ಕೆ.ಜಿ ಹಳ್ಳಿ ನೂರಾಕ್ಕಿಂತ ಹೆಚ್ಚು ಕುಟುಂಬಗಳು ಬೀದಿ ಪಾಲು, ಕ್ಷೇತ್ರದ ಶಾಸಕರ ಮೌನ :ವೆಲ್ಫೇರ್ ಪಾರ್ಟಿ ಆಕ್ರೋಶ

ಕೆ.ಜಿ ಹಳ್ಳಿ ನೂರಾಕ್ಕಿಂತ ಹೆಚ್ಚು ಕುಟುಂಬಗಳು ಬೀದಿ ಪಾಲು, ಕ್ಷೇತ್ರದ ಶಾಸಕರ ಮೌನ :ವೆಲ್ಫೇರ್ ಪಾರ್ಟಿ ಆಕ್ರೋಶ
More than a hundred families in KG village are homeless, the MLA of the constituency is silent: Welf

                     ಬೆಂಗಳೂರು 22: ನವಂಬರ್ 3 ರಂದು ನಗರದ ಮಧ್ಯ ಭಾಗದ ಕೆ ಜಿ ಹಳ್ಳಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಬುಲ್ಡೋಜರ್ಗಳ ಮೂಲಕ 30 ಕ್ಕಿಂತ ಹೆಚ್ಚು ಮನೆಗಳನ್ನು ನೆಲಸಮ ಮಾಡಿ ನೂರಕಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ಬಂದಿದ್ದಾರೆ. ಈ ಬಗ್ಗೆ ಕ್ಷೇತ್ರದ ಶಾಸಕರು ಮೌನವಾಗಿದ್ದು ಯಾವುದೇ ನೇರವು ನೀಡುತ್ತಿಲ್ಲ ಯಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋ ತಾಹೇರ್ ಹುಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.

                   ಬೆಂಗಳೂರಿನ ಮಧ್ಯ ಭಾಗದ ಕೆ.ಜಿ ಹಳ್ಳಿಯಲ್ಲಿ ನಡೆದ ಧ್ವಂಸ ಕಾರ್ಯಾಚರಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಮನೆ ಗಳು ನೆಲಸಮವಾದ ನಂತರ ನೂರಕ್ಕೂ ಹೆಚ್ಚು ಕುಟುಂಬಗಳು ಆಶ್ರಯವಿಲ್ಲದೆ ಉಳಿದಿದ್ದಾರೆ. ಇಲ್ಲಿನ ನಿವಾಸಿಗಳ ಪ್ರಕಾರ ಇವರನ್ನು ಸರಕಾರವೇ ಸ್ಲಮ್ ಬೋರ್ಡ್‌ ಅಡಿಯಲ್ಲಿ ಮನೆಗಳು ಮಂಜೂರು ಮಾಡಿದ್ದು ಇವರು ವಿದ್ಯುತ್ ಮತ್ತು ನೀರಿನ ಬಿಲ್‌ಗಳು, ಮನೆ ದಾಖಲೆಗಳು ಮತ್ತು ಎಸ್‌ಸಿ/ಎಸ್‌ಟಿ ಪ್ರಮಾಣಪತ್ರಗಳು ಸೇರಿದಂತೆ ದಾಖಲೆಗಳನ್ನು ಹೊಂದಿದ್ದಾರೆ ಆದರು ಸಹ , ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ.  

                 ಸರಿಯಾದ ಸೂಚನೆ ಅಥವಾ ಪುನರ್ವಸತಿ ಕ್ರಮಗಳಿಲ್ಲದೆ ಧ್ವಂಸ ಕಾರ್ಯಾಚರಣೆಗಳು ನಡೆದಿದ್ದು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಧ್ವಂಸವನ್ನು ಕಾರ್ಯಾಚರಣೆ 2 ದಿನ ತಡವಾಗಿ ಮಾಡಿ ಯಂದು ವಿರೋಧಿಸಿ ನಿವಾಸಿಗಳು  ಪ್ರತಿಭಟಿಸಿದಾಗ, ರೈಲ್ವೆ ರಕ್ಷಣಾ ಪಡೆ (ಆರಿ​‍್ಪಎಫ್) ಸಿಬ್ಬಂದಿ ಲಾಠಿ ಚಾರ್ಜ್‌ ಮಾಡಿ ನಿವಾಸಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಯಂದು ಅವರು ದೊರಿದ್ದಾರೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯದ ನಿಯೋಗ ಈ ಪ್ರದೇಶಕ್ಕೆ ಭೇಟಿ ನೀಡಿ ಪೀಡಿತ ಜನರ ಅಹವಾಲು ಕೇಳಿ ಒಗ್ಗಟ್ಟನ್ನು ವ್ಯಕ್ತಪಡಿಸಿದೆ.

                   ಪರ್ಯಾಯ ವೆವಸ್ಥೆ ಮಾಡದೆ ತೆರವು ಕಾರ್ಯಾಚರಣೆ ಮತ್ತು ಪೊಲೀಸ್ ದೌರ್ಜನ್ಯ ವನ್ನು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ತೀವ್ರವಗಿ ಖಂಡಿಸುತ್ತದೆ, ಇದು ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಮತ್ತು ಕಾರ್ಮಿಕ ವರ್ಗದ ಕುಟುಂಬಗಳ ಮೇಲಿನ ಕ್ರೂರ ದಾಳಿ ಎಂದು ಕರೆದಿದೆ.  ಸರಕಾರ ತಕ್ಷಣ ಈ ಕುಟುಂಬಗಳಿಗೆ ಪುನರ್ವಸತಿ ಮತ್ತು ಎಲ್ಲಾ ಸ್ಥಳಾಂತರಗೊಂಡ ಕುಟುಂಬಗಳಿಗೆ ನ್ಯಾಯಯುತ ಪರಿಹಾರವನ್ನು ವದಗಿಸಬೇಕು ಎಂದು ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಇಂಜಿನಿಯರ್ ಹಬೀಬುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿಯಾದ ರಿಯಾಜ್ ಅಹ್ಮದ್, ಮುಖಂಡರಾದ ಸೈಯದ್ ಇರ್ಫಾನ್ ಇತರರು ಇದ್ದರು. 


ಸುದ್ದಿ ಓದಿ