ಬಳ್ಳಾರಿ

ಪುರುಷೋತ್ತಮ ಹಂದ್ಯಾಳ್ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ

ಪುರುಷೋತ್ತಮ ಹಂದ್ಯಾಳ್ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ

ಬಳ್ಳಾರಿ, ಸೆ. 25: ನಗರದ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರು ಪ್ರದಾನ ಮಾಡಿದರು.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ  ಜೀವಮಾನ ಸಾಧನೆಗಾಗಿ ಹಿರಿಯ ನಟ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು. 

 ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಪ್ರೊ. ಎಲ್‌.ಎನ್‌. ಮುಕುಂದರಾಜ್, ಹಿರಿಯ ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಕೆ. ಎಂ. ವಸುಂಧರಾ ಹಾಗೂ ರಿಜಿಸ್ಟ್ರಾರ್ ನೀಲಮ್ಮ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್ ಮಾಸ್ತರ  ಮತ್ತಿತರರು ಉಪಸ್ಥಿತರಿದ್ದರು.

ಅಭಿನಂದನೆ: ಪುರುಷೋತ್ತಮ ಹಂದ್ಯಾಳು ಅವರ ಕುಟುಂಬ ಸದಸ್ಯರು,  ಆತ್ಮೀಯರು, ಹಿತೈಷಿಗಳು ಬಳ್ಳಾರಿ ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ತೆರಳಿ ಶುಭ ಕೋರಿದರು.ಪತ್ರಕರ್ತ ಕೊಪ್ಪಳದ ಶ್ರೀಕಾಂತ್ ಅಕ್ಕಿ,  ಖಜಾನೆ ಇಲಾಖೆ ಪಿ.ಅಲ್ಲಾಭಕಷ್ ಭಿಮನೇನಿ ಪ್ರಸಾದ್ ಸೋಮು, ಮಂಜುನಾಥ್ ಶರ್ಮ ವೃಶಾಂಕ ಅಪ್ಟಿಕಲ್ಸ, ಹಿರಿಯ ಛಾಯಾಗ್ರಾಹಕರಾದ ವಿರುಪಾಕ್ಷಯ್ಯ, ಮತ್ತಿತರರು ಅಭಿನಂದಿಸಿ ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದ ಹಂದ್ಯಾಳು ಅವರಿಗೆ ಮತ್ತಷ್ಟು ಗೌರವ ಪುರಸ್ಕಾರಗಳು ಲಭಿಸಲಿ ಎಂದು ಶುಭ ಹಾರೈಸಿದರು. 


ಸುದ್ದಿ ಓದಿ