ಮಹಲಿಂಗಪುರ

ಆರ್‌.ಬಿ.ತಿಮ್ಮಾಪುರಗೆ ಸಚಿವ ಸ್ಥಾನ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಆರ್‌.ಬಿ.ತಿಮ್ಮಾಪುರಗೆ ಸಚಿವ ಸ್ಥಾನ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಮಹಾಲಿಂಗಪುರ 31: ನೂತನ ಸರ್ಕಾರದಲ್ಲಿ ಮುಧೋಳ ಶಾಸಕ ಆರ್‌.ಬಿ. ತಿಮ್ಮಾಪುರ ಅವರು ಸಚಿವ ಸ್ಥಾನ ಅಲಂಕರಿಸುತ್ತಿದ್ದಂತೆ ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಆರ್‌.ಬಿ.ತಿಮ್ಮಾಪುರ ಅವರು ಸಚಿವರಾಗುತ್ತಿರುವುದು ಹೆಮ್ಮೆಯ ಸಂಗತಿ. ಪಕ್ಷ ಸಂಘಟನೆಯ ಜತೆಗೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು. 

ಎಚ್‌.ಎ.ಕಡಪಟ್ಟಿ, ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಸಿದ್ದು ಸಾಂಗ್ಲಿಕರ, ಭರಮಪ್ಪ ಹೊಸೂರ, ಈರ​‍್ಪ ಕಿತ್ತೂರ, ಸಿದ್ದಪ್ಪ ದಢೂತಿ, ಶಿವಪ್ಪ ಮಂಟೂರ, ಲಕ್ಕಪ್ಪ ಹಂಚಿನಾಳ, ವೆಂಕಪ್ಪ ಪೂಜಾರಿ, ಬಸವರಾಜ ಗೌರನ್ನವರ, ಚನ್ನಪ್ಪ ಜಾಲಿಕಟ್ಟಿ, ಮಹಾದೇವ ಹಾದಿಮನಿ, ನೀಲಕಂಠ ಸೈದಾಪುರ, ಪಾಂಡು ಸೈದಾಪುರ ಪಾಲ್ಗೊಂಡಿದ್ದರು. 


ಸುದ್ದಿ ಓದಿ