ಮಗುವಿನ ಯಶಸ್ಸಿನಲ್ಲಿ ತಾಯಿಯ ಪಾತ್ರ ಮುಖ್ಯ: ಧನಂಜಯ
ಮಹಾಲಿಂಗಪುರ 23: ಮಗುವಿನ ಯಶಸ್ಸಿನಲ್ಲಿ ತಾಯಿಯ ಪಾತ್ರ ಮುಖ್ಯವಾಗಿದೆ ಎಂದು ಪ್ರಭಾರ ಮುಖ್ಯ ಗುರುಗಳಾದ ಧನಂಜಯ ಕುಲಕರ್ಣಿಯವರು ಹೇಳಿದರು.
ಸರಕಾರಿ ಪ್ರೌಢ ಶಾಲೆಯಲ್ಲಿ ಖಖಐಅ ವಿದ್ಯಾರ್ಥಿಗಳ ಪ್ರಗತಿ ಪರೀಶೀಲನ ಮತ್ತು ತಾಯಂದಿರ ಸಭೆ ನಡೆಯಿತು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಗಾಗಿ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕೆಂದು ತಿಳಿಸಿದರು. ತಾಯಂದಿರು ತಮ್ಮ ಮಕ್ಕಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳನ್ನು ಪರೀಶೀಲನೆ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದರು.ತಾಯಂದಿರು ತ್ಯಾಗ ಮೂರ್ತಿಗಳು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್, ಟಿವಿ ಧಾರಾವಾಹಿ ತ್ಯಾಗ ಮಾಡಿ ಅವರ ಅಭ್ಯಾಸಕ್ಕೆ ಅನುಕೂಲವಾಗುವಂತೆ ಮನೆಯಲ್ಲಿ ಸೂಕ್ತವಾದಂತಹ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ಕನ್ನಡ ಗುರುಮಾತೆಯರಾದ ಓ,ಃ ಬೆಟಗೇರಿ ತಿಳಿಸಿದರು. ಗುರುಮಾತೆಯರಾದ ಎಂ.ಜಿ.ಅಲ್ಲಾಖಾನ, ಬಿ ಎಸ್ ಜಿರಲೀ ಹಾಗೂ ರಾಜೇಶ್ವರಿ ಬೀಳಗಿ ತಾಯಂದಿರ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಯಂದಿರಿಗೆ ವಿದ್ಯಾರ್ಥಿಗಳು ಪಾದ ಮುಟ್ಟಿ ನಮಸ್ಕರಿಸಿ ತಾವು ಉತ್ತೀರ್ಣರಾಗುತ್ತೇವೆ ಎಂದು ಪ್ರಮಾಣ ಮಾಡಿದರು. 10ನೇ ತರಗತಿಯ ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಾಯಂದಿರ ಪಾದವನ್ನು ನಮಸ್ಕರಿಸಿ ಶಿಕ್ಷಕರ ಸಮ್ಮುಖದಲ್ಲಿ ನಾವು ಉತ್ತಮ ಫಲಿತಾಂಶವನ್ನು ಪಡೆದುಕೊಂಡು ನಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳು ವುದರ ಜೊತೆಗೆ ಈ ನಾಡಿನ ಹೆಮ್ಮೆಯ ಅಧಿಕಾರಿಗಳಾಗಿ ಹೊರಹೊಮ್ಮುತ್ತವೆ ಎಂದರು. ಖ.ಒ.ಕಂಬಾರ ಕಾರ್ಯಕ್ರಮ ನಿರೂಪಿಸಿ, ರಾಜೇಶ್ವರಿ ಜಾಲಿಗಿಡದ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಗುರುವೃಂದದವರಾದ ಸದಾಶಿವ ಕಂಬಾರ, ಪಿ.ಎ.ಖಾನವೀಲಕರ, ಪಿ.ಸಿ.ಫಕೀರಣ್ಣವರ, ಪಿ .ಎಸ್.ಕೋಲಕಾರ, ಆರ್.ವೈ.ಕರಿಗಾರ, ಜೆ.ಎನ್.ಕಾಪಸೆ ಉಪಸ್ಥಿತರಿದ್ದರು.