ದೇವ ಲೋಕವನ್ನೇ ಧರೆಗೆ ಇಳಿಸಿದ ನಾಟ್ಯನಾದ ಕಲಾ ತಂಡ
ಇಂದ್ರ ಲೋಕವನ್ನೇ ಸೃಸ್ಟಿಸಿದ ಹೊಸಪೇಟಿ ನಾಟ್ಯನಾದ ಕಲಾ ತಂಡದ ಗಂಧರ್ವಿಯರು
ಮಹಾಲಿಂಗಪುರ 10: ನಾಡದೇವಿ ದುರ್ಗಾ ಮಾತೆಯ ಅರನೇಯ , ಶಕ್ತಿ ಸ್ವರೂಪ ಕಾತ್ಯಾಯಿನಿ ದುಷ್ಟ ರಾಕ್ಷಸ ಮಹಿಷಾಸುರನ ಸಂಹಹರಿಸಲು, ಆತ ದೇವತೆಗಳಿಗೆ ಬಹಳಷ್ಟು ಉಪಟಳ ತೊಂದರೆ ಕೊಡುತ್ತಿದ ಆತನ ಕಾಟದಿಂದ ಪಾರು ಮಾಡುವಂತೆ ದೇವತೆಗಳು ವಿಷ್ಣುವಿನ ಮೊರೆ ಹೋದಾಗ, ವಿಷ್ಣು, ಶಿವ ಮತ್ತು ಬ್ರಹ್ಮ ಹಾಗೂ ಇತರೆ ದೇವರು ತಮ್ಮ ಕಣ್ಣುಗಳಿಂದ ಜ್ವಾಲೆಗಳನ್ನು ಹೊಮ್ಮಿಸಿದ್ದರಿಂದ ಪರ್ವತಗಾತ್ರದ ದೊಡ್ಡ ಬೆಳಕು ಸೃಷ್ಟಿಯಾಗಿ ಅದರಿಂದ ಕಾತ್ಯಾಯಿನಿ ರೂಪ ಹೊಂದಿದ್ದು ಅವಳನ್ನು ಯಾರು ಭಕ್ತಿಯಿಂದ ಭಾವದಿಂದ ಪೂಜಿಸಿತ್ತಾರೋ, ಅವರನ್ನು ಸಕಲ ಸೌಭಾಗ್ಯ ಕೊಟ್ಟು ರಕ್ಷಿಸುತ್ತಾಳೆ ಎಂದು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು ಹೇಳಿದರು.
ಬನಶಂಕರಿ ದೇವಸ್ಥಾನದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘ ಮಹಾಲಿಂಗಪುರ ಇವರ ಆಶ್ರಯದಲ್ಲಿ ಶ್ರೀ ದೇವಿ ಪುರಾಣ ಮತ್ತು ದಸರಾ ಸಾಂಸ್ಕೃತಿಕ ನವರಾತ್ರಿ ಉತ್ಸವದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಆರನೆಯ ದಿನದ ದೇವಿ ಪುರಾಣದಲ್ಲಿ ನವದುರ್ಗಿಯ ಆರನೆಯ ಅವತಾರವಾದ ಕಾತ್ಯಾಯಿನಿ ರೂಪ ಪಡೆದ ತಾಯಿಗೆ ಮೂರು ಕಣ್ಣುಗಳು, ಹದಿನೆಂಟು ಕೈಗಳು ಸಾವಿರ ಸೂರ್ಯರ ತೇಜಸ್ಸು ಹೊಂದಿದ ತಾಯಿಗೆ ಶಿವಾ ತ್ರಿಶೂಲ, ವಿಷ್ಣು ಸುದರ್ಶನ್ ಚಕ್ರ, ವರುಣ ಶಂಖ, ಅಗ್ನಿ ಭರ್ಜಿ, ವಾಯು ಬಾಣ, ಸೂರ್ಯ ಬತ್ತಳಿಕೆ ತುಂಬ ಬಾಣ,ಇಂದ್ರ ವಜ್ರಯುಧ, ಕುಬೇರ್ ರಾಜದಂಡ, ಬ್ರಹ್ಮ ಜಪಮಣಿ, ಜಲರಂಡಕ, ಕಾಳ ಕತ್ತಿ,ಗುರಾಣಿ, ವಿಶ್ವಕರ್ಮ ಕೊಡಲಿ ಅಸ್ತ್ರಗಳನ್ನು ನೀಡುತ್ತಾರೆ, ಈ ಎಲ್ಲ ಅಷ್ಟ್ರಗಳಿಂದ ಮಹಿಷಾಸುರನನ್ನು ಮರ್ದಿಸುತ್ತಾಳೆ ಎಂದರು.
ಶುಭ ಮಂಗಳವಾರದಂದು ದೇವಿ ಸನ್ನಿಧಾನಕ್ಕೆ ಮುತೈದೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.ಸುಮಾರು ಎಂಟು ಸಾವಿರಕ್ಕೂ ಅಧಿಕ ಮುತೈದೆಯರಿಗೆ ಕುಂಕುಮಾಚಾರಣೆಯನ್ನು ದೇವಿಯ ಅಷ್ಟನಾಮಾವಳಿಗಳನ್ನು ಹೇಳಿಸಿ, ದೇವಿಯ ಹೆಸರಿನಿಂದ ಕುಂಕುಮ ಅರ್ಚನೆಮಾಡಿ ದೇವಿ ಕೃಪೆಗೆ ಪಾತ್ರರಾದರು.
ದೇವಲೋಕ ಸೃಷ್ಠಿ : ಸಂಗೀತ ಅಂದರೆ ಸಾಕು ಮನಸ್ಸು ಅರಳುತ್ತದೆ. ಉಲ್ಲಾಸ ಇಮ್ಮಡಿಯಾಗುತ್ತದೆ. ವಿಜ್ಞಾನವೆ ಹೇಳುವ ಹೇಳುವ ಹಾಗೆ ಸಂಗೀತಕ್ಕೆ ಮನೋ ಕಾಯಿಲೆ ಗುಣಪಡಿಸುವ ಶಕ್ತಿ ಇದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಾಟ್ಯನಾದ ಕಲಾ ಕೇಂದ್ರದ ಸುಮಾರು 130 ಕ್ಕೂ ಹೆಚ್ಚು ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನವದುರ್ಗಿಯರ ಒಂಬತ್ತು ಅವತಾರವನ್ನು ನೃತ್ಯ ರೂಪಕದಲ್ಲಿ ಮಾಡಿ ತೋರಿಸಿ ಅಪಾರ ಸಂಖ್ಯೆಯಲ್ಲಿ ಸೇರಿದ ಜನರನ್ನು ಮುಖವಿಸ್ಮಿತರಾನ್ನಾಗಿ ಮಾಡಿದರು. ಅದರಲ್ಲೂ ನವ ದುರ್ಗಿಯರು ಸೇರಿ ಮಹಿಷಾಸುರನನ್ನು ಸಂಹರಿಸುವ ದೃಶ್ಯ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿತು. ಒಟ್ಟು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದು. ಸುಮಾರು 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟು ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸಿದ್ದು ಕೊಣ್ಣೂರ : ತೇರದಾಳ ಮತಕ್ಷೇತ್ರದ ಕಾಂಗ್ರೆಸ ಮುಖಂಡರಾದ ಸಿದ್ದು ಕೊಣ್ಣೂರು ಸನ್ಮಾನ ಸ್ವೀಕರಿಸಿ ಮಾತನಾಡಿ ನಾಡ ದೇವಿಯ ಆರಾಧನೆ ಹಾಗೂ ದಸರಾ ವೈಭವ ಇಡೀ ನಾಡಿನಾದ್ಯಾಂತ ಅತೀ ವಿಜೃಂಭಣೆಯಿಂದ ನಡೆಯುತ್ತಿದ್ದೂ ಯಾರು ದೇವಿಯನ್ನು ನಿರ್ಮಲ ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ದೇವಿ ಅಷ್ಟ ಐಶ್ವರ್ಯವನ್ನು ಕಾಪಾಡುತ್ತಾಳೆ. ಬನಶಂಕರಿ ದೇವಸ್ಥಾನದಲ್ಲಿ ಉತ್ತರ ಕರ್ನಾಟಕದ ಮೈಸೂರನ್ನು ನೋಡಿದ ಅನುಭವಾಯಿತು. ನಾವು ದಸರಾ ಅಂದು ಕೂಡಲೇ ತಟ್ಟನೆ ನೆನಪಾಗುವುದು ಮೈಸೂರು ಆದರೆ ಇಲ್ಲಿ ನೋಡಿದರೆ ಮುಂದಿನ ದಿನಮಾನಗಳಲ್ಲಿ ಇದು ಎರಡನೇ ಮೈಸೂರು ದಸರಾ ಆಗುವುದರಲ್ಲಿ ಸಂಶಯವಿಲ್ಲ ಎಂದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಸಿದ್ದರೂಡ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದೇವಿ ಪುರಾಣ ಕೇಳುವುದರಿಂದ ಪುಣ್ಯ ಪ್ರಾಪ್ತಿಯಗುತ್ತದೆ, ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಅದಕ್ಕೆ ಬನಶಂಕರಿ ದೇವಿನೇ ಸಾಕ್ಷಿ ಎಂದು ಹೇಳಿದರು.
ಇಂದಿನ ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜ, ವಿಶ್ವಕರ್ಮ ಸಮಾಜ ಮುಖಂಡರು ದೇವಿಗೆ ಹಾಗೂ ಪೂಜ್ಯರಿಗೆ ಮಾಲಾರೆ್ಣ ಮಾಡುವ ಮೂಲಕ ಚಾಲನೆ ನೀಡಿದರು.
ಇಂದಿನ ಪ್ರಸಾದ ವ್ಯವಸ್ಥೆಯನ್ನು ಸಿದ್ದು ದಡುತಿ ಬಂಧುಗಳು ಮಾಡಿಸಿದ್ದರು.