ಕಾರವಾರ

ಕಾಳಿ ಸೇತುವೆ ಪರೀಶೀಲಿಸಿದ ಸಚಿವ ಸವದಿ; ಅಸಮಾಧಾನ ಇಲ್ಲ ಎಂದ ಸ್ಪಷ್ಟನೆ

ಕಾಳಿ ಸೇತುವೆ ಪರೀಶೀಲಿಸಿದ ಸಚಿವ ಸವದಿ; ಅಸಮಾಧಾನ ಇಲ್ಲ ಎಂದ ಸ್ಪಷ್ಟನೆ

ಕಾರವಾರ 6: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಗುರುವಾರ ಕಾರವಾರಕ್ಕೆ ಆಗಮಿಸಿ ನಿರ್ಮಾಣ ಹಂತದಲ್ಲಿರುವ ಕಾಳಿ ಸೇತುವೆಯನ್ನು ಪರೀಶೀಲಿಸಿದರು. ಸೇತುವೆ ಕುಸಿತದ ಕಾರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಪಕ್ಷದ ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಮುಖ್ಯಮಂತ್ರಿ ತಾತ್ಕಾಲಿಕವಾಗಿ ನೀಡಿದ್ದು, ಮುಂದಿನ ದಿನಗಳಲ್ಲಿ ಯಾವ ಜಿಲ್ಲೆಗೆ ಜವಾಬ್ದಾರಿ ನೀಡಿದರೂ ಸಮರ​‍್ಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಸಚಿವರಾಗಿ ಹಾಗೂ ಹಲವು ಜಿಲ್ಲೆಗಳ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವವಿದೆ ಎಂದರು. ಬಾಗಲಕೋಟೆ, ಗದಗ, ರಾಯಚೂರು ಜಿಲ್ಲೆಗಳ ಉಸ್ತುವಾರಿ ವಹಿಸಲು ಅವಕಾಶವಿದ್ದರೂ, ಮುಖ್ಯಮಂತ್ರಿ ನೀಡುವ ಜವಾಬ್ದಾರಿಯನ್ನು ಸ್ವೀಕರಿಸುವುದಾಗಿ ತಿಳಿಸಿದರು.

ಸ್ಪೀಕರ್ ಹೆಸರನ್ನು ಲೆಟರ್ಹೆಡ್ನಲ್ಲಿ ಪ್ರಕಟಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಪೀಕರ್ ಹುದ್ದೆಗೆ ಗೌರವ ಸೂಚಿಸುವುದು ಎಲ್ಲ ಪಕ್ಷಗಳಲ್ಲೂ ಇರುವ ಸಂಪ್ರದಾಯ ಎಂದರು. ಜಿಲ್ಲೆಯ ಅನಾವೃಷ್ಟಿ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ ಸಚಿವರು, ಬಳಿಕ ಕಡಲ ಕೊರೆತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಹೇಳಿದರು. ಶುಕ್ರವಾರ ಶಿರಸಿ, ಮುಂಡಗೋಡು ಹಾಗೂ ಹಳಿಯಾಳ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಪರೀಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಸಿಇಒ ದೀಲೀಷ್ ಶಶಿ ಉಪಸ್ಥಿತರಿದ್ದರು. 


ಸುದ್ದಿ ಓದಿ