ಕಂಪ್ಲಿ

ಕಾರ್ಮಿಕರ ತಾಲೂಕು ಅಧ್ಯಕ್ಷರಾಗಿ ಎನ್‌.ರಾಜಾಭಕ್ಷಿ ಆಯ್ಕೆ

ಕಾರ್ಮಿಕರ ತಾಲೂಕು ಅಧ್ಯಕ್ಷರಾಗಿ ಎನ್‌.ರಾಜಾಭಕ್ಷಿ ಆಯ್ಕೆ

ಲೋಕದರ್ಶನ ವರದಿ

ಕಂಪ್ಲಿ 26:  ಪಟ್ಟಣದ ಹೊಸ ಬಸ್ ನಿಲ್ದಾಣದ ಮುದ್ದಾಪುರ ರಸ್ತೆಯ ಗಣೇಶ ದೇವಸ್ಥಾನ ಆವರಣದಲ್ಲಿ ರಾಜ್ಯಾಧ್ಯಕ್ಷ ಹೆಚ್‌.ಜಿ.ಉಮೇಶ, ಕಾರ್ಯದರ್ಶಿ ಎ.ಎಲ್‌.ತಿಮ್ಮಣ್ಣ ನೇತೃತ್ವದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಫೆಡರೇಶನ್‌ನ ಸಭೆಯಲ್ಲಿ ನೂತನ ತಾಲೂಕು ಸಮಿತಿ ರಚನೆಯೊಂದಿಗೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಂಪ್ಲಿ ತಾಲೂಕು ಅಧ್ಯಕ್ಷರಾಗಿ ಎನ್‌.ರಾಜಾಭಕ್ಷಿ, ಗೌರವಾಧ್ಯಕ್ಷರಾಗಿ ಬಿ.ಅಬ್ದುಲ್ ನವಾಜ್, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಮೆಟ್ರಿ, ಶರಣ, ನಾಗಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸುಂಕಪ್ಪ, ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ, ಸದಸ್ಯರಾಗಿ ಶಿವರಾಜ, ವಿರುಪಾಕ್ಷಿ, ಮೆಟ್ರಿ ಹನುಮಂತಪ್ಪ, ಗಂಗಮ್ಮ, ಜ್ಯೋತೆಮ್ಮ ಇವರು ಒಮ್ಮತದಿಂದ ಆಯ್ಕೆಗೊಂಡರು. ಅಧ್ಯಕ್ಷ ರಾಜಾಭಕ್ಷಿ ಮಾತನಾಡಿ, ಸಾಕಷ್ಟು ಕಾರ್ಮಿಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ಇವರಿಗೆ ಸೌಲಭ್ಯಗಳ ಜೊತೆಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುವುದು. ಮತ್ತು ಸಮಿತಿಯ ಏಳಿಗೆಗೆ ಸದಾ ದುಡಿಯಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖಂಡ ಹುಲುಗಪ್ಪ ಸೇರಿದಂತೆ ಕಾರ್ಮಿಕರು ಇದ್ದರು.   


ಸುದ್ದಿ ಓದಿ