ನಮ್ಮಕೆರೆ ಅಭಿವೃದ್ಧಿಗೆ 40 ಲಕ್ಷ ಅನುದಾನ; ಭೂಮಿ ಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ
ಲೋಕದರ್ಶನ ವರದಿ
ನಮ್ಮಕೆರೆ ಅಭಿವೃದ್ಧಿಗೆ 40 ಲಕ್ಷ ಅನುದಾನ; ಭೂಮಿ ಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ
ಧಾರವಾಡ 12: ನವಲೂರು ಭಾಗದ ಬಸವೇಶ್ವರ ಬಡಾವಣೆಯಲ್ಲಿರುವ ನಮ್ಮಕೆರೆ ಅಭಿವೃದ್ಧಿಗಾಗಿ ಮಾನ್ಯ ಶಾಸಕ ಶ್ರೀ ಅರವಿಂದ ಬೆಲ್ಲದ ಅವರ ಪ್ರಯತ್ನದಿಂದ ಹಾಗೂ ಬಸವೇಶ್ವರ ಬಡಾವಣೆ, ಶಾಖಾಂಬರಿ ನಗರ, ನಂದಿನಿ ಲೇಓಟ್, ಸಾಯಿ ದರ್ಶಿನಿ ಲೇಓಟ್ ಸೇರಿದಂತೆ ವಿವಿಧ ಬಡಾವಣೆಗಳ ನಾಗರಿಕರ ಒತ್ತಾಯದ ಮೇರೆಗೆ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ?40 ಲಕ್ಷ ಅನುದಾನ ಮಂಜೂರಾಗಿದೆ.
ಮಂಜೂರಾದ ಅನುದಾನದಡಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅರವಿಂದ ಬೆಲ್ಲದ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಪಾಲಿಕೆ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಹಿಂಡಸಗೇರಿ, ಬಸವರಾಜ ದೇವಗಿರಿ, ಸಿದ್ದಣ್ಣ ಚಿಲಕನವರ್, ಡಿ.ಆರ್. ಗುಜನಟ್ಟಿ, ಶ್ರೀಮತಿ ಸೌಭಾಗ್ಯ ನಾಗೋಜಿ, ಶರಣಬಸವ ಅಂಗಡಿ, ನಿಂಗಪ್ಪ ಕಜರ್ಗಿ, ಶ್ರೀಮತಿ ಲತಾ ಗೋಪಿ ಗೌಡರ್, ಶ್ರೀಮತಿ ರೇಖಾ ಸಂದೀಪ್, ಲಕ್ಷ್ಮಣ ಬಸರಿ, ವೆಂಕಟೇಶ ದೀಕ್ಷಿತ್, ರಾಮಚಂದ್ರ ದೊಡಮನಿ, ಮುತ್ತಣ್ಣ ಕಾರೇರ, ಶ್ರೀಕಾಂತ ಸಣ್ಣಕ್ಕಿ, ಶಂಕರ, ವಿನಯ ಹುಲೂರ, ಆನಂದ ನಾಗೋಜಿ, ಸುರೇಶ ಹೊರಡಿ, ಶಿವಶರಣ ಕಲಬಶೆಟ್ಟರ್ ಸೇರಿದಂತೆ ಹಲವರು ಹಾಗೂ ನಮ್ಮಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಮ್ಮಕೆರೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿರುವುದಕ್ಕೆ ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿ, ಶಾಸಕ ಅರವಿಂದ ಬೆಲ್ಲದ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.