ಬ್ಯಾಡಗಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಬ್ಯಾಡಗಿ 28 : ಪೋಲಿಯೋದಿಂದ ವಿಕಲಾಂಗತೆ ಇತರೆ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು. ಹೀಗಾಗಿ ಐದು ವರ್ಷ ತುಂಬಿರುವ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹನಿ ಹಾಕಿಸುವ ಮೂಲಕ ಮಹಾಮಾರಿ ಪೋಲಿಯೋ ಮರಳಿ ಬಾರದಂತೆ ಪೋಷಕರು ಜಾಗ್ರತೆ ಮೂಡಿಸಬೇಕು ಎಂದು ಶಾಸಕ ಬಸವರಾಜ್ ಶಿವಣ್ಣನವರು.ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದವರು ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅಭೂತಪೂರ್ವ ಪೋಲಿಯೋ ಮತ್ತೆ ಕಾಣದಂತೆ ಅಭಿಯಾನ ನಿರಂತರ ನಡೆಯುತ್ತಿದೆ ವಿಶ್ವದ ಎಲ್ಲ ರೋಟರಿ ಕ್ಲಬ್ ಗಳು ಸರ್ಕಾರ ಮತ್ತು ಆರೋಗ್ಯ ಇಲಾಖೆ ಜೊತೆಗೆ ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯ ಬ್ಯಾಡಗಿ ರೋಟರಿ ಕ್ಲಬ್ ಕಳೆದ 17 ವರ್ಷಗಳಿಂದ ಪೊಲೀಯೊ ಲಸಿಕೆ ಬಗ್ಗೆ ಜನಜಾಗೃತಿ ಕಾರ್ಯ ಮಾಡುತ್ತದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಕಾಂತೇಶ್ ಭಜಂತ್ರಿ ಮಾತನಾಡಿ ತಾಲೂಕಿನಲ್ಲಿ ಒಂದು ಮಗುವನ್ನು ಬಿಡದಂತೆ ಪೋಲಿಯೋ ಲಸಿಕೆ ಹಾಕಲು ಅಗತ್ಯ ವ್ಯವಸ್ಥೆ ಮಾಡಲಾಗಿದ್ದು ಪಟ್ಟಣದ ಬಸ್ ನಿಲ್ದಾಣ. ರೈಲ್ವೆ ನಿಲ್ದಾಣ ಹಾಗೂ ಪ್ರತಿ ವಾರ್ಡ್ಗಳಲ್ಲಿಯೂ ಪೋಲಿಯೋ ಹಾಕಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷ ದಾನಪ್ಪ ಚೂರಿ ತಾಲೂಕ ಆಸ್ಪತ್ರೆ ಮಕ್ಕಳ ತಜ್ಞ ಡಾಕ್ಟರ್ ಜಯಕುಮಾರ್ ರೋಟರಿ ಕ್ಲಬ್ ಅಧ್ಯಕ್ಷ ಅನಿಲ್ ಕುಮಾರ್ ದೊಡ್ಡ ಪಾಟಿ ಜಿಲ್ಲಾ ಸಹಾಯಕ ಗೌರ್ನರ್ ಬಸವರಾಜ್ ಸುಂಕಾಪುರ್ ಸದಸ್ಯರಾದ ಕಿರಣ್ ಮಾಳೆನಹಳ್ಳಿ. ಪವಾಡಪ್ಪ ಅಚನೂರ್. ಮಂಜುನಾಥ್ ಉಪ್ಪಾರ. ಮಾಲತೇಶ್ ಅರಳಿಮಟ್ಟಿ. ವಿಶ್ವನಾಥ್ ಅಂಕಲಕೋಟಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರಶಾಂತ್ ನವಲೆ. ಎಂಎಫ್ ಕಬ್ಬಾರ. ಎಂ ಎಸ್ ಅಗಡಿ. ಮಮತಾ ಸೇರಿದಂತೆ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.