ಯುವತಿ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಡಿ.18: ತಾಲೂಕಿನ ರೂಪನಗುಡಿ ಗ್ರಾಮದ ಬಾರಿಕರ ಓಣಿಯ 1ನೇ ವಾರ್ಡ್‌ನ ನಿವಾಸಿ ಗೌರಿ ಎನ್ನುವ 17 ವರ್ಷದ ಯುವತಿ ಡಿ.14 ರಂದು ಕಾಣೆಯಾಗಿರುವ ಕುರಿತು ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ.
ಯುವತಿಯ ಚಹರೆ ಗುರುತು: ಎತ್ತರ 5.5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಹೊಂದಿದ್ದು, ಆಕಾಶ ನೀಲಿ ಬಣ್ಣದ ಸ್ಕರ್ಟ್, ನೀಲಿ ಬಣ್ಣದ ಪ್ಯಾಂಟ್ ಮತ್ತು ವೇಲು ಧರಿಸಿರುತ್ತಾಳೆ.
ಯುವತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯ ದೂ.08392-265010, ಪಿ.ಡಿ.ಹಳ್ಳಿ ವೃತ್ತ ಸಿಪಿಐ ದೂ.08392-276461, ಸಿರುಗುಪ್ಪ ಉಪವಿಭಾಗ ಡಿ.ಎಸ್.ಪಿ ದೂ.08396-276000, ಬಳ್ಳಾರಿ ಎಸ್.ಪಿ ದೂ.08932-258400 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.