ಹಗರಿಬೊಮ್ಮನಹಳ್ಳಿ

ನರೇಗಾ ಕೂಲಿ ಕಾರ್ಮಿಕ ಹೃದಯಾಘಾತದಿಂದ ಸಾವು

ನರೇಗಾ ಕೂಲಿ ಕಾರ್ಮಿಕ ಹೃದಯಾಘಾತದಿಂದ ಸಾವು

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 15: ತಾಲೂಕಿನ ಮಾಲವಿ ಗ್ರಾಮದ ನಿವಾಸಿ ಹೊಳಗುಂದಿ ಈರಣ್ಣ (56) ಮಾಲವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲವಿ ಜಲಾಶಯದಲ್ಲಿ ಹೂಳೆತ್ತುವ ಕಾರ್ಯ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡ ಪರಿಣಾಮ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತರಾಗಿದ್ದಾರೆ, ನರೇಗಾ ಕಾಮಗಾರಿ ಮಾಡುತ್ತಿರುವಾಗ ಹೃದಯಾಘಾತವಾಗಿದ್ದು ಪರಿಹಾರವನ್ನು ಸೂಕ್ತ ದಾಖಲಾತಿಗಳ ಪರೀಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಿ 2ಲಕ್ಷ ಪರಿಹಾರ ನೀಡಲಾಗುವುದು ಎಂದು ಪ್ರಭಾರಿ ಇಒ ರಮೇಶ್ ಮಹಲಿಂಗಾಪುರ ಆಸ್ಪತ್ರೆಗೆ ಭೇಟಿ ನೀಡಿದಾಗ ತಿಳಿಸಿದರು. 


ಸುದ್ದಿ ಓದಿ