ಬಳ್ಳಾರಿ

ಯುವಕ ಕಾಣೆ: ಪತ್ತೆಗೆ ಮನವಿ

ಯುವಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ 10:ತಾಲ್ಲೂಕಿನ ಗುಡುದೂರು ಗ್ರಾಮದ ಮೇಘರಾಜ ಎನ್ನುವ 23 ವರ್ಷದ ಯುವಕ ಸೆ.28 ರಂದು ಲೇಬರ್ ಕಾರ್ಡ್‌ ಮಾಡಿಸಿಕೊಂಡು ಬರುತ್ತೇನೆ ಎಂದು ಬಳ್ಳಾರಿಗೆ ಹೋದವನು ಹಿಂತಿರುಗಿ ಬಂದಿರುವುದಿಲ್ಲ, ಈ ಕುರಿತು ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. 

ಯುವಕನ ಚಹರೆ ಗುರುತು: ಎತ್ತರ 5.2 ಅಡಿ, ಕೋಲುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿರುತ್ತಾನೆ. ಯುವಕನು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. 

ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್‌ಪಿ ದೂ.08392-258100, ಸಿರುಗುಪ್ಪ ಉಪ ವಿಭಾಗ ಡಿ.ಎಸ್‌.ಪಿ ಮೊ.9480803021, ಪಿ.ಡಿ ಹಳ್ಳಿ ವೃತ ಸಿ.ಪಿ.ಐ ಮೊ.9480803031, ಮೋಕಾ ಪೊಲೀಸ್ ಠಾಣೆ ಪಿ.ಎಸ್‌.ಐ ದೂ.08392-293228, ಮೊ.9480803050 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ