ಮಹಲಿಂಗಪುರ

ಸಪ್ತಸ್ವರಗಳ ನಿನಾದವೇ ಸಂಗೀತ : ಸಿದ್ದು ಸವದಿ

ಸಪ್ತಸ್ವರಗಳ ನಿನಾದವೇ ಸಂಗೀತ : ಸಿದ್ದು ಸವದಿ

ಮಹಾಲಿಂಗಪುರ 05 : ಸಂಗೀತ ರಾಗ ಲಯಗಳ ಮಧ್ಯೆ ಭಾವಗಳ ಪಯಣ ಅದನ್ನು ಇಂಗಿತ ಮಾಡಿಕೊಂಡರೆ ಬದುಕು ಸಾರ್ಥಕವೆಂದು ಶಾಸಕ ಸಿದ್ದು ಸವದಿ ಹೇಳಿದರು.

ಸ್ಥಳೀಯ ಬನಶಂಕರಿದೇವಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಇಂಡಿಯನ್ ಮ್ಯೂಸಿಕ್ ಅಸೋಸಿಯೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ನಡೆದ ಸಂಗೀತ ಶ್ರಾವಣ ಸುಗಮ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಸಂಗೀತವೆಂಬುವುದು ಸಾಧಕನ ಸ್ವತ್ತು ಎಂದು ನುಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕನ್ನಡದ ಕಬೀರ ಇಬ್ರಾಹಿಂ ಸುತಾರ, ಸಂಗೀತವೆಂಬುವುದು ಆಧ್ಯಾತ್ಮದ ಸಾಧನೆ, ಸಂಗೀತಕ್ಕೆ ದೇವಾನುದೇವತೆಗಳೇ ತಲೆದೂಗುತ್ತಾರೆ ಎಂದು ನುಡಿದರು. 

ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯ ಸಹಜಾನಂದ ಶ್ರೀಗಳು ಸಂಗೀತವು ಸರ್ವರನ್ನು ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ತಬ್ಬಿಕೊಳ್ಳುತ್ತದೆ ಅದೊಂದು ದೈವಿ ಕಲೆಯಾಗಿದೆ ಎಂದರು.

ಸಂಗೀತ ಶ್ರಾವಣ ಸುಗಮ ಸಂಗೀತ ಉತ್ಸವದಲ್ಲಿ ಬೆಂಗಳೂರಿನ ಶ್ವೇತಾ ಪ್ರಭು, ಹೊಂಬೆಗೌಡ ಎಚ್, ಉಗಾರದ ರಾಜಶ್ರೀ ವಿಟೇಕರ್, ಗೋಕಾಕದ ಗುರುಪಾದ ಮದೆನ್ನವರ,ಓಂಕಾರ್ ಪತ್ತಾರ್, ಜಮಖಂಡಿಯ ಶಿವಲೀಲಾ ಲಕ್ಕನಗೌಡರ, ಇಟ್ನಾಳದ ಶ್ರೀಕಾಂತ ನಾಯಕ್, ಗದಗಿನ ರಾಮಕೃμÀ್ಣ ಪೂಜಾರಿ, ಮಧುರಖಂಡಿಯ ಬಸಲಿಂಗಯ್ಯ ಹಿಡಕಲ್, ಸ್ಥಳೀಯ ಎಂ ಡಿ ಆನಂದ, ಮೇಘಾ ಸೋರಗಾವಿ ಕಾರ್ಯಕ್ರಮ ನೀಡಿದರು.

ಹಿರಿಯ ಪಾರಿಜಾತ ಕಲಾವಿದ ಪಂಡಿತ ಬಡಿಗೇರ, ಜಾನಪದ ಕಲಾವಿದ ಮಡಿವಾಳಪ್ಪ ಕರಡಿ, ಕಿರುತೆರೆ ಕಲಾವಿದ ದಾನಪ್ಪ ಮೂಡಲಗಿ, ಲಲಿತ ಕಲಾವಿದ ಡಿ.ಕೆ ರಂಗನಾಥ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಹಾಂತೇಶ ತಾಂವಶಿ, ಶಂಕ್ರಯ್ಯ ಹಿರೇಮಠ, ಮಲ್ಲಪ್ಪ ಬಾವಿಕಟ್ಟಿ, ಶಂಕರ್ ಅಂಬಿ, ಅಲ್ಲಪ್ಪ ಗುಂಜಿಗಾವಿ,ಗೋಲೇಶ ಅಮ್ಮಣಗಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ಮಹಾಲಿಂಗಪ್ಪ ಕೊಳಿಗುಡ್ಡ, ಈರಣ್ಣ ಹಲಗತ್ತಿ,ಡಾ.ಬಿ.ಡಿ.ಸೋರಗಾಂವಿ, ಗುರುರಾಜ್ ಖಾಸನಿಸ್,ಜಯವಂತ ಕಾಗಿ,ಜಯಪ್ಪ ಘಟ್ನಟ್ಟಿ,ಪ್ರಭು ಬೆಳಗಲಿ, ಶಿವಲಿಂಗ ಟರ್ಕಿ, ಚನ್ನಮಲ್ಲಪ್ಪ ಕರಡಿ ಇದ್ದರು. ಲಕ್ಕಪ್ಪ ಚಮಕೇರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಘಟಕ ರವೀಂದ್ರ ಸೊರಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಕೊಕ್ಕರಿ ನಿರೂಪಿಸಿದರು, ಚಂದ್ರು ಕದ್ದಿಮನಿ ವಂದಿಸಿದರು.

ಸುದ್ದಿ ಓದಿ