ಬಂಜೇತನ ನಿವಾರಣೆಗಾಗಿ ಜೊಲ್ಲೆ ಗ್ರುಪ್ ನಿಂದ ಮೈಲುಗಲ್ಲು : 5ರಂದು ಕನೇರಿ ಮಠದಲ್ಲಿ ಸಿದ್ದಗೀರಿ ಜನನಿ ಆಸ್ಪತ್ರೆ ಉದ್ಘಾಟನೆ : ಸಚಿವೆ ಶಶಿಕಲಾ ಜೊಲ್ಲೆ

ಬಂಜೇತನ ನಿವಾರಣೆಗಾಗಿ ಜೊಲ್ಲೆ ಗ್ರುಪ್ ನಿಂದ ಮೈಲುಗಲ್ಲು : 5ರಂದು ಕನೇರಿ ಮಠದಲ್ಲಿ ಸಿದ್ದಗೀರಿ ಜನನಿ ಆಸ್ಪತ್ರೆ ಉದ್ಘಾಟನೆ : ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ : ಬಂಜೆತನ ನಿವಾರಣೆ ಹಾಗೂ ಬಡವರಿಗೆ ಮಕ್ಕಳ ಇಲ್ಲದ ಕೊರಗು ನಿವಾರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಕನೇರಿಯ ಸಿದ್ದಗೀರಿ ಮಠದಲ್ಲಿ ಬರುವ ದಿ. 5ರಂದು ಸಿದ್ದಗೀರಿ ಜನನಿ ಆಸ್ಪತ್ರೆ ಉದ್ಘಾಟನೆಯು ನಡೆಯಲಿದೆ ಎಂದು ರಾಜ್ಯ ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಇಂದಿಲ್ಲಿ ಹೇಳಿದರು.

   ನಗರದ ಖಾಸಗಿ ಹೊಟೇಲ್‍ನಲ್ಲಿ ಗುರುವಾರ ಸಂಜೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಈ ರೀತಿಯ ಚಾರಟಿ ಆಸ್ಪತ್ರೆಯು ಪ್ರಥಮದಾಗಿದೆ. ಈ ಆಸ್ಪತ್ರೆಯಲ್ಲಿ ನುರಿತ ತಜ್ಞರು ಕಾರ್ಯ ಮಾಡಲಿದ್ದಾರೆ. ಇದು ಬಡವರಿಗೆ ಬಂಜೆತನ ನಿವಾರಣೆಗೆ ಕಡಿಮೆ ವೆಚ್ಚದಲ್ಲಿ ಅಂದರೆ 75 ಸಾವಿರ ರೂ.ಗಳಲ್ಲಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನುಡಿದರು.   ಜಗತ್ತಿನ ಮುಂದುವರೆದ ದೇಶಗಳಾದ ಅಮೆರಿಕಾ ಮತ್ತು ಲಂಡನನಲ್ಲಿರುವ ಆಸ್ಪತ್ರೆಗಳಲ್ಲಿ ಇರುವಂತಹ ಯಂತ್ರೋಪಕರಣಗಳ ಮಾದರಿಯ ಯಂತ್ರೋಪಕರಣಗಳನ್ನು ಈ ಆಸ್ಪತ್ರೆಗೆ ತರಲಾಗಿದೆ. ಗರ್ಭ ಸಂಸ್ಕಾರ ನೀಡುವ ಕಾರ್ಯ ಮಾಡಲಾಗುತ್ತಿದೆ. ಬಡ ದಂಪತಿಗಳು ಇದ್ದರೆ ಇಲ್ಲಿ ತಮ್ಮ ಬಂಜೇತನ ಸಮಸ್ಯ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

    ಇದಕ್ಕೆ 75 ಸಾವಿರ ಕಡಿಮೆ ಬೆಳೆಯಲ್ಲಿ ಚಾರಿಟಿ ಟ್ರಸ್ಟ್ ಇರುವದರಿಂದ ಕಡಿಮೆ ಖರ್ಚಿನಲ್ಲಿ ಮಾಡಲಾಗುತ್ತದೆ. ಶ್ರೀಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಕಾದಂಬರಿ ಎಂಬ ಐಎಎಸ್ ಅಧಿಕಾರಿ ಹಾಗೂ ಓರ್ವ ಮಹಿಳಾ ಐಪಿಎಸ್ ಅಧಿಕಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತ ಇರುತ್ತಾರೆ. ನೋ ಪ್ರಾಪಿಟ್ ನೋ ಲಾಸ್ ಎಂಬ ವಾಕ್ಯದೊಂದಿಗೆ ಈ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಗಿದೆ. ಇದರಲ್ಲಿ ಆಯುರ್ವೇದ ಹಾಗೂ ಆಲಯೋಪಥಿಕ ಎರಡು ಒಳಗೊಂಡಿವೆ. ಇದರಲ್ಲಿ ಯೋಗಾ ಪ್ರಾಣಾಯಾಮ ಕೂಡಾ ಒಳಗೊಂಡಿವೆ. ಅಲ್ಲದೆ ಜೊಲ್ಲೆ ಮನೆತನ ಯಾವದೇ ಶುಭ ಕಾರ್ಯ ಮಾಡಲು ಕನೇರಿ ಸಿದ್ದಗೀರಿ ಮಠದ ಕಾಡಸಿದ್ದೇಶ್ವರ ಮಠದ ಗುರುಗಳು ಮಾರ್ಗದಲ್ಲಿ ಮಾಲಾಗುತ್ತದೆ ಎಂದು ನುಡಿದರು.

    ಈ ಆಸ್ಪತ್ರೆಗಾಗಿ ಈಗಾಗಲೇ 4.5 ಕೋಟಿ ಕಟ್ಟಡ ಖರ್ಚು ಮಾಡಲಾಗಿದ್ದು, ಯಂತ್ರೋಪಕರಣಗಳನ್ನು ಕೆಲವು ಧಾನಿಗಳು ನೀಡಲು ಮುಂದೆ ಬಂದಿದ್ದಾರೆ. ಬಂಜೇತನದಿಂದ ನೊಂದ ಬಂದ ಬಡವರಿಗೆ ಎನಾದರು ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿ ಕೊಡಿಸುತ್ತೇವೆ ಎಂದು ವಿವರಿಸಿದರು. ಮಹಾರಾಷ್ಟ್ರದ ಕನೇರಿ ಮಠ್ಕಕ್ಕೆ ರಾಜ್ಯ ಸರಕಾರದ ಆಯೂಷ್ಯಮಾನ ಇರಬಹುದು, ವಾಜಪೇಯಿ ಯೋಜನೆಯ ನಿಪ್ಪಾಣಿ ಭಾಗದ ಫಲಾನುಭವಿಗಳು ಹೆಚ್ಚಾಗಿ ಮಠದ ಆಸ್ಪತ್ರೆಗೆ ಹೋಗುತ್ತಾರೆ ಎಂದು ನುಡಿದರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಿದ್ದಗೀರಿ ಚಾರಿಟಿ ನಿರ್ದೇಶಕಿ ಡಾ. ವರ್ಷಾ ಪಾಟೀಲ, ಸಿದ್ದಾಪುರ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ