ಸಿಂಧಗಿ

ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕನಸಿನ ಕೂಸು: ರಮೇಶ ಜಿಗಜಿಣಗಿ

ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕನಸಿನ ಕೂಸು: ರಮೇಶ ಜಿಗಜಿಣಗಿ

ಸಿಂದಗಿ 20: ರಾಜ್ಯದ ಸಮಾಜಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಜೊತೆ ಜಗಳಾಡಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸುವಲ್ಲಿ ಯಶಸ್ವಿಯಾದೆ. ಈ ಶಾಲೆ ನನ್ನ ಕನಸಿನ ಕೂಸು. ಬಡ ಪ್ರತಿಭಾವಂತ ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಗುಣಮಟ್ಟದ ಶಿಕ್ಷಣ ನೀಡುವ ವಸತಿ ಶಾಲೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

ಪಟ್ಟಣದ ಮಾಂಗಲ್ಯ ಭವನದಲ್ಲಿ ಭೀಮರಾಯಗೌಡ ಬಿರಾದಾರ ಮಾಗಣಗೇರಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಈ ಶಾಲೆ ಪ್ರಾರಂಭಿಸಲು ಆಂಧ್ರ​‍್ರದೇಶ ರಾಜ್ಯದಲ್ಲಿರುವ ಸರ್ಕಾರಿ ವಸತಿ ಶಾಲೆ ನನಗೆ ಪ್ರೇರಣೆಯಾಗಿತ್ತು. ಅಂತೆಯೇ ಅಲ್ಲಿಯ ಶಾಲೆಯ ಸಮಗ್ರ ಮಾಹಿತಿ ಪಡೆದುಕೊಂಡು ಅದೇ ಮಾದರಿಯ ಶಾಲೆ ನಮ್ಮ ರಾಜ್ಯದಲ್ಲಿ ಪ್ರಾರಂಭಿಸಲು ಕ್ಯಾಬಿನೆಟ್‌ನಲ್ಲಿ ವಿರೋಧವಿದ್ದರೂ ಪಟ್ಟು ಹಿಡಿದು ಒಪ್ಪಿಗೆ ಪಡೆದುಕೊಂಡಿದ್ದೆ ಎಂದು ವಿವರಿಸಿದರು. 

ವಿಜಯಪುರ ವನಶ್ರೀ ಸಂಸ್ಥಾನಮಠದ ಜಯಬಸವ ಕುಮಾರ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ರಾಜಕಾರಣ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದಕ್ಕಾಗಿವೆ. ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸುವವರು ಮತದಾರರೇ. ಚುನಾವಣೆಗಳಲ್ಲಿ ಹಣ ಹಂಚುವ ರಾಜಕಾರಣಿಗಳೇ ಜಾಸ್ತಿ. ಸಿಂದಗಿ ಪಟ್ಟಣದಲ್ಲಿ ಭೀಮರಾಯಗೌಡ ಬಿರಾದಾರ ಮಾಗಣಗೇರಿ ಫೌಂಡೇಷನ್ ವತಿಯಿಂದ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಅವರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ವಿಶೇಷವಾಗಿದೆ ಮತ್ತು ಸಮಾಜಮುಖಿ ಕೆಲಸವಾಗಿದೆ ಎಂದು ಹೇಳಿದರು. 

ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ರಮೇಶ ಜಿಗಜಿಣಗಿಯವರ ಮಹತ್ವಾಕಾಂಕ್ಷೆ ಸರ್ಕಾರಿ ಶಾಲೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ಮಾಡಿದ ಸಾಧನೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಆತ್ಮವಿಶ್ವಾಸ ಮೂಡಿಸಲು ಪ್ರೇರಣೆಯಾಗಿದೆ. ಈ ವಿದ್ಯಾರ್ಥಿಯ ಜೊತೆಗೆ ಇನ್ನೂಳಿದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ಮಾಡಿದ ಭೀಮರಾಯಗೌಡ ಬಿರಾದಾರ ಮಾಗಣಗೇರಿ ಫೌಂಡೇಷನ್ ವತಿಯಿಂದ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. 

ಭೀಮರಾಯಗೌಡ ಬಿರಾದಾರ ಮಾಗಣಗೇರಿ ಫೌಂಡೇಷನ್ ವತಿಯಿಂದ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಸೇರಿದಂತೆ ಸಮಾಜಮುಖಿ ಕಾರ್ಯಮಾಡುವುದು ಫೌಂಡೇಶನ್‌ದ ಮುಖ್ಯ ಉದ್ಧೇಶವಾಗಿದೆ ಎಂದು ಹೇಳಿದರು. 

ಪ್ರಸ್ತುತ ವರ್ಷದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾ​‍್ಯಂಕ್ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಅಂಕಿತಾ ಕೊಣ್ಣೂರ ಮಾತನಾಡಿದರು. 

ಸಾಹಿತಿ ಶಿವಶರಣಪ್ಪ ಶಿರೂರ ಉಪನ್ಯಾಸ ನೀಡಿದರು. ಆಲಮೇಲ ವಿರಕ್ತಮಠದ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕ ರಮೇಶ ಭೂಸನೂರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಅಶೋಕ ಮನಗೂಳಿ ಸಹೋದರ ಡಾ.ಮುತ್ತು ಮನಗೂಳಿ, ಕನ್ನೊಳ್ಳಿ ಹಿರೇಮಠದ ಶ್ರೀ, ಯಂಕಂಚಿ ಹಿರೇಮಠದ ಶ್ರೀಗಳು, ಗುರನಗೌಡ ಬಿರಾದಾರ, ಸಿ.ಪಿ.ಐ ಪರುಶರಾಮ ಮನಗೂಳಿ ಎಸ್‌.ಕೆ. ಗುಗ್ಗರಿ, ಶಿವಕುಮಾರ ಬಿರಾದಾರ, ಶಿವಕುಮಾರ ಕಲ್ಲೂರ, ಸಿದ್ಧಲಿಂಗ ಚೌಧರಿ, ಹಾಗೂ ಮಾಗಣಗೇರಿ ಬಿರಾದಾರ ಕುಟುಂಬದ ಸದಸ್ಯರು ಇದ್ದರು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಲಮೇಲ ಮತ್ತು ಸಿಂದಗಿ ತಾಲ್ಲೂಕಿನ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿ ಯಲ್ಲಿ ಅಚಿಕ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. 


ಸುದ್ದಿ ಓದಿ