ಬಳ್ಳಾರಿ

ವ್ಯಕ್ತಿ ಕಾಣೆ

ವ್ಯಕ್ತಿ ಕಾಣೆ

ಹೊಸಪೇಟೆ(ವಿಜಯನಗರ) 30:  ತಮಿಳುನಾಡಿನ ಅಂಬತೂರು ತಿರುವಳೂರಿನ ವಿಲ್ಲಿವಾಕಂನ 70ವರ್ಷದ ಆರ್.ದಯಾಶಂಕರ ಎಂಬ ವ್ಯಕ್ತಿ ಮಾನಸಿಕ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಹೊಸಪೇಟೆಯ ಟಿ.ಬಿ. ಡ್ಯಾಂನ ವಂಕಾಯ್ ಕ್ಯಾಂಪ್‍ನಲ್ಲಿರುವ ಸಂಬಂಧಿಯ ಮನೆಗೆ ಬಂದಿದ್ದು, ಮಾ.13ರಂದು ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಟಿ.ಬಿ.ಡ್ಯಾಂ ಪೊಲೀಸ್ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ  ವ್ಯಕ್ತಿಯ ಚಹರೆ ಗುರುತು: 5.6 ಅಡಿ ಎತ್ತರ,  ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ್ ಮತ್ತು ಟೋಪಿ ಧರಿಸಿದ್ದಾರೆ,  ತಮಿಳು ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.              

ಈ ವ್ಯಕ್ತಿಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಎಸ್.ಪಿ.ಬಳ್ಳಾರಿ : 08392-258400,  ಡಿ.ಎಸ್.ಪಿ. ಹೊಸಪೇಟೆ: 08394-224204, ಸಿ.ಪಿ.ಐ. ಟಿ.ಬಿ.ಡ್ಯಾಂ: 08394-232277, ಪಿ.ಎಸ್.ಐ. ಟಿ.ಬಿ.ಡ್ಯಾಂ : 08394-259233ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.



ಸುದ್ದಿ ಓದಿ