ರಾಷ್ಟ್ರಮಟ್ಟದ ಜೆಇಇ ಪರೀಕ್ಷೆ: ವಿದ್ಯಾರ್ಥಿ ಆಕಾಶ ರಾ್ಯಂಕ್
ಮಹಾಲಿಂಗಪುರ: ಸಮೀಪದ ಸಂಗಾನಟ್ಟಿ ಗ್ರಾಮದ ನಿವಾಸಿ ಆಕಾಶ ಶಿವಪ್ಪ ಮೆಳವಂಕಿ ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ದೇಶದ 10 ಕಠಿಣ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಪರೀಕ್ಷೆ ಬರೆದ 8.60 ಲಕ್ಷ ವಿದ್ಯಾರ್ಥಿಗಳಲ್ಲಿ ಆಕಾಶ 702ನೇ ರಾ್ಯಂಕ್ ಪಡೆದಿದ್ದಾನೆ. ತಂದೆ ಶಿವಪ್ಪ ಮಹಾಲಿಂಗಪುರದಲ್ಲಿ ಕೆಎಲ್ಇ ಪಪೂ ಕಾಲೇಜ್ನ ಕನ್ನಡ ಉಪನ್ಯಾಸಕ, ತಾಯಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ಮನೆಯಲ್ಲೇ ಸ್ವಂತ ಅಧ್ಯಯನ ಮಾಡಿ, ತಂದೆ ನಡೆಸುವ ಆಕಾಶ ಕೋಚಿಂಗ್ ಸೆಂಟರ್ನಲ್ಲಿ ಮಾಹಿತಿ ಪಡೆದು ಜೆಇಇ ಪರೀಕ್ಷೆಯಲ್ಲಿ ಗಣನೀಯ ರಾ್ಯಂಕ್ ಪಡೆದಿದ್ದಾನೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.94 ಅಂಕ ಪಡೆದಿದ್ದಾನೆ. ಜೆಇಇ ಪರೀಕ್ಷೆ ಬರೆದು ಬಂದ ಮೇಲೆ ಉತ್ತೀರ್ಣನಾಗುವುದು ಅನುಮಾನ ಎಂದಾಗ ಅವರ ತಂದೆ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಕ್ಸಾಸ್ಗೆ ಸೇರಿಸಿ ಬಂದಿದ್ದರು. ನಂತರ ಮೂರೇ ದಿನದಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಜೆಇಇ ಉತ್ತೀರ್ಣನಾದ ಸುದ್ದಿ ಕೇಳಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ನಂತರ ರಾಜಸ್ಥಾನದಲ್ಲಿನ ಕೋಚಿಂಗ್ ತರಗತಿಯನ್ನು ಜೆಇಇ ಅಡ್ವಾನ್ಸ್ ಕೋಚಿಂಗ್ಗೆ ವರ್ಗಾಯಿಸಿ ತರಗತಿಗೆ ಹಾಜರಾಗಿದ್ದಾನೆ.