ಮಹಲಿಂಗಪುರ

ಸಂಗೀತ ನೃತ್ಯದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ: ಎಸ್‌.ಐ.ಕುಂದಗೋಳ

ಸಂಗೀತ ನೃತ್ಯದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ: ಎಸ್‌.ಐ.ಕುಂದಗೋಳ

ಮಹಾಲಿಂಗಪುರ 30: ಬಿಡುವಿಲ್ಲದ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾನಸಿಕ ವಿಶ್ರಾಂತಿಗಾಗಿ ಮನೋರಂಜನೆ ಬಹಳ ಮುಖ್ಯ, ಸಂಗೀತ ಮತ್ತು ನೃತ್ಯದಲ್ಲಿ ತಲ್ಲೀನರಾದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ಪ್ರಾಂಶುಪಾಲ ಎಸ್‌.ಐ. ಕುಂದಗೋಳ ಹೇಳಿದರು. 

ಸ್ಥಳೀಯ ಕೆ.ಎಲ್‌.ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗದಿಂದ ಹಮ್ಮಿಕೊಂಡಿದ್ದ ಆಕೃತಿ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಕಮಕೇರಿಯ ಬೃಂದಾವನ ಗುರುಕುಲದ ಗುರೂಜಿ ಗೋಪೇಶ್ವರ ದಾಸ ಕಮಾಟಿ ಮಾತನಾಡಿ,  ಮನಸ್ಸಿನ  ನಿಗ್ರಹದಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಕೊಳ್ಳಬಹುದು ಹಾಗೂ ಕಡಿಮೆ ಅವಧಿಯಲ್ಲಿ  ಹೆಚ್ಚು ಜ್ಙಾನ ಸಂಪಾದನೆ ಸಾಧ್ಯ ಎಂದರು. 

ಕಂಪ್ಯೂಟರ್ ಸೈನ್ಸ್‌ ವಿಭಾಗದ ಮುಖ್ಯಸ್ಥೆ ಸವಿತಾ ಗೊಂದಿ ಮಾತನಾಡಿ, 2023ರ ಜಿ-20 ಗೋಲ್‌ಗಳ ಮಹತ್ವದ ಬಗ್ಗೆ ತಿಳಿಸಿದರು.   

ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಹ್ಯಾಕತಾನ್ ಸ್ಫರ್ಧೆಯಲ್ಲಿ ಮಹಾಲಿಂಗಪುರ ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ ಅಂಬಿ ಮತ್ತು ಚೇತನ ಮಠಪತಿ ಪ್ರಥಮ ಸ್ಥಾನ,. ತಾಂತ್ರಿಕ ಪೇಪರ್ ಮಂಡನೆಯಲ್ಲಿ ಮಹಾಲಿಂಗಪುರ ಮೆಕ್ಯಾನಿಕಲ್ ವಿಭಾಗದ ವಿನಾಯಕ ಬಡಿಗೇರ ಪ್ರಥಮ ಸ್ಥಾನ, ಬಾಗಲಕೋಟೆಯ ಬಿವಿವಿಎಸ್ ಪಾಲಿಟೆಕ್ನಿಕ್  ವಿದ್ಯಾರ್ಥಿ ಪ್ರಶಾಂತ ಬೋಸ್ಲೆ  ದ್ವಿತೀಯ ಸ್ಥಾನ ಹಾಗೂ ಬಾಗಲಕೋಟೆಯ ಬಿವಿವಿಎಸ್ ಪಾಲಿಟೆಕ್ನಿಕ್‌  ವಿದ್ಯಾರ್ಥಿ ವೆಂಕಟೇಶ ಇಮ್ಮನ್ನವರ್ ಹಾಗೂ ಮುಧೋಳ ಸರಕಾರಿ ಪಾಲಿಟೆಕ್ನಿಕ್‌ನ ಸಂಗಮೇಶ ತೋಟಗೇರೆ ತೃತೀಯ ಸ್ಥಾನವನ್ನು ಪಡೆದರು.   

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಬೆಂಗಳೂರಿನ ಕಾಗ್ನಿಜೆಂಟ್ ಟೆಕ್ನಾಲಜಿ ಉದ್ಯೋಗಿ ಬಾಳಪ್ಪ ಬಿಳಕುರಿ  ಹಾಗೂ ಜಿಪಿಸಿಎಲ್ ಉದ್ಯೋಗಿ ಪ್ರಕಾಶ ಬಕ್ಕನ್ನವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ವಾಣಿ ಮುಂಗರವಾಡಿ ವಿಭಾಗದ ವಾರ್ಷಿಕ ವರದಿಯನ್ನ ಮಂಡಿಸಿದರು. ಸುಭಾಷ ಮೂಶಿಯವರು ಹಾಗೂ ಗಣ್ಯರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. 

 ಕಾಲೇಜು ಸಿಬ್ಬಂದಿ ಅನಿಕೇತ ತಾರದಾಳೆ,  ಚೈತ್ರಾ ಹುದ್ದಾರ, ವರ್ಷಾ ಭಜಂತ್ರಿ, ಸುಮನ ಖೋತ, ಉಮೇಶ ಹಾದಿಮನಿ, ವಂದನಾ ಪಸಾರ, ಮಿನಾಜ ಅತ್ತಾರ, ಈಶ್ವರ ಹೂಲಿ, ಇದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಕಲಾಲ ಹಾಗೂ ಹರಣಿ ಪಟ್ಟಣಶೆಟ್ಟಿ ಸ್ವಾಗತಿಸಿ, ಮಯೂರಿ ಮಾದರ ಪರಿಚಯಿಸಿ, ಚೈತ್ರಾ ಹುದ್ದಾರ ವಂದಿಸಿ, ಪವನ ಸೊನ್ನದ ಕಾರ್ಯಕ್ರಮ  ನಿರ್ವಹಿಸಿದರು.  


. 


ಸುದ್ದಿ ಓದಿ