ಸಚಿವ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬ ಆಚರಣೆ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ 27: ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ, ಅಧಿಕಾರ ನೀಡುವ ಏಕೈಕ ಪಕ್ಷ ಬಿಜೆಪಿ ಪಕ್ಷವಾಗಿದ್ದು, ತಳಮಟ್ಟದಿಂದ ಬೆಳೆದು ನಿಷ್ಟಾವಂತ ಕಾರ್ಯಕರ್ತರಾಗಿ ಸದ್ಯ ಕೆಂದ್ರ ಸರ್ಕಾರದ ಹುನ್ನತ ಹುದ್ದೆಯಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ 60ನೇ ಹುಟ್ಟು ಹಬ್ಬ ಆಚರಣೆಯನ್ನು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನರಹರಿ ಕಟ್ಟಿ ಹೇಳಿದರು.
ಪಟ್ಟಣದ ಸಿಎಂ ಬೊಮ್ಮಾಯಿಯವರ ನಿವಾಸದ ಸಭಾಭವನದಲ್ಲಿ ಬಿಜೆಪಿ ಮಂಡಳದ ವತಿಯಿಂದ ಹಮ್ಮಿಕೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ 60 ನೇ ಹುಟ್ಟುಹಬ್ಬ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘದ ಆರೈಕೆಯಲ್ಲಿ ಬೆಳೆದು ಈದ್ಗಾ ಹೊರಾಟದ ಮುಖಾಂತರ ಹಿಂದುತ್ವದ ಪತಾಕೆ ಹಾರಿಸಿ ಸಾರ್ವಜನಿಕ ಜೀವನಕ್ಕೆ ಪಾದಾರೆ್ಣ ಮಾಡಿ ದೇಶ ಮೊದಲು ಎನ್ನುತ್ತಾ ಭಾ.ಜ.ಪದ ನಿಷ್ಠಾವಂತ ಕಾರ್ಯಕರ್ತರಾಗಿ, ಜನಸೇವಕರಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 4 ಬಾರಿಗೆ ಜಯದ ಮಾಲೆ ಧರಿಸಿ, ಸೋಲಿಲ್ಲದ ಸರದಾರರೆಂದು ಖ್ಯಾತಿ ಪಡೆದ, ಕ್ಷೇತ್ರದ ಅಭಿವೃದ್ದಿ ಹರಿಕಾರರಾಗಿ ಸಿಎಂ ಬೊಮ್ಮಾಯಿಯವರು ಮತ್ತು ಜೋಷಿಯವರು ಜೊಡೆತ್ತಿನಂತೆ ಕ್ಷೇತ್ರದ ಕಾರ್ಯಕರ್ತರ ಮತ್ತು ಜನರ ಪ್ರೀತಿಯ ಜನನಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಅದ್ಯಕ್ಷತೆವಹಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಮನೆಯವರಂತೆ ಕಾಳಜಿ ತೊರಿಸಿ ಗುಣಮುಖರಾಗಲು ಮುತುವರ್ಜಿ ವಹಿಸಿದ ಆಶಾ ಕಾರ್ಯಕರ್ತೆಯರು ಮತ್ತು ನಗರ ಸ್ವಚ್ಚತೆಗೆ ಜೊತೆ ಕೋವಿಡ್ನಿಂದ ಮೃತಪಟ್ಟವರಿಗೆ ಬೇದ ಭಾವ ತೋರದೆ ಜೀವದ ಹಂಗು ತೊರೆದು ಅತೀವ ದೈರ್ಯದಿಂದ ಸ್ಮಶಾನದಲ್ಲಿ ಮಣ್ಣು ಮಾಡಿದ ಪುರಸಭೆ ಪೌರಕಾರ್ಮಿಕರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದು ತಿಳಿದವರು ಪ್ರಲ್ಹಾದ ಜೋಶಿಯವರು ಎಂದರು.
ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ ಭಾರತೀಯ ಜನತಾ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ 4 ಬಾರಿ ಸಂಸದರಾಗಿ, ರಾಜ್ಯ ಅಧ್ಯಕ್ಷರಾಗಿ, ಕೇಂದ್ರ ಸಚಿವನಾಗಿದ್ದು ಅದು ಭಾಜಪದಲ್ಲಿ ಮಾತ್ರ ಅಲ್ಲದೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವೀರ ಹೋರಾಟ ಮಾಡಿದ್ದು ಇಂದು ಅವರ ಉನ್ನತ ಮಟ್ಟದ ಶ್ರೇಣಿಗೆ ಕಾರಣ ಎಂದರು.
ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಸಮಾಜದ ಅಭಿವೃದ್ಧಿ, ಶಾಲೆಯ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮುಖಾಂತರ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಇಂದು ಜನನಾಯಕರಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಡಾ. ಮಲ್ಲೇಶಪ್ಪ ಹರಿಜನ ಮಾತನಾಡಿ ರಾಜ್ಯ ಹಾಗೂ ದೇಶಗಳಲ್ಲಿ ಭಾರತೀಯ ಜನತಾ ಪಕ್ಷ ಬೆಳೆದು ಬಂದ ಬಗ್ಗೆ ಹಾಗೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ ಧ್ವಜವನ್ನು ಹಾರಿಸಿದ ದೀಮಂತ ಹೋರಾಟಗಾರ ಪ್ರಲ್ಹಾದ ಜೋಷಿ ಎಂದರು.
ಬಸವರಾಜ ನಾರಾಯಣಪೂರ ಮಾತನಾಡಿದರು, ಆಶಾ ಕಾರ್ಯಕರ್ತೆ ವಿನೋದಾ ಬಡಿಗೇರ ಮಾತನಾಡಿ ನಮ್ಮನ್ನು ಗುರುತಿಸಿ ನಮಗೆ ಸನ್ಮಾನ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ ಹಾಗೂ ನಮ್ಮ ಗೌರವವನ್ನು ಹೆಚ್ಚಿಸುತ್ತದೆ. ಪೌರಕಾರ್ಮಿಕ ನಾಗರಾಜ ಮಾತನಾಡಿದರು. ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ, ಕೆ.ಎಂ.ಎಫ್ ನಿರ್ದೇಶಕ ಬಸವನಗೌಡ್ರ ಮೇಲಿನಮನಿ, ದೇವಣ್ಣಾ ಚಾಕಲಬ್ಬಿ, ಸುರೇಶಗೌಡ ಪಾಟೀಲ, ರೇಣುಕನಗೌಡ ಪಾಟೀಲ, ಶರೀಫಸಾಬ ನದಾಫ, ಬಸನಗೌಡ್ರ ರಾಮನಗೌಡ್ರ, ಹನುಮಂತ ಗುಳೇದ, ಹನುಮಂತಪ್ಪ ಮಾದರ, ಕಾಶೀನಾಥ್ ಕಳ್ಳೀಮನಿ, ಭಾಜಪ ಮಹಿಳಾ ಕಾರ್ಯದರ್ಶಿ ಸಂಜನಾ ರಾಯ್ಕರ, ರತ್ನಕ್ಕಾ ಬನ್ನಿಕೊಪ್ಪ, ನಾಸೀರ ಅಹ್ಮದ ಹಂಡೆವಾಲೆ, ರಾಜು ಟೋಪಣ್ಣವರ, ಮಲ್ಲೇಶಣ್ಣಾ ಮೂಲಿಮನಿ ಸೇರಿದಂತೆ ಆಶಾಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ ಸ್ವಾಗತಿಸಿದರು, ಚೇತನ ಕಲಾಲ ಕಾರ್ಯಕ್ರಮ ನಿರ್ವಹಿಸಿದರು.