ಮಹಲಿಂಗಪುರ

ಅನೈತಿಕ ಸಂಬಂಧ ಶಂಕೆ ತಾಯಿಗೆ ಮಕ್ಕಳಿಂದ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆ.

ಅನೈತಿಕ ಸಂಬಂಧ ಶಂಕೆ ತಾಯಿಗೆ ಮಕ್ಕಳಿಂದ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆ.

ಮಹಾಲಿಂಗಪುರ: ರವಿವಾರ ಮಕ್ಕಳಿಂದ ಹಲ್ಲೆಗೊಳಗಾಗಿದ್ದ ರಬಕವಿ/ ಬನಹಟ್ಟಿ ತಾಲೂಕಿನ ಸಮೀಪದ ಮದಭಾವಿ ಗ್ರಾಮದ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಪ್ರಕರಣ ಸ್ಥಳೀಯ ಠಾಣೆಯಲ್ಲಿ ದಾಖಲಾಗಿದೆ. 

45 ವರ್ಷದ ಮಹಾನಂದಾ ಶ್ರೀಶೈಲ.ತೇಲಿ ಮೃತ ಮಹಿಳೆ ಅಂದಾಜು ಐದು ವರ್ಷಗಳಿಂದ ಸಮ್ಮಂಧಿಕನೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳೆನ್ನುವ ವಿಷಯ ಗಂಡ ಮತ್ತು ಮಕ್ಕಳಿಗೆ ತಿಳಿದು, ಅವರೂ ಸಹ ಮತ್ತೊಮ್ಮೆ ಇಂತಹ ಕೃತ್ಯ ಮಾಡಬೇಡ ಎಂದು ಬುದ್ಧಿವಾದ ಹೇಳಿದ ಮೇಲೂ ಸಹ ತನ್ನ ಛಾಳಿ ಮುಂದುವರಿಸಿದ್ದಳೆನ್ನಲಾಗಿದೆ. 

ಇದೆ ಸಿಟ್ಟಿನ ಭರದಲ್ಲಿ ಶಿವು ಶ್ರೀಶೈಲ.ತೇಲಿ ಮತ್ತು ಶ್ರೀಕಾಂತ ಶ್ರೀಶೈಲ. ತೇಲಿ ಮಕ್ಕಳಿಬ್ಬರು ಸೇರಿ ತಮ್ಮ ತೋಟದ ಮನೆಯಲ್ಲಿ ರವಿವಾರ 7.30ರ ಸಮಯದಲ್ಲಿ ಯಾವುದೋ ವಸ್ತುವಿನಿಂದ ಮೃತಳ ತಲೆಗೆ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ, ನಂತರ ಮಹಾಲಿಂಗಪುರ ಪಟ್ಟಣದ ರಿತಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 4ರಂದು ಸೋಮವಾರ 5ಗಂಟೆಗೆ ಮಹಿಳೆ ಮೃತಪಟ್ಟಿದ್ದಾಳೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಮೃತ ಮಹಾನಂದಾ ಗಂಡ ಶ್ರೀಶೈಲ ಅಲ್ಲಪ್ಪ. ತೇಲಿ ನೀಡಿದ ದೂರಿನನ್ವಯ ಮತ್ತು ರಿತಿ ಆಸ್ಪತ್ರೆಯ ಎಂಎಲ್ಸಿ ಆಧರಿಸಿ ಸ್ಥಳೀಯ ಠಾಣಾಧಿಕಾರಿ ಪ್ರವಿಣ ಬಿಳಿಗಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. 


ಸುದ್ದಿ ಓದಿ