ಮಹಲಿಂಗಪುರ

ಮುಗಳಖೋಡ ಮತ್ತು ಮುರಗೋಡ ಶಿಕ್ಷಕರಿಗೆ ಒಲಿದ ಶಿಕ್ಷಣ ಪರಿಶ್ರಮ ಪ್ರಶಸ್ತಿ

ಮುಗಳಖೋಡ ಮತ್ತು ಮುರಗೋಡ ಶಿಕ್ಷಕರಿಗೆ ಒಲಿದ ಶಿಕ್ಷಣ ಪರಿಶ್ರಮ ಪ್ರಶಸ್ತಿ

ಮುಗಳಖೋಡ ಮತ್ತು ಮುರಗೋಡ ಶಿಕ್ಷಕರಿಗೆ ಒಲಿದ ಶಿಕ್ಷಣ ಪರಿಶ್ರಮ ಪ್ರಶಸ್ತಿ 

ಮಹಾಲಿಂಗಪುರ 22 : ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಯ ಜವಾಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶೈಕ್ಷಣಿಕ ಅವಧಿಯೇ ಮಕ್ಕಳಿಗೆ ಭದ್ರ ಬುನಾದಿ ಇದ್ದಂತೆ ಮಕ್ಕಳಿಗೆ ಪಠ್ಯದ ಜೊತೆಗೆ ಜೀವನ ಪಾಠವನ್ನು ಕಲಿಸುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಯ ದೊಡ್ಡ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.ಎಲೆ ಮರೆ ಸಾಧಕರನ್ನು ಹುಡುಕಿಕೊಂಡ ಬಂದ ಪ್ರಶಸ್ತಿ. ಮಹಾಲಿಂಗಪುರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀ ಬಸವಾನಂದ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಎಸ್ ಎಂ ಮುಗಳಖೋಡ ಮತ್ತು ಗಣಿತ ಶಿಕ್ಷಕರಾದ ಸಿ ಕೆ ಮುರಗೋಡ ಅವರಿಗೆ 2022-23 ನೇ ಸಾಲಿನ ಡಾ ಎಚ್ ಎಫ್ ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಕೊಡಮಾಡುವ "ಶಿಕ್ಷಣ ಪರಿಶ್ರಮ ಹಿರಿಮೆ ಮನ್ನಣೆ "ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ದಿನಾಂಕ್ 19 ನವಂಬರ್ ರಂದು ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟ ಡಾ ಎಫ್ ಹೆಚ್ ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಆಫರ ಆಯುಕ್ತರ ಕಛೆರಿ ಶಾಲಾ ಶಿಕ್ಷಣ ಇಲಾಖೆ ಧಾರವಾಡ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟ ಸಂಸ್ಥೆಗಳ  ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟ ಬಿ ವ್ಹಿ ವ್ಹಿ ಸಂಘದ ಭವನದಲ್ಲಿ ನಡೆದ ಶಿಕ್ಷಣ ಪರಿಶ್ರಮ ದಿನೊತ್ಸವ 2024 ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಂಡು ಶಾಲೆ ಮತ್ತು ನಗರದ ಕೀರ್ತಿಯನ್ನು ಹೆಚ್ಚಿಸಿದ್ದು ಅವರನ್ನು ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ನಗರದ ಗಣ್ಯಮಾನ್ಯರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ