ಹಗರಿಬೊಮ್ಮನಹಳ್ಳಿ

ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಆಂದೋಲನ

ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಆಂದೋಲನ

ಹಗರಿಬೊಮ್ಮನಹಳ್ಳಿ 04:  ಶಾಲೆ ಕಡೆ ನನ್ನ ನಡೆ ಎಂಬ ಆಂದೋಲನದಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಾನ್‌ಬಾಸ್ಕೋ ಸಂಸ್ಥೆ ಸಹಯೋಗದಲ್ಲಿ ವಲ್ಲಭಾಪುರ ಗ್ರಮದ ಮನೆಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಆಂದೋಲನ ಮಾಡಲಾಯಿತು. 

ಈ ವೇಳೆ ಸರಕಾರಿ ಶಾಲಾ ಮುಖ್ಯ ಗುರುಗಳಾದ ಎಂ.ಬಿಷ್ಟಪಯ್ಯ ಮಾತನಾಡಿ ಕೋವಿಡ್ ಸಾಂಕ್ರಾಮಿಕ ಖಾಯಿಲೆಯಿಂದ ಕಳೆದ ಮೂರು ವರ್ಷದ ಮಕ್ಕಳ ಕಲಿಕೆಯಲ್ಲಿ ಅಂತರ ಏರಿ​‍್ಟದೆ ಈ ಅಂತರವನ್ನು ಸರಿದೂಗಿಸಲು ಇಲಾಖೆಯು ಶೈಕ್ಷಣಿಕ ವರ್ಷವೆಂದು ಘೋಷಿಸಿದೆ, ಕಳೆದ ತರಗತಿಗಳ ಪಾಠಗಳನ್ನು ಪುನರಾವಲೋಕನ ಮಡಲಾಗುವುದು ಎಂದು ತಿಳಿಸಿದರು. 

ಆಂದೋಲನವನ್ನು ಎಸ್‌ಡಿಎಂಸಿ ಅಧ್ಯಕ್ಷ ಹ್ಯಾಟಿ ಬೆಟ್ಟಪ್ಪ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ ಕೋವಿಡ್ ಇಡಿ ಜಗತ್ತನ್ನು ತಲ್ಲಣಗೊಳಿಸಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ತಡೆವೊಡ್ಡಿದ್ದು, ಕಲಿಕಾ ಅಂತರ ತಂದಿತ್ತು ಇಲಾಖೆಯ ಈ ಆಂದೋಲನದಲ್ಲಿ ಪುನರ್‌ಕಲಿಕೆ ಒಳಗೊಂಡಿರುವುದುರಿಂದ ಮಕ್ಕಳ ಕಲಿಕೆಗೆ ಇಂಬು ನೀಡಿದಂತಾಗಿದೆ, ಮಕ್ಕಳನ್ನು ಶೈಕ್ಷಣಿಕವಾಗಿ ವಂಚಿತರಾಗಿಸದೇ ಶಾಲೆಗೆ ಕಳುಹಿಸುವಂತೆ ತಿಳಿಸಿದರು. 

ಗ್ರಮದಲ್ಲಿನ ಮನೆ ಮನೆಗಳಿಗೆ ಆಂದೋಲನದ ಮೂಲಕ ತೆರಳಿ ಶಿಕ್ಷಣದ ಬಗ್ಗೆ ಮತ್ತು ಸರಕಾರದ ಈ ಶೈಕ್ಷಣಿಕ ಜಾಗೃತಿಯನ್ನು ಮೂಡಿಸಿ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಜಾಗೃತಗೊಳಿಸಲಾಯಿತು.ಡಾನ್‌ಬಾಸ್ಕೋ ಸಂಸ್ಥೆಯ ತಾಲೂಕು ಸಂಚಾಲಕ ಬಾಣದ ನಾಗರಾಜ ಮಾತನಾಡಿದರು.ಈ ಸಂಧರ್ಭದಲ್ಲಿ ಎಂ.ಕೊಟ್ರೇಶಪ್ಪ, ಪ್ರಶಾಂತ್ ಕುಮಾರ್, ಶಿಕ್ಷಕಿ ಜೀವರತ್ನ, ಕೆ.ಲಕ್ಷ್ಮೀ, ಎಸ್‌ಡಿಎಂಸಿ ಸದಸ್ಯರಾದ ಎಸ್‌.ಕೊಟ್ರೇಶ್, ಕೆ.ಗೋಣಿ ಬಸಪ್ಪ ಸೇರಿದಂತೆ ಗ್ರಾಮದ ಮುಖಂಡರು ಇದ್ದರು. 


ಸುದ್ದಿ ಓದಿ