ಬಳ್ಳಾರಿ

ರಾಷ್ತ್ರೀಯ ಚಾಲುಕ್ಯ ಪ್ರಶಸ್ತಿ ಪ್ರಧಾನ

ರಾಷ್ತ್ರೀಯ ಚಾಲುಕ್ಯ ಪ್ರಶಸ್ತಿ ಪ್ರಧಾನ

ಕೊಟ್ಟೂರು 28 : ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಹಿರಿಯ ಪ್ರತಿಭೆ ಹಾಗೂ ಪತ್ರಕರ್ತರಾದ ಕಲ್ಪತರು ಕಲಾ ಟ್ರಸ್ಟ್‌ನ ಅಧ್ಯಕ್ಷ ಚಿಗಟೇರಿ ಕೊಟ್ರೇಶಿ ಇವರಿಗೆ ಈ ಸಾಲಿನ ರಾಷ್ಟ್ರೀಯ ಚಾಲುಕ್ಯ ಪ್ರಶಸ್ತಿ ಲಭಿಸಿದೆ. 

ಶ್ರೀ ಸುಜ್ಞಾನ ವಿದ್ಯಾಪೀಠ ಹಾಗೂ ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ) ಕರ್ನಾಟಕ ಕಡಲಬಾಳು ಹಗರಿಬೊಮ್ಮನಹಳ್ಳಿ ತಾಲ್ಲೂಕು ವಿಜಯನಗರ ಜಿಲ್ಲೆ ಇವರಿಂದ ಚಾಲುಕ್ಯ ರತ್ನ ಹಾಗೂ ಬಾದಮಿ ಜಾನಪದ ಸಂಭ್ರಮ ಕಾರ್ಯಕ್ರಮ ಕನ್ನಡ ಸಾಹಿತ್ಯ ಭವನ ಹೊಸಗೌಡ್ರು ಶಾಲೆ  ಅವರಣ ಬಾದಾಮಿಯಲ್ಲಿ  ನೆಡೆದ ಕಾರ್ಯಕ್ರಮದಲ್ಲಿ ಕೊಟ್ಟೂರಿನ ಪ್ರತಿಭೆ, ಪತ್ರಕರ್ತರಾದ ಚಿಗಟೇರಿ ಕೊಟ್ರೇಶಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಶ್ರೀಯುತರು ಸಾಹಿತ್ಯ, ಸಂಸ್ಕೃತಿ, ರಂಗಭೂಮಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.  ಪ್ರಶಸ್ತಿ ಪ್ರಧಾನ ಮಾಡುವ ಸಂದರ್ಭದಲ್ಲಿ, ಲೇಖಕರಾದ ಮೆಣಸಿನಕಾಯಿ ಸುಜ್ಞಾನ ವಿದ್ಯಾಪೀಠದ ಅಧ್ಯಕ್ಷ ತಂಬ್ರಳ್ಳಿ ನಾಗರಾಜ್, ರವಿ ತಿರಕಣ್ಣನವರ, ವೀರಯ್ಯ ಸ್ವಾಮಿಗಳು ಸಿದ್ದರಾಮ ಶಿವಯೋಗಿಶ್ವರಮಠ, ಡಾ. ಅವಧೂತ ಸ್ವಾಮಿಜೀ, ಕಲಾವಿದ ಜ್ಯೂನಿಯರ್ ರವಿಚಂದನ್, ಚಿನ್ನು ಕೊಪ್ಪಳ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

ರಾಷ್ಟ್ರೀಯ ಚಾಲುಕ್ಯ ಪ್ರಶಸ್ತಿ ಭಾಜನರಾದ ಶ್ರೀಯುತ ಚಿಗಟೇರಿ ಕೊಟ್ರೇಶಿ ಇವರನ್ನು ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಚಾರ್ಯ ಮಹಾಸ್ವಾಮಿಗಳು ಅಭಿನಂದಿಸಿ ಆರ್ಶಿವದಿಸಿದ್ದಾರೆ.  ಕಳೆದ ತಿಂಗಳು ನಮ್ಮ ಮಠದ ಆಶ್ರಯದಲ್ಲಿ ತೇರುಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ  ನಡೆದ 9 ದಿನಗಳ ಕಾರ್ಯಕ್ರಮದಲ್ಲಿ, ಪ್ರಶಸ್ತಿ ಲಭಿಸಿರುವ ಶ್ರಿಯುತ ಚಿಗಟೇರಿ ಕೊಟ್ರೇಶಿ ಇವರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಕಾರ್ಯಕ್ರಮ ನೆಡೆಯಲು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು ಎಂದು ತಿಳಿಸಿದರು. 


ಸುದ್ದಿ ಓದಿ