ಪಿಯು ಪರೀಕ್ಷೆಯಲ್ಲಿ ನಂದನ್ ಮಲ್ಲಾಪುರ ರಾಜ್ಯಕ್ಕೆ 8ನೇ ರ್ಯಾಂಕ್
ಕೆಸರಿನಲ್ಲಿ ಅರಳಿದ ಕಮಲ ನಂದನ್ಗೆ ವೈದ್ಯನಾಗುವ ಆಸೆ
*ಹನಮಂತ ನಾವಿ
ಮಹಾಲಿಂಗಪುರ 11 : ಅಪ್ಪನಿಲ್ಲ , ಅಮ್ಮ ಅವರಿವರ ಮನೆಯಲ್ಲಿ ಚಪಾತಿ ಮಾಡಿ ಜೀವನ ನಡೆಸುತ್ತಿರುವ ಜ್ಯೋತಿ ಮಲ್ಲಾಪುರ ಇವರ ಪುತ್ರ ಸ್ಥಳೀಯ ಬುದ್ನಿ ಪಿಡಿ ನಿವಾಸಿ ನಂದನ್ ಮಲ್ಲಾಪುರ ಪಿಯುಸಿ ವಿಜ್ಞಾನ ವಿಭಾಗದಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 9 ನೇ ರ್ಯಾಂಕ್ಗಳಿಸಿ ಸಾಧನೆ ಮಾಡಿ ಸಾಧನೆಗೆ ಬಡತನ ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ್ದಾನೆ.
ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಇವನ ಪ್ರತಿಭೆ ಹಾಗೂ ಬಡತನ ಕಂಡು ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯು ಎಲ್ಕೆಜಿ ಯಿಂದ 10 ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಿತ್ತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರಾ್ಯಂಕ್ ಪಡೆದು ಸಂಸ್ಥೆಯವರ ಭರವಸೆ ಈಡೇರಿಸಿದ್ದ ನಂದನ್ನ್ನು ಜಮಖಂಡಿಯ ತುಂಗಳ ಸೈನ್ಸ್ ಪಿಯು ಕಾಲೇಜು ಸಹ ದತ್ತು ಪಡೆದು ಉಚಿತ ಶಿಕ್ಷಣ, ವಸತಿ, ಊಟ ನೀಡಿದ್ದನ್ನು ಸಾರ್ಥಕ ಮಾಡಿದ ನಂದನ್ ಇದೀಗ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ರಾ್ಯಂಕ್ ನೊಂದಿಗೆ, ಬಾಗಲಕೋಟೆ ಜಿಲ್ಲೆಗೆ ದ್ವಿತೀಯ, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕಾಲೇಜು ಮತ್ತು ಹೆತ್ತವರ ಕೀರ್ತಿ ರಾಜ್ಯಾದ್ಯಂತ ಹರಡಿದ್ದಾನೆ. ಗಣಿತ, ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ತಲಾ 100 ಅಂಕ, ರಸಾಯನ ಶಾಸ್ತ್ರ ಮತ್ತು ಹಿಂದಿಯಲ್ಲಿ ತಲಾ 98, ಇಂಗ್ಲೀಷ್ನಲ್ಲಿ 94 ಅಂಕ ಗಳಿಸಿದ್ದಾನೆ.
ನಂದನ್ ತುಂಬಾ ಪ್ರತಿಭಾವಂತನಿದ್ದು ಅವನನ್ನು ದತ್ತು ಪಡೆದು ಶಿಕ್ಷಣ ನೀಡಿದ್ದು ಸಾರ್ಥಕವಾಯಿತು. ಅವನಿಗೆ ಮೆಡಿಕಲ್ ಸಿಗುವುದು ಖಂಡಿತ, ಮೆಡಿಕಲ್ ಸಿಕ್ಕಲ್ಲಿ ಅವನ ಮೆಡಿಕಲ್ ಖರ್ಚನ್ನು ನಮ್ಮ ಸಂಸ್ಥೆಯ ವತಿಯಿಂದ ಭರಿಸುತ್ತೇವೆ.
ವಿಜಯ ಕುಲಕರ್ಣಿ,
ತುಂಗಳ ಪಿಯು ಕಾಲೇಜು.
ನಂದನ್ ಚುರುಕುತನ ಹಾಗೂ ಮನೆಯ ಪರಿಸ್ಥಿತಿ ಕಂಡು ನಮ್ಮ ಸಂಸ್ಥೆಯಿಂದ ಎಲ್ಕೆಜಿಯಿಂದ 10 ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಿದ್ದು ಸಾರ್ಥಕವಾಯಿತು, ಈಗ ಪಿಯುನಲ್ಲಿ 9 ರಾ್ಯಂಕ್ ಗಳಿಸಿದ್ದು ಹಾಗೂ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ 4 ನೇ ರಾ್ಯಂಕ್ ಗಳಿಸಿದ್ದು ಸ್ಮರಣೀಯ.
ಶಿವಾನಂದ ತಿಪ್ಪಾ,
ಉಪಾಧ್ಯಕ್ಷ ನವಚೇತನ ಶಿಕ್ಷಣ ಸಂಸ್ಥೆ, ಮಹಾಲಿಂಗಪುರ.
ನಮ್ಮ ಮಗುವಿಗೆ ಉಚಿತ ಶಿಕ್ಷಣ ನೀಡಿದ ತುಂಗಳ ಕಾಲೇಜಿನ ಅಶೋಕ ತುಂಗಳ, ಲಕ್ಷಿ?? ತುಂಗಳ, ಪ್ರಾಂಶುಪಾಲ ಆರ್.ಜಿ.ಜಾಗೀರದಾರ ಮತ್ತು ವಿಜಯ ಕುಲಕರ್ಣಿ ಮತ್ತು ಮಹಾಲಿಂಗಪುರದ ಜೆಸಿ ಶಾಲೆಗೆ ನಾವು ಚಿರಋಣಿ.
ನಾಗವೇಣಿ, ಸಾಧಕ ನಂದನ್ ತಾಯಿ.
ನಾನು ವೈದ್ಯನಾಗಿ ಬಡವರ ಸೇವೆ ಮಾಡಬೇಕೆಂಬಾಸೆ ಇದೆ .
ಸಾಧಕ ನಂದನ್