ಮೈಲಾರಲಿಂಗಸ್ವಾಮಿ ದೇವರ ಪಲ್ಲಕ್ಕಿ ಉತ್ಸವ
ಶಿಗ್ಗಾವಿ 13:ಶ್ರೀಮೈಲಾರಲಿಂಗಸ್ವಾಮಿ ದೇವಸ್ಥಾನದಲ್ಲಿ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಕರ್ನಾಟಕ ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ಮುಖಂಡ ಶ್ರೀಕಾಂತ ದುಂಡಿಗೌಡ್ರ ಚಾಲನೆ ನೀಡಿದರು.
ನಂತರ ವಿಶೇಷವಾಗಿ ಅಲಂಕೃತಗೊಂಡ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಡೊಳ್ಳು ವಾದ್ಯದೊಂದಿಗೆ, ಕುದರಿಕಾರ ಕುಣಿತ ಹಾಗೂ ಜೋಗಮ್ಮಗಳ ಹಾಡುಗಳೂಂದಿಗೆ ಪ್ರಾರಂಭಗೊಂಡು ಪ್ರಮುಖ ದೇಸಾಯಿ ಗಲ್ಲಿ, ಹಳೆಪೇಟೆ, ಗುಡ್ಡದ ಓಣಿಯ ಬನ್ನಿ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಮುಡಿದು ನಂತರ ದೇವಸ್ಥಾನ ತಲುಪಿತು. ಸೇರಿದ ಜನರು ಪರಸ್ಪರ ಬನ್ನಿ ಪತ್ರಿ ಹಂಚಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಷ ಚವ್ಹಾಣ, ಉಪಾಧ್ಯಕ್ಷ ಸಂಗಪ್ಪ ಕಂಕನವಾಡ, ನಿಂಗಪ್ಪ ಇಂಗಳಗಿ, ಸುರೇಶ ಯಲಿಗಾರ, ತಿಪ್ಪಣ್ಣ ಸಾತಣ್ಣವರ, ಭರಮಜ್ಜ ನವಲಗುಂದ, ಮಂಜುನಾಥ ಬ್ಯಾಹಟ್ಟಿ, ನಿಂಗಜ್ಜ ಯಲಿಗಾರ, ಭರತೇಶ ಬಳಿಗಾರ, ತೀರಕಪ್ಪ ಅಂದಲಗಿ, ಮಂಜುನಾಥ ಕಟ್ಟಿಮನಿ, ಮಾಲತೇಶ ಕಂಕನವಾಡ, ಮಲ್ಲೇಶಪ್ಪ ಅತ್ತಿಗೇರಿ, ನಿಂಗಪ್ಪ ಯಲವಗಿ, ಲಿಂಗರಾಜ ಗಾಣಗೇರ, ಸೋಮಣ್ಣ ಮತ್ತೂರ, ಅಶೋಕ ಇಂಗಳಗಿ, ಆನಂದ ಸುಬೇದಾರ, ಶಂಕರಗೌಡ್ರ ಪಾಟೀಲ, ವಿಶ್ವನಾಥ ಗಾಣಿಗೇರ ಸೇರಿದಂತೆ ಸಮಿತಿ ಸದಸ್ಯರು ಸದ್ಬಕ್ತರು ಉಪಸ್ಥಿತರಿದ್ದರು.