಗಪುರ24: ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಹಾಗೂ ಡಿ.ಡಿ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನದ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕನ್ನಡ ಪ್ರಾಧ್ಯಾಪಕರಾದ ಡಾ.ಅಶೋಕ ನರೋಡೆ, ಐಕ್ಯೂಎಸಿ ಸಂಯೋಜಕ ಡಾ.ಕೆ.ಎಂ.ಅವರಾದಿ, ಎನ್.ಎಸ್.ಎಸ್ ಅಧಿಕಾರಿ ಅಭಯ ಉಗಾರೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುನಂದಾ ಸೋರಗಾಂವಿ, ಉಪನ್ಯಾಸಕರಾದ ಆರ್.ಎಸ್.ಪೂಜಾರಿ, ಎಸ್.ಎಸ್.ಮುರಾರಿ, ಡಿ.ಎ. ನಾಯಕ, ಶ್ರೀಶೈಲ ವಠಾರೆ ಇದ್ದರು.