ಬೆಳಗಾವಿಯಲ್ಲಿ ಮೂವರು ಯುವಕರ ನಿಗೂಢ ಸಾವು : ಓರ್ವನ ಸ್ಥಿತಿ ಗಂಭೀರ

ಬೆಳಗಾವಿಯಲ್ಲಿ ಮೂವರು ಯುವಕರ ನಿಗೂಢ ಸಾವು : ಓರ್ವನ ಸ್ಥಿತಿ ಗಂಭೀರ

ಬೆಳಗಾವಿ : ಮೂವರು ಯುವಕರು ಮಲಗಿಕೊಂಡಿದ್ದ ವೇಳೆ ನಿಗೂಢವಾಗಿ ಶವವಾಗಿದ್ದು, ಇನ್ನೋರ್ವ ಯುವಕನ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿಯ ಅಮನಗರದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ.

   ಈ ಘಟನೆಯಲ್ಲಿ ರೀಹಾನ (22 ), ಸರಫರಾಜ (22), ಮೋಯಿನ್ (23 ) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ. ಹಾಗೂ ಇನ್ನೋರ್ವ ಯುವಕ ಶಾನವಾಜ್ ಗಂಭೀರ ಸ್ಥಿತಿಯಲ್ಲಿದ್ದಾನೆ.

   ಸೋಮವಾರ ದಿನದಂದು ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಮನೆಗೆ ಹೋದ ವೇಳೆ ರಾತ್ರಿ ಬೆಚ್ಚಗೆ ಮಲುಗಿದ್ದ ಈ ಯುವಕರು ನಿಗೂಢವಾಗಿ ಮೂವರು ಮೃತಪಟ್ಟಿದ್ದು, ಚಳಿಗೆ ಹಿಟರ್ ಹಚ್ಚಿಕೊಂಡು ಮಲಗಿದ್ದರು ಎನ್ನಲಾಗಿದೆ.

  ಮಂಗಳವಾರ ಸಂಜೆ ಮನೆಯವರು ಕಾರ್ಯಕ್ರಮ‌ ಮುಗಿಸಿ ಮನೆಗೆ ಬಂದಾಗ ಘಟನೆ ಮಾಹಿತಿ ತಿಳಿದಿದೆ. ಮಾಳಮಾರುತಿ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಸುದ್ದಿ ಓದಿ