ಹಂಪಾಪಟ್ಟಣ ಗ್ರಾಮದಲ್ಲಿ ಸುಗಮ ಸಂಗೀತ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ 23: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಜನನಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸುಗಮ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಉಮಾಪತಿ ಶೆಟ್ಟರ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕಲಾವಿದರು ಕಲೆಯನ್ನು ಆರಾಧಿಸುತ್ತಿದ್ದು, ಹಳ್ಳಿಗಾಡಿನಲ್ಲಿ ಕಲೆಯ ಸೊಗಡು ಜೀವಂತವಾಗಿದೆ ಇಂತಹ ಗ್ರಾಮೀಣ ಪ್ರದೇಶದ ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಇಂದು ಕಲೆ ಮತ್ತು ಕಲಾವಿದರನ್ನು ಕಾಣಬಹುದಾಗಿದೆ, ಕಲೆ ಹಾಗೂ ಕಲಾವಿದರ ತವರೂರು ಗ್ರಾಮೀಣ ಪ್ರದೇಶಗಳು ಎಂದರೆ ತಪ್ಪಾಗಲಾರದು, ಉತ್ತಮ ಸಂಸ್ಕೃತಿ ಸಂಸ್ಕರ ಮೈಗೂಢಿಕೊಳ್ಳುವಲ್ಲಿ ಕಲೆ, ವೈಚಾರಿಕತೆ ಸೇರಿದಂತೆ ಮೌಢ್ಯತೆಗಳಿಂದ ಜನರು ಹೊರಬರಲು ಹತ್ತಾರು ಕಲೆಗಳು ಇವೆ, ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಲಾಕಾರರು ಕಲೆಯನ್ನು ಬಳಸುತ್ತಿರುವುದು ಇಂದಿಗೂ ಕಾಣಬಹುದಾಗಿದೆ ಆದರೆ ಕೇವಲ ನೆಪ ಮಾತ್ರಕ್ಕೆ ಬಳಸಿಕೊಂಡು ಕಲೆ ಸೇರಿದಂತೆ ಕಲಾವಿದರನ್ನು ಕಡೆಗಣಿಸದಂತೆ ಸರ್ಕಾರಗಳು ಕ್ರಮ ವಹಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಬಲ್ಲಾಹುಣಸಿ ನಾಗರಾಜ್ ವಹಿಸಿದ್ದರು. ಬಿಜೆಪಿ ಯುವ ಮುಖಂಡ ಟಿ.ಮಹೇಂದ್ರ, ಮುಖಂಡರಾದ ಎಲಿಗಾರ್ ಕುಬೇಂದ್ರ್ಪ, ಗುಂಡ್ರು ಸೋಮಶೇಖರ್, ಎಸ್.ನಿಂಗನಗೌಡ್ರು, ಖಾಜಾಹುಸೇನ್, ವಿ.ಹನುಮಂತ, ಪೂಜಾರ್ ಸೋಮಪ್ಪ, ಜಿ.ಸೋಮನಾಥ, ಬಿ.ಕುಬೇರ, ಗ್ರಾ.ಪಂ.ಸದಸ್ಯ ಎನ್.ನಾಗರಾಜ್, ಟಿ.ಮಂಜುನಾಥ, ಎಸ್.ಗಾಳೆಪ್ಪ, ಜಿ.ತಿಮ್ಮಣ್ಣ, ಜನನಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎ.ಕೇಶವಮೂರ್ತಿ, ಉಪ್ಪಾರ್ ಕನಕಪ್ಪ, ಮತ್ತಿತರರು ಇದ್ದರು. ಬಳಿಕ ಗಾಯಕಿ ಜಿ.ಸಂಗೀತ, ಮಲ್ಲಿಕಾರ್ಜುನ್ ಕೋಟೆ ಹಾರ್ಮೋನಿಯಂ, ಪಿ.ಚಿದಾನಂದ ತಬಲ ವಾದಕರಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಾಗವೇಣಿ ಪ್ರಾರ್ಥಿಸಿದರು, ಶಿಕ್ಷಕಿ ಮಾಂತಮ್ಮ ಹಾಗೂ ಉಪನ್ಯಾಸಕ ಎ.ವೀರೇಂದ್ರ ನಿರ್ವಹಿಸಿದರು.