ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಆಗ್ರಹ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಮೇ.21 : ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಕಳೆದ ನೂರು ದಿನಗಳಿಂದ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಗಳ ಹೋರಾಟಕ್ಕೆ ತಾಲೂಕು ಪ.ಜಾತಿ ಪ.ಪಂಗಡಗಳ ಮೀಸಲಾತಿ ಹೋರಾಟ ಕ್ರಿಯಾ ಸಮಿತಿಯು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನೆಡೆಸಿ ಬೆಂಬಲ ಸೂಚಿಸಿ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಟಿ.ವೆಂಕೋಬಪ್ಪ ಮಾತನಾಡಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಗಳು ಮೀಸಲಾತಿ ಹೆಚ್ಚಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿರುವ ಧರಣಿ ಇಂದು 100 ದಿನ ಪೊರೈಸುತ್ತಿದ್ದು, ಇದರ ಬೆಂಬಲವಾಗಿ ವಿವಿಧ ಸಮುದಾಯದ ಮುಖಂಡರು ಸಂವಿಧಾನದ ಹಕ್ಕುನ್ನು ಪಡೆಯಲು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸರಕಾರದ ಕಣ್ಣು ತೆರೆಸುವಂತ ಕೆಲಸ ಮಾಡುತ್ತಿದ್ದೆವೆ, ಎಸ್.ಸಿ. ಎಸ್.ಟಿ ಗೆ ಸರಕಾರ ಕೊಡಲೇ ಮೀಸಲಾತಿ ಪ್ರಮಾಣವನ್ನು 15ಅ ರಿಂದ 17ಅ ಗೆ ಮತ್ತು 3ಅ ದಿಂದ 7.5ಅ ಗೆ ಹೆಚ್ಚಳ ಮಾಡಿ ಸಮುದಾಯಕ್ಕೆ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದರು. ಸರಕಾರ ನಿರ್ಧಾರದ ನಂತರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನ್ನಿಹಳ್ಳಿ ಚಂದ್ರಶೇಖರ್ ಡಾ. ಬಿ.ಆರ್ ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ದೊಡ್ಡ ಬಸಪ್ಪನ, ಬುಡಗ ಸಮಾಜದ ತಾಲೂಕು ಅಧ್ಯಕ್ಷ ಮಲ್ಲೇಶಪ್ಪ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ, ಚಲವಾದಿ ಸಮಾಜದ ತಾಲೂಕು ಅಧ್ಯಕ್ಷ ಕಾಳಿ ಬಸವರಾಜ್, ಮಗಿಮಾವಿನಹಳ್ಳಿ ಉಡಚಪ್ಪ .ಯೋಗಾನಂದ, ಡಿಶ್ ಮಂಜುನಾಥ್, ಚಿಂತ್ರಪಳ್ಳಿ ದೇವೇಂದ್ರ್ಪ, ಜೋಗಿ ಹನುಮಂತಪ್ಪ, ಚಿಂತ್ರಪಳ್ಳಿ ನಾಗರಾಜ್, ಮಂಜುನಾಥ್, ಬೆಳ್ಳಕ್ಕಿ ರಾಮಪ್ಪ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.