ಮಹಲಿಂಗಪುರ

ನಂದಗಾಂವ: ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ

ನಂದಗಾಂವ: ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ

ಮಹಾಲಿಂಗಪುರ 11: ಪಿಕೆಪಿಎಸ್ ಲಾಭದಲ್ಲಿ ಮುಂದೆವರೆಯಬೇಕಾದರೆ ರೈತರಿಗೆ ಬಡ್ಡಿ ರಹಿತ ಸಾಲದ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಬಿನ್ ಶೇತ್ಕಿ ಸಾಲವನ್ನೂ ನೀಡಬೇಕು ಎಂದು ಮಾಜಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್ ಆರ್‌. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. 

ರೈತರ ಆರ್ಥಿಕ ಅಭಿವೃದ್ಧಿಗೆ ಪ್ರಾಥಮಿಕ ಹಂತದಲ್ಲಿಯೇ ಪಿಕೆಪಿಎಸ್ ಶ್ರಮ ವಹಿಸಿ ಕೆಲಸ ಮಾಡುವ ಅಗತ್ಯವಿದೆ ಎಂದು ಮಾಜಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್ ಆರ್‌. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಶನಿವಾರ ಮಧ್ಯಾಹ್ನ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾಂವ ಗ್ರಾಮದಲ್ಲಿ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಬಡ್ಡಿ ರಹಿತ ಸಾಲದ ಜೊತೆಯಲ್ಲಿ ಬಿನ್ ಶೇತ್ಕಿ ಸಾಲವನ್ನೂ ಹೆಚ್ಚೆಚ್ಚಿಗೆ ನೀಡಬೇಕು ಆಗ ಸಂಸ್ಥೆ ಲಾಭ ಗಳಿಸುತ್ತದೆ. ಅಲ್ಲದೆ ಶೇರುದಾರರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳ ಜೊತೆಗಿನ ಸಂಬಂಧ ಸಹ ಪಾರದರ್ಶಕವಾಗಿರಬೇಕು ಎಂದರು. 

ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶಿದ್ದು ಕೊಣ್ಣೂರ ಮಾತನಾಡಿ, ನಂದಗಾಂವ ಘಟಪ್ರಭೆ ತೀರದ ಸಮೃದ್ಧ ಗ್ರಾಮವಾಗಿ ಆರ್ಥಿಕ ಸಬಲತೆ ಎಡೆಗೆ ಸಾಗುತ್ತಿದೆ. ಸ್ಥಳೀಯ ಮತ್ತು ಆಸುಪಾಸಿನಲ್ಲಿರುವ ರೈತ ಬಂಧುಗಳ ಬಹು ದಿನಗಳ ನೂತನ ಕಟ್ಟಡದ ಕನಸ್ಸಾಗಿತ್ತು. ಈಗ ರಾಜಕೀಯ ಹಿರಿಯರಾದ ಎಸ್ ಆರ್‌. ಪಾಟೀಲ್ ಅವರ ಸಹಕಾರ ಅಡಿ ಪಿಕೆಪಿಎಸ್ ನೂತನ ಕಟ್ಟಡ ಸಾಕಾರಗೊಂಡಿದೆ. ಕಾಲ ಕಾಲಕ್ಕೆ ಉತ್ತಮ ನಿರ್ವಹಣೆಯೊಂದಿಗೆ ಕಟ್ಟಡ ಬಗ್ಗೆ ಕಾಳಜಿ ವಹಿಸಬೇಕು ಎಂದರು. 

ಈ ಸಮಯದಲ್ಲಿ ರನ್ನ ಶುಗರ್ಸ್‌ ಮಾಜಿ ಅಧ್ಯಕ್ಷರಾದ ರಾಮಣ್ಣ ತಳೇವಾಡ ಮಾತನಾಡಿ, ಪಿಕೆಪಿಎಸ್ ರೈತರಿಗೆ ನೀಡಿದ ಸಾಲ ಕಟಬಾಕಿಯಾಗದಂತೆ ಅನುಸರಿಸಬೇಕಾದ ಕ್ರಮಗಳನ್ನು ಮತ್ತು ಬಿನ್ ಶೇತ್ಕಿ ಸಾಲ ನೀಡುವ ಕುರಿತು ವಿವರಿಸಿದರು. 

ವೇದಿಕೆ ಮೇಲೆ ಮಾಜಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್ ಆರ್‌. ಪಾಟೀಲ್, ಸಿದ್ದು ಕೊಣ್ಣೂರ, ಪಿಕೆಪಿಎಸ್ ಅಧ್ಯಕ್ಷ ಬಿ ಜಿ. ಹೊಸೂರ, ಉಪಾಧ್ಯಕ್ಷ ಕೆ ಕೆ ಬಿ.ಪಾಟೀಲ್, ರಾಮಣ್ಣ ತಳೇವಾಡ, ಡಾ.ಅಜೀತ ಕನಕರಡ್ಡಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಹೊಸೂರ, ರಾಜು ಬಾರುಕೋಲ, ಸದಾಶಿವ ಗೊಬ್ಬರದ, ಸುರೇಶ್ ಹೊಸೂರ, ಶಿವನಗೌಡ ಪಾಟೀಲ, ಹಣ್ಮಂತಗೌಡ ಪಾಟೀಲ್, ವೆಂಕಣ್ಣ ಗೊಬ್ಬರದ, ಸಂಗಪ್ಪ ಮುಗಳಖೋಡ, ಮಾರುತಿ ಇಟ್ನಾಳ, ಮಾಬೂಶಿ ಕೌಜಲಗಿ, ರಂಗಪ್ಪ ಹೊಸೂರ,ಶೇಕಪ್ಪಗೌಡ ಪಾಟೀಲ್, ಮುಖ್ಯ ನಿರ್ವಾಹಕ ಮಲ್ಲಯ್ಯ ಮಠಪತಿ ಮುಂತಾದವರಿದ್ದರು.ನಿವೃತ್ತ ಶಿಕ್ಷಕ ಬಸವರಾಜ ಪೂಜೇರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ