ಡಿ. 2ರಿಂದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ: ಎಂ.ಮೃತ್ಯುಂಜಯಸ್ವಾಮಿ
1500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸುವ ನೀರೀಕ್ಷೆ: ಹಲವಾರು ಗಣ್ಯರಿಗೆ ಸನ್ಮಾನ
ಬಳ್ಳಾರಿ 28: ಇಲ್ಲಿನ ಗಾಂಧಿನಗರದ ಶ್ರೀ ಪಂಚಾಕ್ಷರಿ ಕರಾಟೆ ಆರ್ಟ್ ಟ್ರಸ್ಟ್ ಪ್ರಾರಂಭವಾಗಿ 11 ವರ್ಷಗಳಾದ ಪ್ರಯುಕ್ತ ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಡಿ. 2 ಮತ್ತು 3ರಂದು ಸಂಸ್ಥೆಯು 4ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಏರಿ್ಡಸಲಾಗಿದೆ. ಸ್ಪರ್ಧೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳ ಸುಮಾರು 1500ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸುವ ನೀರೀಕ್ಷೆ ಇದೆ ಎಂದು ಟ್ರಸ್ಟ್ನ್ ಅಧ್ಯಕ್ಷ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಪತ್ರಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬರುವ ಕ್ರೀಡಾ ಪಟುಗಳಿಗೆ ಮತ್ತು ತರಬೇತಿದಾರರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿರುತ್ತೇವೆ. ಇಂತಹ ಸ್ಪರ್ಧೆಯನ್ನು ಏರಿ್ಡಸುವ ಮೂಲಕ ಕರಾಟೆ ಪಟುಗಳಿಗೆ ಅವರಲ್ಲಿ ಕರಾಟೆ ಕಲಿಯುವ ಬಗ್ಗೆ ಹೆಚ್ಚಿನ ಪೋತ್ಸಹ ಮೂಡಿಸುವುದಾಗಿದೆ. ಈ ಸ್ಪರ್ಧೆಯಿಂದ ವಿದ್ಯಾರ್ಥಿಗಳ ಸ್ಪರ್ಧಾ ಮನೋಭಾವನೆಯನ್ನು ಹೆಚ್ಚುಸುವುದಾಗಿದೆ. ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ಪ್ರಮಾಣ ಪತ್ರ ಮತ್ತು ವಿಜೇಯ ಕರಾಟೆ ಪಟುಗಳಿಗೆ ಆಕರ್ಷಕವಾದ ಕರಾಟೆ ಶಿಲ್ಡುಗಳನ್ನು ನೀಡಲಾಗುತ್ತದೆ. ನಗರದ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ (ವಿವಿಧ ಕ್ರೀಡೆಗಳ) ಕ್ರೀಡಾ ಪಟುಗಳನ್ನು ಮತ್ತು ಹಲವಾರು ಸಂಘ ಸಂಸ್ಥೆಯ ಯುವ ನಾಯಕರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
2 ದಿನಗಳು ನಡೆಯುವ ಈ ಕರಾಟೆ ಸ್ಪರ್ಧೆಯನ್ನು ಡಿ.2ರಂದು ಬೆಳಿಗ್ಗೆ 10.30ಕ್ಕೆ ಸಚಿವ ಬಿ.ನಾಗೇಂದ್ರ, ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ನಾರಾ ಭರತ್ರೆಡ್ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಳ್ಳಾರಿ ವಿಪ ಸದಸ್ಯ ವೈ.ಎಮ್.ಸತೀಶ್, ಮಾಜಿ ವಿಪ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರ್ಪ, ಮಾಜಿ ಜಪಂ ಸದಸ್ಯ ಅಲ್ಲಂ ಪ್ರಶಾಂತ್, ಮತ್ತು ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷವಾಗಿ ಈ ಸ್ಪರ್ಧೆಯಲ್ಲಿ ಕರಾಟೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಮತ್ತು ಕರಾಟೆಯನ್ನು ಬೆಳಸಿದವರಿಗೆ ರಾಜ್ಯಮಟ್ಟದ ಕರಾಟೆ ರತ್ನ ಪ್ರಶಸ್ತಿಯನ್ನು ನಮ್ಮ ಟ್ರಸ್ಟ್ನ ವತಿಯಿಂದ ನೀಡುತ್ತಿದ್ದು, ಈ ವರ್ಷ ಈ ಪ್ರಶಸ್ತಿಯನ್ನು ಸುಮಾರು 4 ದಶಕಗಳ ಕಾಲ ಕರಾಟೆಗೆ ವಿಶೇಷವಾದ ಸೇವೆಯನ್ನು ಸಲ್ಲಿಸಿ ಸುಮಾರು 100ಕ್ಕೂ ಹೆಚ್ಚು ನುರಿತ ಶಿಕ್ಷಕರನ್ನು ತಯಾರು ಮಾಡಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಇಡೀ ರಾಜ್ಯಕ್ಕೆ ಕರಾಟೆಯಲ್ಲಿ ಹೆಸರಾಗಿರುವ ಹುಬ್ಬಳ್ಳಿಯ ಹನ್ಸಿ ಅನ್ನಪ್ಪ ಮರ್ಕಲ್ರವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು ಪ್ರಾರಂಭದಲ್ಲಿ ನಮ್ಮ ಟ್ರಸ್ಟ್ ಬೆಳೆಯಲು ಕಾರಣೀಭೂತರಾದ ದೈಹಿಕ ಶಿಕ್ಷಕ ದಿ.ಅಮೀದ್ ಬಡಿಗೇರ ಅಣ್ಣಿಗೇರಿ ಇವರ ಸ್ಮರಣರ್ಥವಾಗಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು ರೂ.11000 ನಗದು ಮತ್ತು ನಾಮ ಫಲಕವನ್ನು ಹೊಂದಿರುತ್ತದೆ. ಈ ಪ್ರಶಸ್ತಿಯನ್ನು ರಾಜ್ಯ ಕ್ರೀಡಾ ಸಚಿವ ಬಿ.ನಾಗೇಂದ್ರ ರವರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಡಿ. 3ರಂದು ನಡೆಯುವ 15 ವರ್ಷ ಮೇಲ್ಪಟ್ಟ ಕರಾಟೆ ಸ್ಪರ್ಧೆಯನ್ನು ಮಾಜಿ ಸಚಿವ ಬಿ.ಶ್ರೀರಾಮುಲು, ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗಾಲಿ ಸೋಮಶೇಖರ್ರೆಡ್ಡಿ, ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ.ಮುಖಂಡರಾದ ಗುತ್ತಿಗೆನೂರು ವಿರುಪಾಕ್ಷಗೌಡ್ರು, ಡಾ. ಮಹಿಪಾಲ್ ಮಾಜಿ ಬುಡಾ ಅಧ್ಯಕ್ಷರಾದ ಮಾರುತಿ ಪ್ರಸಾದ್, ಗುರುಲಿಂಗನಗೌಡ್ರು, ರಾಮಲಿಂಗಪ್ಪ ನವರು, ಮ.ಪಾ. ಸದಸ್ಯರಾದ ಮೋತ್ಕಾರ್ ಶ್ರೀನಿವಾಸ್, ವೀರಶೇಖರ್ರೆಡ್ಡಿ, ಗೋವಿಂದರಾಜುಲು ಮುಂತಾದ ಗಣ್ಯರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ್ ಅಧ್ಯಕ್ಷ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ, ಚಾನಾಳ್ ಶೇಖರ್, ಜಿಲ್ಲಾಧ್ಯಕ್ಷರು ಅ.ಭಾ.ವೀ.ಲಿಂ.ಮಹಾಸಭಾ, ಬಳ್ಳಾರಿ, ಶಬರಿ ರವಿಚಂದ್ರನ್, ವಿಕ್ರಮ ಮಹಿಪಾಲ್, ಗಡ್ಡಂ ತಿಮ್ಮಪ್ಪ, ಯಾಳ್ಪಿ ದಿವಾಕರ್, ಶಿವಾನಂದ ರೆಹಮಾತ್ನಾಳ್, ಗೌರಿಶಂಕರ್ಸ್ವಾಮಿ, ಹೆಚ್.ಎಂ.ಕಿರಣ್, ಹೆಚ್.ಎಂ.ಅಮರೇಶ್, ದಮ್ಮೂರು ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.