ಮಹಲಿಂಗಪುರ

ಭಾರತ ವಿಶ್ವಗುರು ಮಾಡುವತ್ತ ಮೋದಿ ಹೆಜ್ಜೆ: ಹಳ್ಳಿ

ಭಾರತ ವಿಶ್ವಗುರು ಮಾಡುವತ್ತ ಮೋದಿ ಹೆಜ್ಜೆ: ಹಳ್ಳಿ
ಮಹಾಲಿಂಗಪುರ; ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇಯ ಹುಟ್ಟು ಹಬ್ಬದ ನಿಮಿತ್ಯ ಬಿಜೆ

ಮಹಾಲಿಂಗಪುರ18 : ಶತಕೋಟಿ ಭಾರತೀಯರ ಆಶಾಕಿರಣ ಮತ್ತು ಭಾರತ ದೇಶವನ್ನು ವಿಶ್ವಗುರು ಮಾಡುವತ್ತ ಹೆಜ್ಜೆ ಇಟ್ಟಿರುವ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಎಂದು ಪಟ್ಟಣದ ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ ಹೇಳಿದರು. 

ಶುಕ್ರವಾರ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅಭಿಮಾನಿಗ¼ ಆಶ್ರಯದಲ್ಲಿ ನರೇಂದ್ರ ಮೋದಿಜೀಯವರ ಜನ್ಮದಿನದ ಅಂಗವಾಗಿ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು,ಹಣ್ಣು, ಬ್ರೇಡ್ ವಿತರಣೆ ಮಾಡಿ ಮಾತನಾಡಿದÀರು.

ಪ್ರಧಾನಿ ಮೋದಿಯವರು ಸ್ವಚ್ಚ ಭಾರತ ಅಭಿಯಾನದ ರೂವಾರಿ, ಇವರು ದೇಶದ ಚುಕ್ಕಾಣಿ ಹಿಡಿದು ಏಳು ವμರ್À ಕಳೆದಿವೆ, ಕೊರೋನಾ ಮಹಾಮಾರಿಯಂತಹ ಅನೇಕ ಸವಾಲು ಹಾಗೂ ಬಿಕ್ಕಟ್ಟುಗಳ ನಡುವೆಯೂ ದೇಶವನ್ನು ಪ್ರಗತಿಯತ್ತ ಮುನ್ನಡೆಸಿ ಅವರು ಅಪ್ರತಿಮ ನಾಯಕರಾಗಿದ್ದಾರೆ. ದೇಶವಿದೇಶಗಳಲ್ಲೂ ಭಾರತೀಯರ ಕೀರ್ತಿ ಶಿಖರಕ್ಕೇರಿಸುವ ಮೂಲಕ ವಿಶ್ವಗುರುವನ್ನಾಗಿಸಿ ಇಡೀ ಜಗತ್ತೇ ದೇಶದತ್ತ ತಿರುಗಿ ನೋಡುವಂತೆ ಮಾಡಿರುವ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಾಗಿದ್ದಾರೆ ಎಂದರು.

ನಂತರ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ನಾಡಿನ ಸಮಸ್ಯ ಜನರ ಅಭಿವೃಧ್ದಿಗೆ ಹಗಲಿರುಳು ಶ್ರಮಿಸುತ್ತಿರುವ ಇಂಥ ನಿಷ್ಠಾವಂತ ರಾಜಕಾರಣಿಗಳಿಂದ ಮಾತ್ರ ದೇಶದ ಅಭಿವೃದಿ ಸಾಧ್ಯ ಎಂದರು. 

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಹ್ಲಾದ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ, ಚನಬಸು ಯರಗಟ್ಟಿ, ರವಿ ಜವಳಗಿ ಮತ್ತು ಮುಖಂಡರಾದ ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗ ಮುದ್ದಾಪೂರ, ಶಂಕರಗೌಡ ಪಾಟೀಲ,ವಿಕ್ರಂ ಕುಳ್ಳೂರ, ಮಹೇಶ ಚಿಂಚಲಿ, ಡಾ ಬಸವರಾಜ ಅಂಬಿ ಸೇರಿದಂತೆ ಹಲವರು ಇದ್ದರು. 

ಸುದ್ದಿ ಓದಿ