ಬೆಳಗಾವಿ

ಲಿಂಗರಾಜ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸ್ಥಾಪನಾ ದಿನಾಚರಣೆ

ಲಿಂಗರಾಜ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸ್ಥಾಪನಾ ದಿನಾಚರಣೆ


ಬೆಳಗಾವಿ 25: ಕೆ.ಎಲ್‌.ಇ. ಸೊಸೈಟಿಯ ಲಿಂಗರಾಜ ಕಾಲೇಜಿನ (ಸ್ವಾಯತ್ತ) ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಎನ್‌ಎಸ್‌ಎಸ್ ಸ್ಥಾಪನಾ ದಿನವನ್ನು ಉತ್ಸಾಹದಿಂದ ಆಚರಿಸಲಾಯಿತು. ಗಾಂಧಿವಾದಿ ಹಾಗೂ ಪರಿಸರವಾದಿ ಡಾ. ಶಿವಾಜಿ ಕಗ್ನಿಕರ್ ಮುಖ್ಯ ಅತಿಥಿಯಾಗಿ ಹಾಗೂ ಜ್ಯೋತಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಡಿ.ಎನ್‌. ಮಿಸಾಲೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಎಚ್‌.ಎಸ್‌. ಮೆಲಿನಮನಿ, ಹಿರಿಯ ಪ್ರಾಧ್ಯಾಪಕರಾದ ಡಾ. ಜಿ.ಎನ್‌. ಶೀಲಿ, ಡಾ. ಎಚ್‌.ಎಂ. ಚನ್ನಪಗೋಳ್ ಹಾಗೂ ಎನ್ಸಿಸಿ ಅಧಿಕಾರಿ ಡಾ. ಮಹೇಶ್ ಗುರಗೌಡರ್ ಉಪಸ್ಥಿತರಿದ್ದರು.  

ಮಾತನಾಡಿದ ಗಣ್ಯರು, ಸಮಾಜ ಸೇವೆ, ಪರಿಸರ ಸಂರಕ್ಷಣೆ, ಶಿಸ್ತು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಶಶಿಕಾಂತ್ ಕೊನ್ನೂರು ಸ್ವಾಗತಿಸಿ, ಎನ್‌ಎಸ್‌ಎಸ್ನ ಉದ್ದೇಶ, ಧ್ಯೇಯ ಹಾಗೂ ಸಮುದಾಯ ಅಭಿವೃದ್ಧಿಗೆ ಘಟಕದ ಕೊಡುಗೆಯನ್ನು ವಿವರಿಸಿದರು. ‘ನಾನಲ್ಲ, ನೀನು’ ಎಂಬ ಎನ್‌ಎಸ್‌ಎಸ್ನ ಧ್ಯೇಯವಾಕ್ಯವನ್ನು ವಿದ್ಯಾರ್ಥಿಗಳು ಸೇವಾ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕುಮಾರಿ ಪಲ್ಲವಿ ವಂದಿಸಿದರು.  


ಸುದ್ದಿ ಓದಿ