ಬಳ್ಳಾರಿ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಭಾಗವಹಿಸಿ : ಕಟ್ಟೆ ಸ್ವಾಮಿ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಭಾಗವಹಿಸಿ : ಕಟ್ಟೆ ಸ್ವಾಮಿ

ಬಳ್ಳಾರಿ 29: ನಗರದಲ್ಲಿ ಟ್ರೇಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕ, ಜಿಲ್ಲೆಯ ಮಕ್ಕಳಿಗೆ, ಕರಾಟೆ ಬೆಲ್ಟ್ ಪರೀಕ್ಷೆಯನ್ನು ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸದರಿ ಕರಾಟೆ ಪರೀಕ್ಷೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು‌. ಇದೇ ವೇಳೆಯಲ್ಲಿ ಅಕಾಡೆಮಿಯ ತಾಂತ್ರಿಕ ನಿರ್ದೇಶಕರಾದ ಮುಖ್ಯ ಕರಾಟೆ ಪರಿವೀಕ್ಷಕರಾದ ಸುಭಾಷ್ ಚಂದ್ರ ಮಾತಾನಾಡಿ ಕರಾಟೆ ತರಬೇತಿಯು ಇಂದಿನ ದಿನಗಳಲ್ಲಿ ಮಕ್ಕಳಿಗೆ ಅತ್ಯಂತ ಮುಖ್ಯವಾಗಿದೆ, ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಹಾಯಮಾಡುತ್ತದೆ. ಹಾಗೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಈ ಕರಾಟೆ ಕಲೆ ಅವಶ್ಯವಾಗಿದೆ ಎಂದರು.ತರುವಾಯ ಕರಾಟೆ ಅಕಾಡೆಮಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ ಮಾತಾನಾಡಿ ನಮ್ಮ ಕರಾಟೆ ಅಕಾಡೆಮಿಯು ಈಗಾಗಲೇ ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಮತ್ತು ಪ್ರಶಸ್ತಿಗಳನ್ನು ನಮ್ಮ ಕರಾಟೆ ಪಟುಗಳು ಪಡೆದಿದ್ದಾರೆ. ಅದೇ ರೀತಿ ನಮ್ಮ ಅಕಾಡೆಮಿಯ ತರಬೇತುದಾರರು ಮುಂದಿನ ತಿಂಗಳು ವಿಜಯನಗರ ಜಿಲ್ಲೆಯ, ಹೊಸಪೇಟೆ ಯಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ ಮತ್ತು ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತರಬೇತಿ ನೀಡುವ ಮೂಲಕ ಮಕ್ಕಳನ್ನು ತಯಾರಿ ಮಾಡಲು ತಾವೇಲ್ಲರೂ ಶ್ರಮಿಸಬೇಕು ಎಂದು ಸೂಚಿಸಿದರು.

ಈ ಕರಾಟೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿದ ಜಿಲ್ಲಾ ಕ್ರೀಡಾಂಗಣ ಅಧಿಕಾರಿಗಳಿಗೆ ಧನ್ಯವಾದಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾಲಕ ಪೋಷಕರು, ಕ್ರೀಡಾ ಅಭಿಮಾನಿಗಳು, ಕರಾಟೆ ಶಿಕ್ಷಕರು ಇತರರು ಆಗಮಿಸಿದ್ದರು.

ಸುದ್ದಿ ಓದಿ