ಬಾಪು ಕನಸು ನನಸು ಮಾಡಿದ್ದು ನರೇಂದ್ರ ಮೋದಿ : ನೇಮರಾಜ್ ನಾಯ್ಕ್
ಹಗರಿಬೊಮ್ಮನಹಳ್ಳಿ..24 : ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮಹಾತ್ಮ ಗಾಂಧಿಜೀ ಅವರು ನೀಡಿದ ಕರೆಯನ್ನು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ನನಸು ಮಾಡುತ್ತಿದ್ದಾರೆ ಅದರ ಜೊತೆ ಇಡೀ ನಗರವನ್ನು ಸ್ವಚ್ಛ ಸುಂದರವಾಗಿಡುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ ಪೌರ ಕಾರ್ಮಿಕರನ್ನು ಗುರುತಿಸಿದ್ದು ನಮ್ಮ ಬಿಜೆಪಿ ಪಕ್ಷ ಎಂದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಮಾಜಿ ಸದಸ್ಯ ಲಕ್ಷ್ಮಣ ಕಲಾಲ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಜವಾದ ಶ್ರಮಜೀವಿಗಳೆಂದರೆ ಅದು ಪೌರಕಾರ್ಮಿಕರಾಗಿದ್ದಾರೆ,ನಮ್ಮ ದೇಶದ ಪ್ರಧಾನ ಮಂತ್ರಿಗಳು ಸ್ವಚ್ಛ ಭಾರತದ ಜೊತೆ ಪೌರಕಾರ್ಮಿಕರ ಪಾದಗಳನ್ನು ತೊಳೆದದ್ದು ವಿಶ್ವಾಧ್ಯಂತ ಶ್ಲಾಘನೀಯವಾಗಿದೆ, ಮನೆಯ ಬಳಿ ಒಂದು ನಾಯಿ ಸತ್ತಿದ್ದರೆ ಅದನ್ನು ರವಾನಿಸಲು ಪೌರಕರ್ಮಿಕರು ಬೇಕು ಕೇವಲ ನಮ್ಮ ಅವಶ್ಯಕತೆಗಳನ್ನು ಮತ್ತು ನಮ್ಮ ಮನೆಗಳ ಸುತ್ತ ಮುತ್ತಲಿನ ಚರಂಡಿಗಳಲ್ಲಿ ಗಲೀಜು ಸ್ವಚ್ಛಗೊಳಿಸುವಂತಹ ಕಾರ್ಯಕ್ಕಷ್ಟೆ ಅವರು ಸೀಮಿತ ಎಂಬ ಕೀಳು ಮನೋಭಾವನೆಯನ್ನು ಇಂದು ನಮ್ಮ ಪ್ರಧಾನಿ ಕಳಚಿದ್ದಾರೆ ಅವರಿದ್ದರೆ ಮತ್ರ ನಮ್ಮ ಗ್ರಾಮ, ಊರು,ನಗರಗಳು ಸ್ವಚ್ಛವಾಗಿರುತ್ತವೆ ಎಂದು ಪೌರಕಾರ್ಮಿಕರ ಪಾದಗಳನ್ನು ತೊಳೆದು ಅವರಿಗೆ ಗೌಋವ ಸಮರೆ್ಣ ಮಾಡಿದ್ದರೆ, ಇಷ್ಟು ವರ್ಷ ಆಡಳೀತ ನಡೆಸಿದ ಪಕ್ಷಗಳು ಪೌರಕಾರ್ಮಿಕರನ್ನು ಗುರುತಿಸುವ ಕೆಲಸ ಮಡಿಲ್ಲ, ಅವರ ಬಗ್ಗೆ ಕಳಕಳಿ ಎಂಬುದು ದಊರದ ಮಾತಾಗಿತ್ತು, ಇವರನ್ನು ಮುನ್ನೆಲೆಗೆ ತರಲು ಬಿಜೆಪಿ ಪಕ್ಷ ಬರಬೇಕಾಯಿತು, ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿ ಅವರ ಕುಟುಂಬಕ್ಕೆ ಶಕ್ತಿ ನೀಡುವ ಕೆಲಸ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಅಂತಹ ವ್ಯಕ್ತಿಗಳಿಗೆ ಇಂದು ಸನ್ಮಾನ ಮಾಡಲು ಮುಂದಗಿರುವ ಮಾಜಿ ಪುರಸಭೆ ಸದಸ್ಯ ಕಲಾಲ್ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಲಕ್ಷಣ ಕಲಾಲ್ ಮಾತನಾಡಿ ಪೌರ ಕಾರ್ಮಿಕರು ನಿಜವಾದ ನಾಯಕರಾಗಿದ್ದಾರೆ, ಇಂದು ಗ್ರಾಮೀಣ ಭಾಗಗಳಿಂದ ಪ್ರಾರಂಭಿಸಿ ನಗರಗಳನ್ನು ಸ್ವಚ್ಛ ಸುಂದರವಾಗಿಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಅವರುಗಳನ್ನು ಇಂದು ಸನ್ಮಾನ ಮಾಡುತ್ತಿರುದು ಸಂತಸದ ವಿಷಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಜೋಗಿ ಹನುಮಂತ, ವೀರೇಶ್, ನವೀನ್ ಕುಮಾರ್, ದೀಪಕ್ ಕಠಾರೆ, ನಾಮನಿರ್ದೇಶಿತ ಸದಸ್ಯರಾದ ಚಿತವಾಡ್ಗಿ ಪ್ರಕಾಶ್, ಮುಖಂಡರಾದ ಕಿನ್ನಾಳ ಸುಭಾಸ್, ಸರ್ದಾರ ಯಮನೂರು, ರಾಜಲಿಂಗಪ್ಪ, ಈಡಿಗರ ಭರತ್, ಬಣಕಾರ ಬಸವರಾಜ, ಬಾಷಾ ಸೇರಿದಂತೆ ಇನ್ನಿತರರು ಇದ್ದರು.