ಮಹಲಿಂಗಪುರ

ಪುರಸಭೆ ತುರ್ತು ಸಾಮಾನ್ಯ ಸಭೆ !

ಪುರಸಭೆ ತುರ್ತು ಸಾಮಾನ್ಯ ಸಭೆ !
ಮಹಾಲಿಂಗಪುರ, ಪುರಸಭೆಯ ಸಾಮಾನ್ಯ ತುರ್ತು ಸಭೆಯಲ್ಲಿ ಕೈ ಬಿಟ್ಟು ಹೋಗಿರುವ 21 ಸರ್ವೆ ನಂಬರ್ ಗಳ ಬಗ್ಗೆ ಗಂಭೀರವಾಗಿ ಚರ್ಚ

ಮಹಾಲಿಂಗಪುರ ಪುರಸಭೆ 21 ಸರ್ವೆ ನಂಬರ್ ಗಳನ್ನು ಪುನಃ ಪುರಸಭೆಯ ವ್ಯಾಪ್ತಿಗೆ ತರಲು ಸಭೆಯ ಸಂಕಲ್ಪ. 

ಮಹಾಲಿಂಗಪುರ02: ಸ್ಥಳೀಯ ಪುರಸಭೆಯ 21 ಸರ್ವೆ ನಂಬರ್ ಗಳನ್ನು ಬೆಳಗಲಿ ಪಟ್ಟಣ ಪಂಚಾಯಿತಿಗೆ ಸೇರಿಸಿದ್ದರ ವಿರುದ್ಧ ಮರಳಿ ಪುರಸಭೆಗೆ ಪಡೆಯುವ ಪ್ರಯುಕ್ತ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಿಸುವ ಕುರಿತು ತುರ್ತು ಸಾಮಾನ್ಯ ಸಭೆ ಪುರಸಭಾಧ್ಯಕ್ಷರಾದ ಸ್ನೇಹಲ್ ಅಂಗಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು.  

ಸಪ್ಟೆಂಬರ್ 04 1995ರ ಪ್ರಕಾರ ಸದರಿ ಸರ್ವೇ ನಂಬರ್ ಗಳನ್ನು ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಸೇರೆ​‍್ಡ ಮಾಡಿ ಅಧಿಸೂಚನೆ ಹೊರಡಿಸಿದ್ದು ಇರುತ್ತದೆ. ಆದರೆ ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಬೆಂಗಳೂರು, ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು 2020ರ ಡಿಸೆಂಬರ್ ತಿಂಗಳಿನಲ್ಲಿ ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಬೆಳಗಲಿ ಗ್ರಾಮದ 21 ಸರ್ವೆ ನಂಬರ್ ಗಳನ್ನು ಪುನಃ ಬೆಳಗಲಿ ಪಟ್ಟಣ ಪಂಚಾಯಿತಿಗೆ ಸೇರೆ​‍್ಡಗೊಳಿಸಲು ಅಧಿಸೂಚನೆಯ ಹೊರಡಿಸಿದ್ದು ಕಂಡುಬರುತ್ತದೆ. 

ಇದರಿಂದ ಪುರಸಭೆಗೆ ವಾರ್ಷಿಕ ಸುಮಾರು 15 ಲಕ್ಷ ರೂಗಳ ತೆರಿಗೆ ನಷ್ಟ ಉಂಟಾಗುವುದಲ್ಲದೇ, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತೊಂದರೆಯಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಾಮಾನ್ಯಸಭೆಯಲ್ಲಿ ವಿವರ ನೀಡಿದರು. 

ಈ ಕುರಿತು ಸಭೆಯು ಕೂಲಂಕೂಶವಾಗಿ ಚರ್ಚಿಸಿ ಈ ಹಿಂದೆ ಮಾನ್ಯ ಗಣ ಸರ್ಕಾರದ ಅಧಿಸೂಚನೆಯಂತೆ 1995 ರಲ್ಲಿ ಬೆಳಗಲಿ ಗ್ರಾಮದ ಸರ್ವೆ ನಂಬರುಗಳನ್ನು ಪ್ರಕಟಿಸಿದ ಪ್ರಕಾರ, ಸಾರ್ವಜನಿಕ ಹಿತದೃಷ್ಟಿಯಿಂದ ಪುರಸಭೆಗೆ ಆರ್ಥಿಕ ಹಿನ್ನಡೆ ಕುರಿತು ಆಕ್ಷೇಪಣೆ ಸಲ್ಲಿಸಿದ್ದಾಗಿಯೂ, ತದನಂತರ ಈ ನಿರ್ಣಯದ ವಿರುದ್ಧವಾಗಿ ಸದರಿ ಸರ್ವೆ ನಂಬರ್ಗಳನ್ನು ಮತ್ತೆ ಪಟ್ಟಣ ಪಂಚಾಯಿತಿಗೆ ಸೇರಿಸಿದ್ದು ಏಕಪಕ್ಷೀಯ ನಿರ್ಣಯವಾಗಿದೆ, ಆದಕಾರಣ ಸಭೆಯಲ್ಲಿ ಉಪಸ್ಥಿತರಿದ್ದ ಆಡಳಿತ ಮತ್ತು ವಿರೋಧ ಪಕ್ಷದ ಸರ್ವಸದಸ್ಯರು ಒಂಟಿ ದ್ವನಿಯಲ್ಲಿ ಘಂಟಾಘೋಷವಾಗಿ, ಊರಿನ ಹಿತದೃಷ್ಟಿಯಿಂದ, ಮುಂದಿನ ದಿನಗಳಲ್ಲಿ, ಆಡಳಿತ ಪಕ್ಷದ ಶಾಸಕರು ಮತ್ತು ಜನಪ್ರತಿನಿಧಿಗಳು ಈ ವಿಷಯದ ಕುರಿತು ಗಂಭೀರವಾಗಿ ಕಾರ್ಯಪ್ರವೃತ್ತರಾಗಿ ಮಹಾಲಿಂಗಪುರ ಪಟ್ಟಣದ ಪುರಸಭೆಯ ಸರ್ವೇ ನಂಬರ್ ಗಳನ್ನು ಯಥಾ ರೀತಿಯಲ್ಲಿ ಉಳಿಸಿಕೊಳ್ಳುವಂತೆ ತೀವ್ರವಾಗಿ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಜಾವೇದ್ ಭಾಗವಾನ್ ಮಾತನಾಡಿ, ಮಾನ್ಯ ಶಾಸಕರು ಮತ್ತು ಆಡಳಿತ ಮಂಡಳಿಯವರು ತಕ್ಷಣವೇ ಮಹಾಲಿಂಗಪುರ ನಾಗರಿಕರ ಹಿತದೃಷ್ಟಿಯಿಂದ ತಕ್ಷಣ ಕಾರ್ಯಪ್ರವೃತ್ತರಾಗದೇ ಹೋದರೆ, ನಾವು ಕಾಂಗ್ರೆಸ್ ಪಕ್ಷದ ವತಿಯಿಂದ, ಜನತೆಯೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ್ ಮತ್ತು ಬಲವಂತಗೌಡ ಪಾಟೀಲ್ ಮಾತನಾಡಿ ನೇಕಾರರಿಗೆ 2013ರಲ್ಲಿ ಸರ್ಕಾರದಿಂದ ಬಂದಿರುವ ಮೂರು ಲಕ್ಷ ರೂಪಾಯಿಗಳ ಸಲಕರಣೆಗಳನ್ನು ಶೀಘ್ರವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಮಾಜಿ ಅಧ್ಯಕ್ಷರ ಪೂರಕ ಭರವಸೆ : ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮಾಜಿ ಪುರಸಭಾಧ್ಯಕ್ಷ ಶೇಖರ್ ಅಂಗಡಿ ಮಾತನಾಡಿ, ನಮ್ಮ ಪಕ್ಷದ ಸಚಿವರು ಮತ್ತು ಶಾಸಕರೊಂದಿಗೆ ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಿ ಪಟ್ಟಣದ 21 ಸರ್ವೇ ನಂಬರ್ ಗಳ ಭೂ ಭಾಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.  

ಸದಸ್ಯರಾದ ಯಲ್ಲನಗೌಡ ಪಾಟೀಲ್, ಬಸವರಾಜ ಹಿಟ್ಟಿನಮಠ, ಚನ್ನಬಸು ಯರಗಟ್ಟಿ, ರವಿ ಜವಳಗಿ, ಬಲವಂತಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಡಾ. ಶ್ರೀಮತಿ ಸವಿತಾ ಕೋಳಿಗುಡ್ಡ, ಶ್ರೀಮತಿ ಭಾವನಾ ರಾಜು ಭಾವಿಕಟ್ಟಿ, ಶ್ರೀಮತಿ ಲಕ್ಷ್ಮಿ ಮುದ್ದಾಪುರ್ ಉಪಸ್ಥಿತರಿದ್ದು, ಸಿಬ್ಬಂದಿಗಳಾದ ಡಿಬಿ ಪಠಾಣ, ವಿ ಜಿ ಕುಲಕರ್ಣಿ, ರಾಘು ನಡುವಿನಮನಿ, ನಾಮದೇವ ಲಮಾಣಿ, ಸಿಪಾಯಿರಾಮು, ಮಹಾಲಿಂಗ ಮಾಂಗ ಇನ್ನಿತರ ಸಿಬ್ಬಂದಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು. 

ಸುದ್ದಿ ಓದಿ