ಹೊಸ ವಂಟಮೂರಿಯಲ್ಲಿ ಯಾದಿಯಲ್ಲಿನ ಮತದಾರರ ಹೆಸರುಗಳು ನಾಪತ್ತೆ : ಹಕ್ಕಿನಿಂದ ವಂಚಿತನಾದ ಸ್ವಾತಂತ್ರ್ಯ ಯೋಧನಿಂದ ಮತ ಕೇಂದ್ರ ಮುಂದೆ ಅಲೆದಾಟ,
ಬೆಳಗಾವಿ : ಜಿಲ್ಲೆ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊಸ ವಂಟಮೂರಿ ಗ್ರಾಮದಲ್ಲಿ ಮತದಾರರ ಯಾದಿಯಿಂದ ಮತದಾರರ ಹೆಸರುಗಳ ನಾಪತ್ತೆಯಾಗಿದ್ದು, ಮತದಾನಕ್ಕೆ ಬಂದ ವಯಸ್ಕರರು ಸೇರಿದಂತೆ ಕೆಲವರು ಮತ ಕೇಂದ್ರದ ಮುಂದೆ ಹಕ್ಕಿನಿಂದ ವಂಚಿತರಾಗಿ ಹೆಸರು ಹುಡುಕುತ್ತ ಅಲೇದಾಡುತ್ತಿರುವ ಪ್ರಸಂಗ ನಡೆದಿದೆ.
ಹೊಸ ವಂಟಮೂರಿ ಗ್ರಾಮದ ಸತ್ಯಪ್ಪಾ ಲಕ್ಕಪ್ಪ ಕಿಲಾರಗಿ ಎಂಬುವ 89 ವರ್ಷ ವಯಸ್ಸಿನ ವಯೋವೃದ್ದರೊಬ್ಬರು ಹಾಗೂ ಸ್ವಾತಂತ್ರ್ಯ ಯೋಧರಾಗಿರುವ ಇವರು ತಮ್ಮ ಮತದಾನದ ಗುರುತಿನ ಚಿಟಿ ಹಾಗೂ ಪ್ಯಾನ್ ಕಾರ್ಡ್ ಕೈಯಲ್ಲಿ ಹಿಡಿದುಕೊಂಡು ಮತದಾರರ ಯಾದಿಯಲ್ಲಿ ಹೆಸರು ಇಲ್ಲದೆ ಮತದಾನದಿಂದ ವಂಚಿತನಾಗಿ ಮತದಾನ ಕೇಂದ್ರದ ಮುಂದೆ ಅಲೇದಾಡುತ್ತಿದ್ದ ದೃಶ್ಯ ಕಂಡು ಬಂದಿತು.
ಅಲ್ಲದೆ ನಾನು ಮತದಾನದಿಂದ ನಾನು ವಂಚಿತನಾಗಬಾರದು ಎನಾದರು ಮಾಡಿ ಅಂತಾ ಮಾಧ್ಯಮ ದವರ ಮುಂದೆ ತಮ್ಮ ಅಳನ್ನು ಸತ್ಯಪ್ಪಾ ಅವರು ತೋಡಿಕೊಂಡರು.
ಈ ಕುರಿತು ಸ್ಥಳದಲ್ಲಿ ಇದ್ದ ಅಂಗನವಾಡಿ ಕಾರ್ಯಕರ್ತನ್ನು ವಿಚಾರಿಸಿದಾಗ ವಂಟಮೂರಿ ಗ್ರಾಮದಲ್ಲಿ ಕೊನೆಯ ಕ್ಷಣದಲ್ಲಿ ಪ್ರತಿ ಮತದಾನ ಕೇಂದ್ರದಿಂದ 4 ಮತದಾರ ಹೀಗೆ ವಂಟಮೂರಿ ಗ್ರಾಮದಲ್ಲಿ ಸುಮಾರು 14ರಿಂದ 15 ಜನ ಮತದಾರರ ಹೆಸರು ನಾಪತ್ತೆ ಆಗಿರುವದು ನಿಜಾ. ಅದು ಬಹುತೇಕ ಗರುಡಾ ಆಪ್ ನಿಂದ ಆಗಿರಬಹುದು ಎನ್ನುವ ಮಾತು ಕೇಳಿಬಂದವು.
ಒಟ್ಟಿನಲ್ಲಿ ವಂಟಮೂರಿ ಗ್ರಾಮದಲ್ಲಿ ಓರ್ವ ಸ್ವಾತಂತ್ರ್ಯ ಹೋರಾಟಗಾರ ಸೇರಿ ಸುಮಾರು 15 ಜನ ಮತದಾನದಿಂದ ವಂಚಿಗೊಂಡಿದ್ದಾರೆ.