ಮಹಲಿಂಗಪುರ

ರನ್ನ ಬೆಳಗಲಿಯಲ್ಲಿ ಸಚಿವ ತಿಮ್ಮಾಪುರ ಜನಸಂಪರ್ಕ ಸಭೆ

ರನ್ನ ಬೆಳಗಲಿಯಲ್ಲಿ ಸಚಿವ ತಿಮ್ಮಾಪುರ ಜನಸಂಪರ್ಕ ಸಭೆ

ಮಹಾಲಿಂಗಪುರ 14: ಯುವನಿಧಿ ಹೊರತುಪಡಿಸಿ ಕಳೆದ ಚುನಾವಣೆಯಲ್ಲಿ ನೀಡಿದ ಐದು ಭಾಗ್ಯಗಳ ಪೈಕಿ ನಾಲ್ಕು ಭಾಗ್ಯಗಳಾದ ಸ್ತ್ರೀ ಶಕ್ತಿ, ಉಚಿತ ವಿದ್ಯುತ್, ಗೃಹ ಲಕ್ಷ್ಮಿ, ಅನ್ನಭಾಗ್ಯ, ಭರವಸೆಗಳನ್ನೆಲ್ಲವುಗಳನ್ನು ಈಡೇರಿಸಿದ ಕಾಂಗ್ರೆಸ್ ಪ್ರಾಮಾಣಿಕ ಪಕ್ಷವೆಂದು ಸಾಭಿತುಪಡಿಸಿದೆ ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್ ಬಿ.ತಿಮ್ಮಾಪೂರ ಹೇಳಿದರು. 

ಮುಧೋಳ ತಾಲೂಕಿನ ಸಮೀಪದ ರನ್ನ ಬೆಳಗಲಿ ಪಟ್ಟಣದ ಮಹಾಲಿಂಗೇಶ್ವರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನಾನು, ಅಧಿಕಾರಿಗಳು ನಿಮ್ಮ ಸೇವಕರು. 24-7 ನಿರಂತರ ಸೇವೆಗೆ ಅನಿಯಾಗಿದ್ದೇವೆ. ಪಟ್ಟಣದ ಹಾಗೂ ನಿಮಗೇನಾದರೂ ತೊಂದರೆಯಾಗಿದ್ದರೆ ತಿಳಿಸಿ ಪರಿಹಾರಕ್ಕಾಗಿ ಸದಾ ಸಿದ್ಧರಿದ್ದೇವೆ ಎಂದರು. 

ಈ ಕಾರ್ಯಕ್ರಮ ವೇದಿಕೆ ಮುಂಭಾಗದಲ್ಲಿ ತಾಲೂಕಾಡಳಿತದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಸಚಿವರು ಸೂಚಿಸಿದ ಎಲ್ಲ ಕೆಲಸ ಕಾರ್ಯಗಳಿಗೆ ಸ್ಥಳದಲ್ಲಿಯೇ ಸಮ್ಮತಿ ಸೂಚಿಸಿದರು. ರನ್ನಭವನ ಹಾಗೂ ರನ್ನ ವೈಭವಕ್ಕೆ ಹಂತ ಹಂತವಾಗಿ ಕಾರ್ಯ ಕೈಗೊಳ್ಳಲಾಗುವುದು ಎಂದಾಗ ಸೇರಿದ ಜನತೆ ಜೋರಾದ ಚಪ್ಪಾಳೆ ಮೂಲಕ ಸಚಿವರ ಮಾತಿಗೆ ಹರ್ಷ ವ್ಯಕ್ತಪಡಿಸಿದರು. 

ಪದವಿ ಕಾಲೇಜು, ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ, ಬಂದಲಕ್ಷ್ಮಿ ದೇವಸ್ಥಾನ ಅಂದಕ್ಕಾಗಿ, ಪಟ್ಟಣದ ಉಳಿದ ರಸ್ತೆಗಳ ಕಾಮಗಾರಿ, ಅಂಬೇಡ್ಕರ ಪ್ರತಿಮೆ, ಕಿನಾಲ್ ರಸ್ತೆಗಳ ದುರುಸ್ತಿ ಕಾರ್ಯ, ಅರ್ಧಕ್ಕೆ ನಿಂತಿರುವ ಕೆಲಸಗಳ ಅವಲೋಕನ, ಬೆಳಗಲಿ - ನಾವಲಗಿ ರಸ್ತೆ ನಿರ್ಮಾಣ, ಮಹಿಳಾ ಭವನ, ಸಮುದಾಯ ಭವನ, ಪಪಂ ಜಾಗೆಯಲ್ಲಿ ಮಳಿಗೆಗಳ ನಿರ್ಮಾಣ, ಕೆರೆ ಆವರಣ ವಿಹಾರ ತಾಣಕ್ಕೆ ಅನುದಾನ ಇನ್ನೂ ಅನೇಕ ಕಾಮಗಾರಿಗಳಿಗೆ ಸಚಿವರಿಂದ ಉತ್ತಮ ಸ್ಪಂದನೆ ದೊರೆಕಿತು. ಇನ್ನೂ ಹಲವಾರು ಕಾರ್ಯಗಳಿಗೆ ಕಾಲಾಂತರದಲ್ಲಿ ಕೆಲಸ ಕೈಗೊಳ್ಳುವ ಭರವಸೆ ನೀಡಿದರು. 

ಕಾಂಗ್ರೆಸ್ ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಅಶೋಕ ಕಿವಡಿ, ಪ್ರವೀಣ ಪಾಟೀಲ, ಅಂಕಣವಾಡಿ, ಮಂಜುನಾಥ, ಈರ​‍್ಪ ಕಿತ್ತೂರ, ಸದಾಶಿವ, ದುಂಡಪ್ಪ ಭರಮನಿ, ಸಂಗಪ್ಪ ಅಮಾತಿ, ಮಹಾದೇವ ಮುರನಾಳ ಹಾಗೂ ವೇದಿಕೆಯಲ್ಲಿ ಪ.ಪಂ. ಸದಸ್ಯರು, ಪಟ್ಟಣದ ಹಿರಿಯರು, ಕಾಂಗ್ರೆಸ್ ಮುಖಂಡರು ಆಸೀನರಾಗಿದ್ದು, ಕಾರ್ಯ ಕಲಾಪದ ಸಂಪೂರ್ಣ ಜವಾಬ್ದಾರಿಯನ್ನು ತಾಲೂಕಾಡಳಿತ ಮತ್ತು ಸ್ಥಳೀಯ ಪಪಂ ವಹಿಸಿಕ್ಕೊಂಡಿದ್ದವು. 

ದಂಡಾಧಿಕಾರಿ ವಿನೋದ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಮದೇವ ಲಮಾಣಿ ಸ್ವಾಗತಿಸಿ, ಶಿಕ್ಷಕ ಆರ್‌.ಎ.ತಳವಾರ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ