ಮಹಲಿಂಗಪುರ

ಆಧುನೀಕರಣ, ಜಾಗತೀಕರಣ ಪರಿಣಾಮ ಮೂಲ ಸಂಸ್ಕೃತಿ ಕಣ್ಮರೆ: ಎಸ್‌.ಆಯ್‌.ಕುಂದಗೋಳ

ಆಧುನೀಕರಣ, ಜಾಗತೀಕರಣ ಪರಿಣಾಮ ಮೂಲ ಸಂಸ್ಕೃತಿ ಕಣ್ಮರೆ: ಎಸ್‌.ಆಯ್‌.ಕುಂದಗೋಳ


ಮಹಾಲಿಂಗಪುರ 21: ಆಧುನೀಕರಣ, ಜಾಗತೀಕರಣ ಪರಿಣಾಮ ನಮ್ಮ ಮೂಲ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ಕೆಎಲ್‌ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್‌.ಆಯ್‌.ಕುಂದಗೋಳ ಹೇಳಿದರು. 

ವಿವೇಕ ಜಯಂತಿ ಮತ್ತು ಮಕರಸಂಕ್ರಮಣ ಹಬ್ಬದ ನಿಮಿತ್ಯ ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮದ ಮೂಲಕ ನಮ್ಮ ದೇಶ, ನಾಡಿನ ಸಂಸ್ಕೃತಿ, ಆಚಾರಗಳನ್ನು ನೆನಪಿಸುವ ಮತ್ತು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದು ಸ್ವಾಗತಾರ್ಹ ಎಂದರು. 

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಚಂದ್ರಶೇಖರ ಮೋರೆ ಮಾತನಾಡುತ್ತಾ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಿಗೆ ವಿದ್ಯೆಯ ಜೊತೆಗೆ ಮೌಲ್ಯಾಧಾರಿತ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕಾಗಿದ್ದು ಅಗತ್ಯವಾಗಿದೆ ಎಂದರು. 

ಗಮನ ಸೆಳೆದ ಮಕ್ಕಳ ಸ್ಪರ್ಧೆಗಳು: ಸಂಕ್ರಾಂತಿ ಸೊಗಡು-ವಿವೇಕ ಚಿಂತನೆ ಕಾರ್ಯಕ್ರಮದ ನಿಮಿತ್ಯ 1ರಿಂದ 7ನೇ ತರಗತಿವರೆಗೂ ಎಲ್ಲಾ ಮಕ್ಕಳಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಕ್ರಾಂತಿ ಹಬ್ಬದ ಸೊಗಡು, ವೇಷಭೂಷನ ಸ್ಪರ್ಧೆ, ಚಿತ್ರಕಲಾ, ನೃತ್ಯ, ಪ್ಯಾಷನ್ ಶೋ, ಕೇಶಾಲಂಕಾರ, ಪ್ರಬಂಧ ಸ್ಪರ್ಧೆ, ಕಿರುರೂಪಕ, ಛದ್ಮವೇಷಧಾರಿಗಳ ಸ್ಪರ್ಧೆ, ಜಾನಪದ ಸೊಗಡಿನ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಿ ಎಲ್ಲರ ಗಮನ ಸೆಳೆಯುವಂತೆ ಮಾಡಿ ಪ್ರತಿಯೊಂದು ಮಗುವೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದ ಶಿಕ್ಷಕಿಯರ ಶ್ರಮ ಶ್ಲಾಘನೀಯ. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲೆ ಮುಖ್ಯಗುರುಮಾತೆ ಆರ್‌.ಎ.ಬನ್ನೂರ ಮಾತನಾಡಿದರು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎ.ಬಂತಿ, ಪ್ರೌಢಶಾಲೆಯ ಪ್ರಭಾರಿ ಉಪಪ್ರಾಚಾರ್ಯ ಬಿ.ಎನ್‌.ಅರಕೇರಿ, ಶಿಕ್ಷಕಿಯರಾದ ಜೆ.ಎಸ್‌.ಹಿರೇಮಠ, ಕೆ.ಎಂ.ಹುನಗುಂದ, ಬಿ.ಎಸ್‌.ಜೇಡರ, ಎಸ್‌.ಎಸ್‌.ಹುಡೇದ, ಎನ್‌.ಪಿ.ಹೊಸಪೇಟಿ, ನೀಲಿ ಮೇಡಂ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ