ಬಳ್ಳಾರಿ

ವಸ್ತು ಸಂಗ್ರಹಾಲಯಗಳು ಆಧುನಿಕ ಪ್ರಪಂಚದ ದೇವಾಲಯಗಳಿದ್ದಂತೆ: ಸಿದ್ದಲಿಂಗೇಶ್ ರಂಗಣ್ಣನವರ್

ವಸ್ತು ಸಂಗ್ರಹಾಲಯಗಳು ಆಧುನಿಕ ಪ್ರಪಂಚದ ದೇವಾಲಯಗಳಿದ್ದಂತೆ: ಸಿದ್ದಲಿಂಗೇಶ್ ರಂಗಣ್ಣನವರ್

ಬಳ್ಳಾರಿ 18: ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳಿಗೆ ಅವಿರ್ನಾಭಾವ ಸಂಬಂಧ ಹೊಂದಿದ್ದು, ಇತಿಹಾಸವನ್ನು ಅರಿಯಲು ಆಸಕ್ತಿ ಇಲ್ಲವೋ ಅವರು ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಮಾನವನ ವಿಕಾಸದ ಪ್ರಗತಿ ತೋರುವುದೇ ಮ್ಯೂಸಿಯಂಗಳು. ಈ ಮ್ಯೂಸಿಯಂಗಳು ಆಧುನಿಕ ಜಗತ್ತಿನ ದೇವಾಲಯಗಳಿದ್ದಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ್ ರಂಗಣ್ಣನವರ್ ಅವರು ಹೇಳಿದರು. 

ನಗರದ ರಾಬರ್ಟ್‌ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಬುಧವಾರದ ಏರಿ​‍್ಡಸಿದ್ದ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇತಿಹಾಸದ ಹೆಜ್ಜೆ ಗುರುತುಗಳನ್ನು ಹಿಡಿದಿಟ್ಟುಕೊಳ್ಳುವುದು ವಸ್ತು ಸಂಗ್ರಹಾಲಯಗಳ ಕೆಲಸವಾಗಿದ್ದು, ಅದರಲ್ಲಿ ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಸಹಭಾಗಿತ್ವನ್ನು ಹೊಂದಿದೆ ಎಂದು ಹೇಳಿದರು. 

ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ಮ್ಯೂಸಿಯಂಗಳು ಜಾಸ್ತಿ, ಆದರೆ ದೇವಾಲಯಗಳು ಕಡಿಮೆ ಎಂದು ಹೇಳಿದ ಅವರು, ಜ್ಞಾನಕ್ಕೆ ಬೆಲೆ ಕೊಟ್ಟಷ್ಟು ಅಲ್ಲಿ ಮೂಡನಂಬಿಕೆಗಳಿಗೆ ಒತ್ತು ನೀಡುವುದಿಲ್ಲ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ಹೆರಿಟೇಜ್ ಫೌಂಡೇಶನ್ ಟ್ರಸ್ಟಿಗಳಾದ ಟಿ.ಜಿ.ವಿಠ್ಠಲ್ ಅವರು ಮಾತನಾಡಿ, ವಸ್ತು ಸಂಗ್ರಹಾಲಯಗಳು ಇತಿಹಾಸದ ಪಳೆಯುಳಿಕೆಗಳಿದ್ದಂತೆ, ಮಾಹಿತಿ ಕೆದಕುತ್ತಾ ಹೋದಂತೆ, ಅದರ ಸುತ್ತಲೂ ಅನೇಕ ಸುದ್ದಿಗಳು ದೊರಕುತ್ತವೆ. ಮ್ಯೂಸಿಯಂ ಎನ್ನುವ ಪದಗಳಲ್ಲಿ ಆಳವಾದ ಅಧ್ಯಯನ ಅಡಗಿದೆ ಅದನ್ನು ಅರಿಯುವ ತವಕ ಯುವಪೀಳಿಗೆಯಲ್ಲಿ ಅಡಗಿರಬೇಕು ಎಂದು ಹೇಳಿದರು. 

ಮ್ಯೂಸಿಯಂಗಳನ್ನು ಕೇವಲ ನೋಡಿ ಮರೆತು ಹೋಗುವಂತಹದ್ದಲ್ಲ, ಬದಲಾಗಿ ಅವುಗಳಲ್ಲಿ ಸಂಶೋಧನೆಯ ಆಳವನ್ನು ನೆನೆಯಬೇಕು ಎಂದು ಹೇಳಿದರು. 

ನಂತರದಲ್ಲಿ ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕರಾದ ಗೌರಿ ಅವರು, ಕಾರ್ಯಕ್ರಮದಲ್ಲಿ ಭಾಗಿಯಾದ ತಾರನಾಥ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳಿಗೆ ವಸ್ತು ಸಂಗ್ರಹಾಲಯದ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ರಾಬರ್ಟ್‌ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ ಕಮಿಟಿಯ ಸದಸ್ಯರಾದ ಸಂತೋಷ ಮಾರ್ಟಿನ್, ಎಂ.ಅಹಿರಾಜ್, ತಾರನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಫಾತೀಮಾ, ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕರಾದ ಗೌರಿ ಸೇರಿದಂತೆ ತಾರನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ